ABC

Thursday, 14 February 2019

ಡಿಕೆಶಿ, ಹೆಚ್‌ಡಿಕೆ. ಮಾತಾಡಿರುವ ಸಿಡಿ ಇದ್ದರೆ ತಾಕತ್ತಿದ್ದರೆ ಸಿಡಿ ಬಿಡುಗಡೆಗೊಳಿಸಿ ಶಾಸಕ ಎ.ಎಸ್ ಜಯರಾಮ್ ಗೆ: ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಸವಾಲ್.

ತುರುವೇಕೆರೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಅವರೂ ಸಹ ನನ್ನೊಂದಿಗೆ ಮಾತನಾಡಿರುವ ಸಿಡಿ ಇದೆ ಎಂದು ಶಾಸಕ ಎ.ಎಸ್.ಜಯರಾಮ್ ಅವರು ಗ್ರಾಮವೊಂದರಲ್ಲಿ ಹೇಳಿರುವುದಾಗಿ ಆರೋಪಿಸಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಶಾಸಕರ ಬಳಿ ನಿಜವಾಗಿಯೂ ಸಿಡಿ ಇದ್ದಲ್ಲಿ ತಾಕತ್ತಿದ್ದರೆ ಬಿಡುಗಡೆಗೊಳಿಸಲಿ, ಸಿಬಿಐ, ಎಸಿಬಿಗೆ ಸಿಡಿ ನೀಡಿ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಆಪರೇಷನ್ ಕಮಲದ ರೀತಿ ಆಪರೇಷನ್ ಮಾಡುವ ಕಾರ್ಯವನ್ನು ಜೆಡಿಎಸ್ ಪಕ್ಷ ಮಾಡಿಲ್ಲ, ಮಾಡುವುದೂ ಇಲ್ಲ. ಆಪರೇಷನ್ ಮಾಡಲು ಹೋಗಿ ಸ್ವತಃ ಆಪರೇಷನ್ ಮಾಡಿಕೊಂಡಿರುವ ಬಿಜೆಪಿಯವರ ಆಟೋಟವನ್ನು ರಾಜ್ಯದ ಜನತೆ ನೋಡಿದ್ದಾರೆ. ಶಾಸಕ ಎ.ಎಸ್. ಜಯರಾಮ್ ಅವರು ತಮ್ಮೊಂದಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಅವರು ಮಾತನಾಡಿರುವ ಸಿಡಿ ನನ್ನ ಬಳಿ ಇದೆ ಎಂದು ಗ್ರಾಮವೊಂದರಲ್ಲಿ ಮಾತನಾಡಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಸಿಡಿ ಇರುವುದೇ ನಿಜವಾದಲ್ಲಿ ತಾಕತ್ತಿದ್ದರೆ ಶಾಸಕರು ಬಿಡುಗಡೆಗೊಳಿಸಲಿ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ವಯಸ್ಸಿಗೆ ಅನುಗುಣವಾಗಿ ರಾಜಕಾರಣ ಮಾಡುತ್ತಿಲ್ಲ. ಆತುರಾತುರವಾಗಿ ಅಧಿಕಾರ ಹಿಡಿಯುವ ಹಪಹಪಿಯಿಂದ ದಶಕಗಳ ರಾಜಕಾರಣದ ಅನುಭವವಿದ್ದು ಸಹ ಸದನದಲ್ಲಿ ತಾನೇ ಪೇಚಿಗೆ ಸಿಲುಕಿ ಒದ್ದಾಡುತ್ತಿರುವುದನ್ನು ನಾಡಿನ ಜನ ನೋಡುತ್ತಿದ್ದಾರೆ. ಇನ್ನು ಮುಂದಾದರೂ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ, ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಮುಂದಾಗದೆ ಗೌರವಯುತವಾಗಿ ನಡೆದುಕೊಳ್ಳಲಿ ಎಂದು ಸಲಹೆ ಮಾಡಿದರು.
ಶಾಸಕರಿಗೆ ರಾಜಕೀಯ ಅಸ್ಥಿರತೆ ಕಾಡುತ್ತಿದೆ ಕ್ಷೇತ್ರದ ಶಾಸಕ ಎ.ಎಸ್.ಜಯರಾಮ್ ಅವರು ಅಗ್ಗದ ಪ್ರಚಾರಕ್ಕೆ ಮುಂದಾಗುತ್ತಿದ್ದಾರೆ. ಸರ್ಕಾರದಿಂದ ಇದುವರೆವಿಗೂ ಯಾವುದೇ ಅನುದಾನ ಕ್ಷೇತ್ರಕ್ಕೆ ಬಿಡುಗಡೆಯಾಗಿಲ್ಲ. ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ದಿ ಮಾಡುತ್ತೇನೆಂದು ಜನರಲ್ಲಿ ಹೇಳಲಿ. ಅದನ್ನು ಬಿಟ್ಟು ಕಳೆದ ಅವಧಿಯಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಹೋರಾಟ ನಡೆಸಿ ಮಂಜೂರು ಮಾಡಿಸಿದ ಕಾಮಗಾರಿಗಳನ್ನು ನಾನು ತಂದಿದ್ದು ಹೇಳಿಕೊಳ್ಳುತ್ತಿರುವುದು ಶಾಸಕರಿಗೆ ರಾಜಕೀಯ ಅಸ್ಥಿರತೆ ಕಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಟೀಕಿಸಿದರು.
ಶಾಸಕರ ರಾಜಕೀಯ ದಿವಾಳಿತನಕ್ಕೆ ಸಾಕ್ಷಿ. ತಾಲ್ಲೂಕಿನ ವಡಕೇಘಟ್ಟ ರಸ್ತೆ ಡಾಂಬರೀಕರಣ ಮಾಡಲು ೨ ವರ್ಷದ ಹಿಂದೆಯೇ ನಬಾರ್ಡ್ ಯೋಜನೆಯಲ್ಲಿ ೯೫ ಲಕ್ಷ ಮಂಜೂರು ಮಾಡಿಸಿದ್ದೇನೆ. ವಡಕೇಘಟ್ಟದಿಂದ ಬಿ.ಪುರ ಹಾಗೂ ತಾಲೂಕಿನ ಗಡಿವರೆಗೆ ರಸ್ತೆ ಅಭಿವೃದ್ದಿ ಡಾಂಬರೀಕರಣಕ್ಕೆ ಎರಡೂವರೆ ಕೋಟಿ ಅನುದಾನವನ್ನು ಸಿ.ಆರ್.ಎಫ್ ನಿಧಿಯಲ್ಲಿ ಒದಗಿಸಿದ್ದೇನೆ. ಇವುಗಳ ಅರಿವಿಲ್ಲದೆ ಕೆಲಸ ಮುಗಿದು ೨ ವರ್ಷವಾದ ನಂತರ ಪುನಃ ಶಾಸಕರು ಪೂಜೆ ಸಲ್ಲಿಸಿದ್ದಾರೆ. ಯಾವ ಯೋಜನೆ, ಅನುದಾನ ಯಾವ ವರ್ಷದಲ್ಲಿ ಮಂಜೂರಾಗಿದೆ. ಟೆಂಡರ್ ಯಾವಾಗ ಆಗಿದೆ. ಕೆಲಸ ಯಾವಾಗ ಮುಗಿದಿದೆ ಎಂಬುದರ ಬಗ್ಗೆ ಶಾಸಕರಿಗೆ ಗೊತ್ತಿಲ್ಲ. ಸತ್ಯವನ್ನು ಒಪ್ಪಿಕೊಳ್ಳಲಿ. ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ತನ್ನದೇ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಶಾಸಕರ ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಎಂಎಸ್‌ ಉಮೇಶ್ ಅವರಿಗೆ ರಾಜಕೀಯದ ಅರಿವಿಲ್ಲ
ನನ್ನ ಅವಧಿಯಲ್ಲಿ ಚಿಕ್ಕೋನಹಳ್ಳಿ ಗೇಟ್‌ನಿಂದ ಬೆಂಕಿಕೆರೆ ರಸ್ತೆಗೆ ೨ ಕೋಟಿ ರೂ ಮಂಜೂರು ಮಾಡಿಸಿದ್ದೇನೆ. ಈಗ ಟೆಂಡರ್ ಆಗಿದೆ. ಈ ಬಗ್ಗೆ ರಾಜಕಾರಣದ ಅರಿವಿಲ್ಲದೆ ಬಿಎಂಎಸ್ ಉಮೇಶ್ ಅವರು ಶಾಸಕ ಎ.ಎಸ್.ಜಯರಾಮ್ ಮಾಡಿಸಿದ್ದು ಎಂದು ಹೇಳಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಒಬ್ಬೆನಾಗಸಂದ್ರ ಸೋಮಶೇಖರ್, ಮಂಗಿಕುಪ್ಪೆ ಬಸವರಾಜ್, ಶಿವರಾಮ್, ಸಂಗಲಾಪುರ ವಾಸು ಮುಂತಾದವರಿದ್ದರು...

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...