ABC

Sunday, 3 February 2019

ನಮ್ಮ ಹೆಮ್ಮೆಯ ದೇವೇಗೌಡರು ಪ್ರಧಾನಿಯಾಗಿ ಕರ್ನಾಟಕಕ್ಕೆ ಕೊಟ್ಟ ಉಡುಗೊರೆಯ ಪಟ್ಟಿ ಇಲ್ಲಿದೆ ನೋಡಿ:


ನಮ್ಮ ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ರವರು ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ 11 ತಿಂಗಳಲ್ಲೇ ಅತಿ ಹೆಚ್ಚು ಕೆಲಸ ಮಾಡಿದ ಕೀರ್ತಿ ಹೆಚ್ ಡಿ ದೇವೇಗೌಡರಿಗೆ ಸಲ್ಲಬೇಕು. ಅದರಲ್ಲೂ ಕರ್ನಾಟಕಕ್ಕೆ ಇವರ ಕೊಡುಗೆ ಅಪಾರವಾದದ್ದು, ದೇವೇಗೌಡರು ಕನ್ನಡ, ಕನ್ನಡಿಗ ಹಾಗು ಕರ್ನಾಟಕಕ್ಕೆ ತಮ್ಮದೇ ಆದ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡು ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ದೇವೇಗೌಡರು ಪ್ರಧಾನಿಯಾಗಿ ಕರ್ನಾಟಕಕ್ಕೆ ಕೊಟ್ಟ ಉಡುಗೊರೆಯ ಪಟ್ಟಿ ಇಲ್ಲಿದೆ ನೋಡಿ:

1. ಪ್ರಥಮವಾಗಿ ಅಲಮಟ್ಟಿ ಡ್ಯಾಮ್ ನ ಎತ್ತರವನ್ನು ಚಂದ್ರಬಾಬು ನಾಯ್ಡುವಿನ ವಿರೋಧದ ನಡುವೆಯು 524 ಮೀಟರಿಗೆ ಏರಿಸುವ ವಿನ್ಯಾಸಕ್ಕೆ ಅಂಗೀಕಾರ ನೀಡಿದರು.
2. ರಾಜ್ಯಗಳ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ನೀಡಬಾರದೆನ್ನುವ “ಗಾಡ್ಗಿಲ್ ಫಾರ್ಮುಲ”ವನ್ನು ಮಾರ್ಪಡಿಸಿ ಆಲಮಟ್ಟಿಯಂತಹ ಯೋಜನೆಗಳಿಗೆ ಸಾವಿರ ಕೋಟಿ ಅನುದಾನ ನೀಡಿದರು.
3. ನಷ್ಟದಲ್ಲಿದ್ದ ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಭದ್ರಾವತಿ ಉಕ್ಕು ಕಾರ್ಖಾನೆಗೆ ಬೀಗ ಮುದ್ರೆ ತಪ್ಪಿಸಲು 600ಕೋಟಿ ಅನುದಾನ ನೀಡಿ SAILನ ಸುಪರ್ದಿಗೆ ಒಪ್ಪಿಸಿದರು.

4. ಬೆಂಗಳೂರು ಮತ್ತು ಮೈಸೂರಿಗೆ ನ್ಯಾಷನಲ್ ಗೇಮ್ ವಿಲೇಜ್ ಸ್ಥಾಪಿಸಿ ನ್ಯಾಷನಲ್ ಗೇಮ್ ನಡೆಸಿದರು.
5. ಬೆಂಗಳೂರಿನ ಎಲ್ಲಾ ಭಾಗಕ್ಕೂ ಕುಡಿಯುವ ನೀರಿನ ಅವಶ್ಯಕತೆ ಇರುವುದನ್ನು ಮನಗಂಡಿದ್ದ ಗೌಡರು ತಮಿಳುನಾಡಿನ ವಿರೋಧದ ನಡುವೆಯು 9ಟಿಎಂಸಿ ನೀರು ಸಿಗುವಂತೆ ಮಾಡಿದರು, ಅದನ್ನೇ ಬೆಂಗಳೂರಿನ ಹೊರವಲಯದ ಜನ ಈಗ ಕುಡಿಯುತ್ತಿರುವುದು.
6. ಬೆಂಗಳೂರಿನ ಬೆಳವಣಿಗೆಗೆ ರಸ್ತೆಗಳ ವಿಸ್ತೀರ್ಣ ಅನಿವಾರ್ಯವಾಗಿತ್ತು, ಆದರೆ ಆ ಜಾಗವೆಲ್ಲಾ ಭಾರತೀಯ ಸೇನೆಗೆ ಸೇರಿದ್ದ ಕಾರಣ ಕೇಂದ್ರ ಸರ್ಕಾರದೊಂದಿಗೆ ಏನೇ ವಿನಂತಿಗಳು ನಡೆದಿದ್ದರು 15ವರ್ಷಗಳಿಂದ ಸಾಧ್ಯವಾಗಿರಲಿಲ್ಲ. ಆದರೆ ಗೌಡರು ಸೇನೆಗೆ ಸೇರಿದ್ದ 85 ಎಕರೆ ಜಾಗವನ್ನು ಬಿಡಿಎಗೆ ವರ್ಗಾವಣೆ ಮಾಡಿ ಇಂದಿನ ಹಳೆ ವಿಮಾನ ರಸ್ತೆ, ಸಿವಿ ರಾಮನ್ ರಸ್ತೆ, ಹಲಸೂರು ಕೆರೆ ರಸ್ತೆ, ಕೋರಮಂಗಲ ರಸ್ತೆಗಳು ನಿರ್ಮಾಣವಾಗಿ ರಸ್ತೆ ಸಂಚಾರ ಸುಗುಮವಾಯಿತು.

7. ಬೆಂಗಳೂರು ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ಮಾಣ ವಾಗುತ್ತಿದ್ದ ಐಟಿ ಪಾರ್ಕ್ ಗಳು ಮುಂದೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಮನಗೊಂಡು ಐಟಿ ಉದ್ಯಮವನ್ನು ಉತ್ತೇಜಿಸಲು ಐಟಿ ಉದ್ಯಮಕ್ಕೆ 10ವರ್ಷ “ಟ್ಯಾಕ್ಸ್ ಹಾಲಿಡೆ” ಘೋಷಿಸಿ ದೇಶದಲ್ಲಿ ಐಟಿ ಕ್ರಾಂತಿಗೆ ಮುನ್ನಡಿ ಬರೆದರು.
8. ಆಗ ನಮ್ಮ ರಾಜ್ಯಕ್ಕೆ ಪ್ರತ್ಯೇಕ ರೈಲ್ವೆವಲಯವಿಲ್ಲದೆ ಉದ್ಯೋಗದಲ್ಲಿ ಮತ್ತು ರೈಲುಗಳ ವಿಚಾರದಲ್ಲಿ ಅನ್ಯಾಯವಾದುದನ್ನು ಮನಗೊಂಡು
ರಾಜ್ಯಕ್ಕೆ ಪ್ರತ್ಯೇಕ ರೈಲ್ವೆವಲಯವನ್ನು ತಂದರು.
9. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸ್ಥಾಪನೆಗೆ ರೂಪುರೇಷೆಗಳನ್ನು ಸಿದ್ಧಪಡಿಸಿ ಅನುಮತಿ ನೀಡಿದರು.
10. ತುಮಕೂರು, ಬಳ್ಳಾರಿ, ಬೆಳಗಾವಿ, ವಿಜಾಪುರ , ಹಾಸನ, ಧಾರವಾಡ, ಶಿವಮೊಗ್ಗ, ಮೈಸೂರು ಮುಂತಾದೆಡೆ 20 ಸಕ್ಕರೆ ಕಾರ್ಖಾನೆಗಳಿಗೆ
ಅನುಮತಿ ನೀಡಿದರು.

ಕೇವಲ 11 ತಿಂಗಳು ಪ್ರಧಾನಿಯಾಗಿದ್ದ ದೇವೇಗೌಡರು ಒಪ್ಪಿಗೆ ಕೊಟ್ಟ ರೈಲ್ವೆ ಯೋಜನೆಗಳಲ್ಲಿ ಇಂದು ನಮ್ಮ ನಾಡಿನಲ್ಲಿ ಓಡಾಡುತ್ತಿರುವ ಅರ್ಧ ರೈಲ್ವೆ ಯೋಜನೆಗಳಿವೆ, ಅವತ್ತು ದೇವೇಗೌಡರು ಜಾರಿಗೊಳಿಸಿದ್ದನ್ನು ಇವತ್ತಿಗೂ ಪೂರ್ಣಗೊಳಿಸಲಾಗಿಲ್ಲವೆoದರೇ ನಿಮಗೆ ಆಶ್ಚರ್ಯವಾಗಬಹುದ.

ಈ ರೀತಿಯಾಗಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಕರ್ನಾಟಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಮತ್ತು ಪ್ರಧಾನಿಯಾಗಿ ಭ್ರಷ್ಟಾಚಾರ ರಹಿತ ಸ್ವಚ್ಚ ಆಡಳಿತ ನೀಡಿ ದೇಶಕ್ಕೆ ತನ್ನದೇ ಆದ ನಿಸ್ವಾರ್ಥ ಸೇವೆಸಲ್ಲಿಸಿದ್ದಾರೆ.

7 comments:

  1. H D ದೇವೇಗೌಡರು 11 ತಿಂಗಳು ಪ್ರಧಾನಿ ಮಂತ್ರಿ ಆದರೂ ನಮ್ಮ ದೇಶಕ್ಕೆ ಉತ್ತಮ ಕೊಡುಗೆ ಕೊಟ್ಟಿದ್ದಾರೆ,

    ReplyDelete
  2. ಗೌಡರು ಅಪ್ಪಾಜಿ ಸೂಪರ್ ಬಿಡಿ ಸರ್

    ReplyDelete

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...