ABC

Sunday, 3 February 2019

ಹನುಮಂತನ ತಂಗಿಗೆ ದೊಡ್ಡ ಕಂಪನಿಯಲ್ಲಿ ಕೆಲಸ ವೇದಿಕೆ ಮೇಲೆ ಕೆಲಸ ಕೊಟ್ಟ ಮಹಾನುಭಾವ.


ಸರಿಗಮಪ ಶೋ ಹಲವಾರು ಭಾವನೆಗಳಿಗೆ ಸಾಕ್ಷಿಯಾಗುತ್ತಿದೆ.. ಹೌದು ಈ ವಾರದ ಸಂಚಿಕೆಯಲ್ಲಿ ಸರಿಗಮಪ ಸ್ಪರ್ಧಿಗಳು ತಮ್ಮ ತಮ್ಮ ಮನೆಯವರ ಜೊತೆ ಹಾಡಬೇಕಿತ್ತು.. ಅದರಂತೆಯೇ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಮನೆಯವರ ಜೊತೆ ಹಾಡಿದರು..
ಆದರೆ ಹನುಮಂತ ಹಾಡಿದ್ದು ತನ್ನ ಮುದ್ದು ತಂಗಿಯ ಜೊತೆಗೆ.. ಹೌದು ತಾನು ಕುರಿಗಾಹಿಯಾಗಿದ್ದರೂ ರೇಡಿಯೋ ಮೂಲಕ ಹಾಡು ಕೇಳಿ ಅದನ್ನು ಕಲಿತು ಇದೀಗ ಇಡೀ ನಾಡೇ ಹನುಮಂತನನ್ನು ಮೆಚ್ಚಿಕೊಂಡಿದೆ.. ಇದೀಗ ದರ್ಶನ್ ಅವರ ಸಿನಿಮಾದಲ್ಲಿಯೂ ಹನುಮಂತನಿಗೆ ಹಾಡಲು ಅವಕಾಶ ಸಿಕ್ಕಿದೆ..

ಇಂದು ನಡೆದ ಸರಿಗಮಪ ದಲ್ಲಿ ಹನುಮಂತ ತನ್ನ ತಂಗಿಯ ಜೊತೆ ಬಡವನ ಮನೆಯಲ್ಲಿ ಹೆಣ್ಣು ಹುಟ್ಟಬಾರದು.. ಹುಟ್ಟಿದರೂ ಹೆತ್ತ ತಾಯಿ ಕಣ್ಣೀರು ಹಾಕಬಾರದು ಎಂದು ಹಾಡಿ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿದರು..

ಇದೇ ಸಂದರ್ಭದಲ್ಲಿ ಹಾಡಿಗೆ ಪ್ರತಿಕ್ರಿಯಿಸಿದ ವಿಜಯ್ ಪ್ರಕಾಶ್ ಅವರು.. ಹನುಮಂತನಂತ ಅಣ್ಣ ಇರುವಾಗ ಹೆಣ್ಣು ಹುಟ್ಟಬಹುದು ಎಂದರು.. ಅಷ್ಟೇ ಅಲ್ಲದೆ.. ಸರಿಗಮಪ ಸೀಸನ್ ನಲ್ಲಿ ವಿಜೇತರಾದವರಿಗೆ ಕಾನ್ಫಿಡೆಂಟ್ ಗ್ರೂಪ್ ಕಡೆಯಿಂದ ಒಂದು ಫ್ಲಾಟ್ ಸಿಗಲಿದೆ.. ಇಂದಿನ ಕಾರ್ಯಕ್ರಮಕ್ಕೆ ಕಾನ್ಫಿಡೆಂಟ್ ಗ್ರೂಪ್ ಕಂಪನಿಯ ಮಾಲಿಕರು ಬಂದಿದ್ದರು.. ಅವರು ಹನುಮಂತಪ್ಪ ಹಾಗೂ ಆತನ ತಂಗಿಯ ಹಾಡನ್ನು ಕೇಳಿ ಮನಸೋತರು..

ಮನಸೋತು ಬಡವರಾದ ಹನುಮಂತ ಹಾಗೂ ಆತನ ತಂಗಿಗೆ ಹಣದ ಬೆಲೆ ಕಟ್ಟಲಿಲ್ಲ.. ಹೌದು.. ಅದರ ಬದಲಾಗಿ ಹನುಮಂತನ ತಂಗಿಯನ್ನು ಏನು ಓದುತ್ತಿದ್ದೀಯಾ ಎಂದು ಕೇಳಿದ್ದಾರೆ.. ಆಕೆ ಬಿಕಾಂ ಎಂದಿದ್ದಾರೆ..‌

ಆ ತಕ್ಷಣ ನೀನು ಬಿ ಕಾಂ ಓದು ಮುಗಿಸಿದ ನಂತರ ನಮ್ಮ ಕಾನ್ಫಿಡೆಂಟ್ ಗ್ರೂಪ್ ಕಂಪನಿಯಲ್ಲಿ ಕೆಲಸ ಕೊಡುತ್ತೇನೆ ಎಂದರು.. ನೆರೆದಿದ್ದವರೆಲ್ಲಾ ಈ ದೊಡ್ಡ ಮನುಷ್ಯರ ನಡೆಗೆ ಎದ್ದು ನಿಂತು ಚಪ್ಪಾಳೆ ತಟ್ಟುವುದರ ಮೂಲಕ ಗೌರವ ಸಲ್ಲಿಸಿದರು.ಬಡವನಾದರೇನು.. ಪ್ರತಿಭೆಗೆ ಬಡತನವುಂಟೇ?? ಎಂಬ ಮಾತು ನೂರಕ್ಕೆ ನೂರು ಸತ್ಯ ಅಲ್ಲವೇ..

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...