ABC

Tuesday, 19 February 2019

ನಾನು ಮಾನವ ಧರ್ಮದ ಪ್ರಕಾರ ನಡೆಯುತ್ತೇನೆ ಕುಂಭಮೇಳದಲ್ಲಿ: ಮುಖ್ಯಮಂತ್ರಿ ಕುಮಾರಸ್ವಾಮಿ.

ಮೈಸೂರು: ಮೈಸೂರಿನ ತಿರುಮಕೂಡಲಿನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಕುಂಭಮೇಳದಲ್ಲಿ ಇಂದು ಸಿಎಂ ಕುಮಾರಸ್ವಾಮಿ ಪುಣ್ಯ ಸಂಪ್ರೋಕ್ಷಣೆ ಮಾಡಿದ್ದಾರೆ.ಪ್ರತಿ ಮೂರು ವರ್ಷಕೊಮ್ಮೆ ನಡೆಯಲಿರುವ ಈ ಮಹಾ  ಯಾತ್ರೆಯಲ್ಲಿ ಸಚಿವ ಜಿ.ಟಿ.ದೇವೇಗೌರು ಕೂಡ ಮಹಾಮಜ್ಜನ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ನಾನೇನು ದೊಡ್ಡ ಧರ್ಮ ಪ್ರಚಾರಕನೂ ಅಲ್ಲ ಧರ್ಮ ರಕ್ಷಕನೂ ಅಲ್ಲ. ಸ್ವಾಮಿಗಳು ಇಲ್ಲಿ ಕುಳಿತಿರೋರು, ಆ ಕೆಲಸವನ್ನು ಮಾಡುತ್ತಾರೆ. ಆದರೆ ನಾನು ಮಾನವ ಧರ್ಮದ ಮೇಲೆ ನಡೆಯುತ್ತಿದ್ದೇನೆ. ನಾನು ಮಂಡ್ಯದ ಬಸ್ ದುರಂತದ ವೇಳೆ ಸ್ಥಳಕ್ಕೆ ಭೇಟಿ ನೀಡಿದೆ.ಅಲ್ಲಿ ಅಮಾಯಕ ಸಣ್ಣ ಮಕ್ಕಳು ಜೀವ ಕಳೆದು ಕೊಂಡಿತ್ತು. ಅಲ್ಲಿನ ಆಕ್ರಂದನ ನೋಡಿ ನನ್ನ ಮನಸಿಗೆ ಅನಿಸಿದ್ದು. ಏಕೆ ದೇವರು ಈ ಜೀವ ಕೊಟ್ಟಿದ್ದು, ಇಷ್ಟು ಬೇಗ ಕಳೆದುಕೊಂಡಿದ್ದು ಅನ್ನೋ ಪ್ರಶ್ನೆ. ಇಂತಹ ಕಾರ್ಯಕ್ರಮಗಳ ಮೂಲಕ ಎಲ್ಲರು ಒಂದು ಕಡೆ ಸೇರಿ ಮನಸ್ಸಿಗೆ ನೆಮ್ಮದಿ ಕಲ್ಪಿಸಿಕೊಳ್ಳ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ತಮ್ಮ ಮಾತನ್ನು ಮುಂದುವರೆಸಿದ ಅವರು, ಕುವೆಂಪು ಅವರು ಬರೆದಿರುವ ನಾಡಗೀತೆ ಸಾಲಿದೆ ಸರ್ವಜನಾಂಗದ ಶಾಂತಿಯ ತೋಟ ಅಂತ. ಹಾಗೇ ಎಲ್ಲರು ಹಿಂದೂ,ಮುಸ್ಲಿಂ, ಕ್ರೈಸ್ತ ಎಲ್ಲರು ಸಮಾನತೆಯಿಂದ ನೆಮ್ಮದಿಯಿಂದ ಜೀವನ ನಡೆಸಲಿ ಅನ್ನೋದು ನನ್ನ ಆಶಯ. ಈ ಬಾರಿ ಕೆಲವೆಡೆ ಮಳೆಯಾಗಿ ಜಲಾಶಯಗಳು ತುಂಬಿವೆ ಮತ್ತೆ ಕೆಲವೆಡೆ ಬರಗಾಲ ಇದೆ. ಮುಂದಿನ ವರ್ಷ ಉತ್ತಮ್ಮ ಮಳೆ ಬೆಳೆಯಾಗಲಿ ಅಂತ ನಾನು ಚಾಮುಂಡೇಶ್ವರಿ ತಾಯಿಲ್ಲಿ ಬೇಡುತ್ತೇನೆ ಎಂದು ಆಶಿಸಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...