ಶಿವಮೊಗ್ಗ: ಮಂಡ್ಯದಲ್ಲಿ ನಡೆಯುತ್ತಿರುವ ರಾಜಕಿಯವನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ದೇವೇಗೌಡರ ಕುಟುಂಬದ ಕುಡಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿದರೆ ಅನುಕೂಲವೆಂದು ಅಲ್ಲಿನವರು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಿಂದ ನಿಖಿಲ್ ಕುಮಾರಸ್ವಾ ಸ್ಪರ್ಧೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬಂದವರು ಹೋರಾಟದ ಮೂಲಕ ರಾಜಕೀಯ ಮಾಡುತ್ತಿದ್ದೇವೆ. ಯಾವ ಕಾರಣಕ್ಕೂ ನಾವು ಪಲಾಯನ ಮಾಡುವ ಪ್ರಶ್ನೆ ಇಲ್ಲ. ಎಂಥ ಕಷ್ಟ ಕಾಲದಲ್ಲೂ ಮಂಡ್ಯದ ಜನತೆ ಜನತಾ ದಳವನ್ನ ಬೆಂಬಲಿಸಿದೆ ಎಂದರು. ಕೆಲವು ವ್ಯಕ್ತಿಗಳು ಮಂಡ್ಯ ಜಿಲ್ಲೆಯ ಅಭಿಮಾನದ ಬಗ್ಗೆ ಮಾತನಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಋಣ ತೀರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಯಾರು ಯಾರು ಎಷ್ಟು ಋಣ ತೀರಿಸಿದ್ದಾರೆ ನೋಡಿದ್ದೆೇನೆ ಎಂದು ಹೇಳಿದರು.
ಮಂಡ್ಯದ ಶಾಸಕರು ಹಾಗೂ ನನ್ನ ಅಭಿಮಾನಿಗಳು ಮಂಡ್ಯದಿಂದಲೇ ದೇವೇಗೌಡರ ಕುಡಿ ಸ್ಪರ್ಧೆ ಮಾಡಿದರೆ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಜನತಾ ದಳದ ಅಭ್ಯರ್ಥಿ ಕಣದಲ್ಲಿರುತ್ತಾರೆ. ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾವು ಹೋರಾಟದ ಕುಟುಂಬದಿಂದ ಬಂದವರು. ನಿಖಿಲ್ ಮಂಡ್ಯದಿಂದ ಸ್ಪರ್ಧೆ ಮಾಡುತ್ತಾರೆ, ಮೈಸೂರಿನಿಂದ ಅಲ್ಲ. ಯಾರೋ ಹೆದರಿಸುತ್ತಾರೆ ಅಂತ ಹೇಳಿ ನಮ್ಮ ಕುಟುಂಬ ಹೆದರುವುದಿಲ್ಲ. ಮಂಡ್ಯ ಜಿಲ್ಲೆಯ ಜನರ ಭಾವನೆ ಗೊತ್ತಿದೆ. ಮೈಸೂರಿನಲ್ಲೂ ಕೂಡ ನಿಖಿಲ್ಗೆ ಅಭಿಮಾನಿಗಳು ಇದ್ದಾರೆ ಎಂದು ಸಿಎಂ ಹೇಳಿದರು.
ಹಲವಾರು ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ ಎಂದು ಹಲವಾರು ಬಾರಿ ಸಾರ್ವಜನಿಕವಾಗಿ ಹೇಳಿದ್ದೆ. ಅದನ್ನು ಸರಿಪಡಿಸಲು ಪಯತ್ನ ಮಾಡುತ್ತೇನೆ. ಮಂಗನ ಕಾಯಿಲೆಗೆ ಬಜೆಟ್ ನಲ್ಲಿ ₹10 ಕೋಟಿ ಅನುದಾನ ನೀಡಿದ್ದೇನೆ. ಕಾಯಿಲೆ ಇನ್ಸುಲೇಷನ್ ಕಂಡುಹಿಡಿಯಲು ಸೂಚಿಸಲಾಗಿದೆ ಎಂದು ಇದೇ ವೇಳೆ ಸಿಎಂ ಕುಮಾರಸ್ವಾಮಿ ಹೇಳಿದರು.
No comments:
Post a Comment