ನೆನ್ನೆ ಬೆಂಗಳೂರು ಅರಮನೆ ಮೈಧಾನದಲ್ಲಿ ನಡೆದ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧಿವೇಶನದಲ್ಲಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಜೆಡಿಎಸ್ ಕಾರ್ಯಕರ್ತರಿಗೆ ಇಂತವರನ್ನು ಮುಖ್ಯಮಂತ್ರಿ ಮಾಡಲು ನಾವು ಶ್ರಮಿಸಿದ್ದಕ್ಕೂ ಸಾರ್ಥಕವಾಯಿತು ಎನ್ನಿಸುವಂತಹ ಮಾತುಗಳನ್ನು ಆಡಿದರು.
ಜೆಡಿಎಸ್ ಕಾರ್ಯಕರ್ತರೊಬ್ಬರ ಹೆಸರನ್ನು ದುರುಪಯೋಗ ಪಡಿಸಿಕೊಂಡು, ‘ವರ್ಗಾವಣೆ ಮಾಡಿಸಿಕೊಳ್ಳಲು ಹೋದಾಗ , ಸಿಎಂ ಪ್ರತಿಕ್ರಿಯಿಸುತ್ತಿಲ್ಲ. ಸರ್ಕಾರ ಬಂದಿದ್ದರು, ನಮಗೆ ಈಗ ಯಾವುದೇ ಅನುಕೂಲವಾಗುತ್ತಿಲ್ಲ.
ಅವರು ಮುಖ್ಯಮಂತ್ರಿಯಾಗಿ ನಮಗೇನು ಪ್ರಯೋಜನ’ ಎಂದು ದೂಷಿಸುತ್ತಾ, ವಾಟ್ಸಪ್ಪ್ ಸಂದೇಶವನ್ನು ಹರಿಬಿಟ್ಟಿರುವುದು, ಕುಮಾರಸ್ವಾಮಿ ಅವರ ಗಮನಕ್ಕೆ ಬಂದಿದೆ. ಇದರ ಕುರಿತು ಅಧಿವೇಶನೆಯಲ್ಲಿ ಮಾತನಾಡಿದ ಅವರು ‘ನಾನು ಈ ನಾಡಿನ ಸಮಸ್ತ ಜನತೆಯ ಮುಖ್ಯಮಂತ್ರಿ, ಈ ನಾಡಿನ ಬಡ ಕುಟುಂಬದವರ ಮುಖ್ಯಮಂತ್ರಿ. ಅವರ ವೃದ್ದಿಗೆ ಶ್ರಮಿಸುವುದು ನನ್ನ ಧ್ಯೇಯವೇ ಹೊರತು,ವರ್ಗಾವಣೆ ದಂಧೆ ನಡೆಸುವುದ್ದಲ್ಲ. ದಯವಿಟ್ಟು ನಾನು ಈ ಸ್ಥಾನಕ್ಕೆ ಏರಲು ಹೇಗೆ ಬೆಂಬಲಿಸಿದಿರೋ, ಅದೇ ರೀತಿ ಈ ನಾಡನ್ನು ಸಮೃದ್ಧಗೊಳಿಸಲು ಶ್ರಮಿಸುತ್ತಿರುವ ನನನ್ನು ಬೆಂಬಲಿಸಿ’ ಎಂದು ಮನವಿ ಮಾಡಿಕೊಂಡು ತಿಳಿ ಹೇಳಿದರು.
ಯಾವುದೇ ಒಬ್ಬ ರಾಜಕಾರಣಿ ಅಧಿಕಾರಕ್ಕೆ ಬಂದೊಡನೆ, ಅವನಿಗೆ ಹತ್ತಿರವಾದವರಿಗೆ ಅನುಕೂಲ ಮಾಡಿಕೊಂಡು, ಅದರಿಂದ ಒಂದಷ್ಟು ಹಣ ಮಾಡಿಕೊಂಡು ಕಾಲ ಕಳೆಯುವ ಈ ಕಾಲದಲ್ಲಿ, ನಮ್ಮ ನಾಡಿನ ಜನತೆಗೆ ಸೇವೆ ಮಾಡುವುದೊಂದೇ ಉದ್ದೇಶವಾಗಿರಬೇಕೆ ಹೊರತು ಬೇರೇನೂ ಅಲ್ಲ ಎಂದುಕೊಂಡು ನಮಗಾಗಿ ಶ್ರಮಿಸುತ್ತಿರುವ ಇಂತಹ ಮುಖ್ಯಮಂತ್ರಿಯನ್ನು ನಾವು ಬೆಂಬಲಿಸದಿದ್ದರೆ ನಮ್ಮಂತಹ ಮೂರ್ಖರು ಮತ್ತೊಬ್ಬರಿಲ್ಲ.
ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಕಾಮೆಂಟ್ ಮಾಡೋಕೆ ಬರೆದು ತಿಳಿ



No comments:
Post a Comment