ABC

Saturday, 16 February 2019

ಸ್ಥಳದಲ್ಲೇ 25 ಲಕ್ಷ ಚೆಕ್ ನೀಡಿದ ಮುಖ್ಯಮಂತ್ರಿಗಳು: ರಾಷ್ಟ್ರ ಪ್ರೇಮ ಮೆರೆದ ಗುರುರವರ ಧರ್ಮಪತ್ನಿ ಕಲಾವತಿ.

ಕರ್ನಾಟಕದ ವೀರ ಯೋಧ ಗುರು ಅವರ ಅಂತಿಮ ವಿಧಿ ವಿಧಾನದ ವೇಳೆ ಯೋಧ ಗುರು ಅವರ ಪತ್ನಿಗೆ ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ರಾಷ್ಟ್ರಧ್ವಜ ನೀಡಿದರು. ಈ ಸಮಯದಲ್ಲಿ ಸಹ ಯೋಧನ ಪತ್ನಿ ಕಲಾವತಿ ಅವರಿಗೆ ಯೋಧ ಗುರು ಅವರ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಲಾವತಿಗೆ ನೀಡಿದರು. ಈ ಸಮಯದಲ್ಲಿ ಸಹ ಕಲಾವತಿ ಅವರು ಭಾರತ್ ಮಾತಾ ಕಿ‌ ಜೈ ಎಂದು ಕುಮಾರಸ್ವಾಮಿ ಮತ್ತು ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಮಾಡಿ ರಾಷ್ಟ್ರಪ್ರೇಮ ಮತ್ತು ಪತಿ ಮೇಲಿನ ಪ್ರೇಮ ತೋರಿದರು.

ಆ ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ವೀರ ಯೋಧನ ಪತ್ನಿ ಕಲಾವತಿ ಅವರಿಗೆ ಸರ್ಕಾರದಿಂದ  ಇಪ್ಪತ್ತೈದು ಲಕ್ಷ ಚೆಕ್  ನೆರವು ನೀಡಿ ನಿಮ್ಮ ಕುಟುಂಬದ ಜೊತೆ ನಾವಿರುತ್ತೇವೆ ಎಂದು ಕಲಾವತಿ ಅವರ ತಲೆ ಸವರಿ ಸಮಾಧಾನ ಪಡಿಸಿದರು. ಸರ್ಕಾರದ ಮುತುವರ್ಜಿಗೆ ಅಳುತ್ತಲೇ ಸ್ಪಂದಿಸಿದ ಗುರು ಪತ್ನಿ ಕಲಾವತಿ ನನಗೆ ನನ್ನ
ಗಂಡ ಬೇಕು ಸಾರ್, ನನ್ನನ್ನೂ ಅವರತ್ರ ಕಳಿಸಿ ಸಾರ್ ಅಂತ ಕಣ್ಣೀರಿಟ್ಟರು. ಇದರಿಂದ ಕುಮಾರಸ್ವಾಮಿ ಮತ್ತು ಪರಮೇಶ್ವರ್ ಕ್ಷಣಕಾಲ ಭಾವುಕರಾದರೂ ಕೂಡ ಕಲಾವತಿ ತಲೆ ಸವರಿ ಸಮಾಧಾನ ಪಡಿಸುವ ಯತ್ಮ ಮಾಡಿದರು

ಆದರೆ ನಂತರ ಯೋಧ ಗುರು ಅವರ ಪಾರ್ಥಿವ ಶರೀರಕ್ಕೆ ಕಟ್ಟಿಗೆ ಇಡುವ ಸಂದರ್ಭದಲ್ಲಿ ಸಹ ರಾಷ್ಟ್ರಧ್ವಜ ಹಿಡಿದುಕೊಂಡೇ ಕಟ್ಟಿಗೆ ಇಟ್ಟರು. ಅಂತಿಮ ಕ್ಷಣದಲ್ಲಿ ಪಾರ್ಥಿವ ಶರೀರ ಇರುವ ಪೆಟ್ಟಿಗೆಯ ಒಂದು ಭಾಗವನ್ನು ಮಾತ್ರ ತೆರೆದು ಕಟ್ಟಿಗೆ ಇರಿಸಲಾಯಿತು.ಈ ಸಮಯದಲ್ಲಿ ಯೋಧ ಗುರು ಅವರ ತಂದೆ ತಾಯಿ ಹಾಗೂ ಸಹೋದರ ಮತ್ತು ಪತ್ನಿ ಕಲಾವತಿ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲಿದ್ದವರೆಲ್ಲೂ ಗುರು ಅಮರ್ ಎಂದು ಕೂಗುತ್ತಿದ್ದರು. ಬಳಿಕ ಪಾರ್ಥಿವ ಶರೀರದ ಪೆಟ್ಟಿಗೆಗೆ ಕಟ್ಟಿಗೆಗಳನ್ನು ಜೋಡಿಸಲಾಯಿತು.ಕಟ್ಟಿಗೆ ಜೋಡಿಸಿದ ಸಂದರ್ಭದಲ್ಲಂತೂ ಯೋಧ ಗುರು ಅವರ ಪತ್ನಿ ಕಲಾವತಿ ಅವರ ಪರಿಸ್ಥಿತಿ ನೋಡಲು ಸಾಧ್ಯವಿರಲಿಲ್ಲ. ನನ್ನನ್ನು ಬಿಟ್ಟಿಬಿಡಿ ನನ್ನ ಪತಿಯ ಜೊತೆಯೇ ನಾನು ಹೊರಟುಹೋಗುತ್ತೇನೆ ಎಂದು ಗೋಳಾಡುತ್ತಿದ್ದರು. ಆಗ ಅಲ್ಲಿದ್ದ ಲೇಡೀಸ್ ಪೋಲಿಸ್ ಅವರನ್ನು ಹಿಡಿದುಕೊಂಡು ಸಮಧಾನ ಪಡಿಸುತ್ತಿದ್ದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...