ABC

Tuesday, 19 February 2019

ಮಂಡ್ಯದಲ್ಲಿ 400ಕೋಟಿ ವೆಚ್ಚದ ನೂತನ ಸಕ್ಕರೆ ಕಾರ್ಖಾನೆ ಸ್ಥಾಪನೆ;ಕುಮಾರಸ್ವಾಮಿ ಘೋಷಣೆ.

ಮಂಡ್ಯ: (೧೯) 400ಕೋಟಿ ವೆಚ್ಚದಲ್ಲಿ ನೂತನ ಸಕ್ಕರೆ ಕಾರ್ಖಾನೆ ಸ್ಥಾಪನೆ;ಕುಮಾರಸ್ವಾಮಿ ಘೋಷಣೆ

ಮಂಡ್ಯದ ರೋಗಗ್ರಸ್ತ ಮೈಶುಗರ್ ಕಾರ್ಖಾನೆಗೆ ಪುನಶ್ಚೇತನದ ಹೆಸರಲ್ಲಿ ನೂರಾರು ಕೋಟಿ ರೂಗಳನ್ನು ವ್ಯಯಿಸುವ ಬದಲು ೪೦೦ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ನೂತನ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.ಮಂಡ್ಯದಲ್ಲಿ ಕೆಡಿಪಿ ಸಭೆ ತರುವಾಯ ಪತ್ರಕರ್ತರೊಂದಿಗೆ ಮಾತನಾಡಿ ಮೈಶುಗರ್ಗೆ ಬಿಡುಗಡೆಯಾದ ಹಣ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ.ಈಗಾಗಲೇ ಹೊಸ ಕಾರ್ಖಾನೆ ಸಂಬಂದ ಎಪ್ರಿಲ್ ಮೊದಲ ವಾರದಲ್ಲಿ ಡಿಪಿಆರ್ ಸಿದ್ದಗೊಳ್ಳಲಿದೆ.ಕಾರ್ಖಾನೆಯನ್ನು ಮಂಡ್ಯದ ಸಾತನೂರು ಫಾರಂ ಬಳಿ ಇರುವ ಸ್ಥಳದಲ್ಲಿ ಆರಂಭಿಸುವ ಉದ್ದೇಶವಿದೆ.ನಂತರ ಹಾಲಿ ಮೈಶುಗರ್ ಕಾರ್ಖಾನೆಯ ಸ್ಥಳದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಪಿಎಸ್ ಎಸ್ ಕೆ ಹಾಗೂ ಕೆ ಆರ್ ನಗರದ ಶ್ರೀ ರಾಮ ಸಹಕಾರಿ ಕಾರ್ಖಾನೆ ಪುನಶ್ಚೇತನಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದರು

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...