ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ, ನಮ್ಮದು ಚುನಾವಣಾ ಬಜೆಟ್ ಅಲ್ಲ. ಇದು ಅಭಿವೃದ್ಧಿ ದೃಷ್ಟಿಕೋನದ ಬಜೆಟ್. ರೈತರ ಸಾಲಮನ್ನಾ ಯೋಜನೆಗೆ ಯಾವುದೇ ಕೊರತೆಗಳಿಲ್ಲ. ಈ ವರ್ಷವೇ ಸಾಲಮನ್ನಾ ಪೂರ್ಣವಾಗುತ್ತದೆ. ಇನ್ನು ಔರಾದ್ಕರ್ ವರದಿ ಸಂಪೂರ್ಣವಾಗಿ ಜಾರಿಗೆ ತರಲು ಉತ್ಸುಕನಾಗಿದ್ದೆ. ಆದರೆ ಅಧಿಕಾರಿಗಳು ಅದರ ಚರ್ಚೆಯನ್ನು ಮುಂದುವರಿಸಿದ್ದಾರೆ. ಬಜೆಟ್ನಲ್ಲೇ ಇದನ್ನು ತರಬೇಕು ಎಂಬುದೇನಿಲ್ಲ. ಮುಂದೆ ಅದನ್ನ ಸಂಪೂರ್ಣವಾಗಿ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.
ಈ ಬಾರಿಯ ಬಜೆಟ್ 2. 34 ಸಾವಿರ ಕೋಟಿಗೆ ಹೆಚ್ಚಿದೆ. 11 ವರ್ಷಗಳಿಂದ ರೈತರು ನಿರಂತರ ಬರಗಾಲ ಎದುರಿಸಿದ್ದಾರೆ. ಹೀಗಾಗಿ ಸಾಲಮನ್ನಾಗೆ 12,650 ಕೋಟಿ ರೂ.ಗಳನ್ನು ಬಜೆಟ್ನಲ್ಲಿಟ್ಟಿದ್ದೇವೆ. ಕೃಷಿಯ ಅಭಿವೃದ್ಧಿಗೆ ಪೂರಕ ಬಜೆಟ್ ಇದಾಗಿದ್ದು, ಒಟ್ಟು ಕೃಷಿಗೆ 46 ಸಾವಿರ ಕೋಟಿ ರೂ. ಅನುದಾನ ಇಟ್ಟಿದ್ದೇವೆ ಎಂದರು.ಇನ್ನು ರೈತರಿಗೆ ಗೃಹ ಲಕ್ಷ್ಮಿ ಬೆಳೆಸಾಲ ಯೋಜನೆ ಜಾರಿ ತರಲಾಗಿದೆ. ಇದರಿಂದ ಮಹಿಳೆಯರು ಒಡವೆ ಅಡ ಇಡುವುದು ತಪ್ಪಲಿದೆ. ಅಲ್ಲದೆ ರೈತರು ಬೆಳೆ ಸಂಗ್ರಹಿಸಲು ಉಗ್ರಾಣ ವ್ಯವಸ್ಥೆ ಜಾರಿ ತರಲಾಗಿದೆ. ಇದರಲ್ಲಿ 8 ತಿಂಗಳು ರೈತರು ತಮ್ಮ ಬೆಳೆ ಸಂಗ್ರಹಿಸಬಹುದು. ಇದರಲ್ಲಿ ಗೋಡೌನ್ಗೆ ಬೆಳೆ ಸಾಗಿಸುವ ವೆಚ್ಚವನ್ನೂ ಸರ್ಕಾರವೇ ಭರಿಸಲಿದ್ದು, ಇದಕ್ಕಾಗಿ 200 ಕೋಟಿ ಹಣ ಮೀಸಲಿಟ್ಟಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ವಿವರಿಸಿದರು.

No comments:
Post a Comment