ಮಂಡ್ಯ: ಇಂದು ಕನ್ನಡ ಚಿತ್ರರಂಗದ ಕಲಿಯುಗ ಕರ್ಣ ,ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಂಡ್ಯದ ಅಂಬರೀಶ್ ಅವರ ಸ್ವಗ್ರಾಮದಲ್ಲಿ ಸುದ್ದಿಗಾರರ ಜೊತೆ ಸುಮಲತಾ ಅಂಬರೀಶ್ ಮಾತನಾಡಿದರು. ನಾನು ಕಾಂಗ್ರೆಸ್ನಿಂದ ಟಿಕೆಟ್ ನಿರೀಕ್ಷಿಸುತ್ತಿದ್ದೇನೆ ಕಾಂಗ್ರೆಸ್ ಪಕ್ಷ ನಮ್ಮನ್ನು ಗುರುತಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಜೆಡಿಎಸ್ನಿಂದ ಸ್ಪರ್ಧಿಸಲು ಆಹ್ವಾನ ಬಂದಿಲ್ಲ. ಕಾಂಗ್ರೆಸ್ನಿಂದಲೇ ಸ್ಪರ್ಧಿಸುವ ಬಗ್ಗೆ ಉತ್ಸುಕಳಾಗಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದರು.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು ಅಂಬರೀಶ್ ಹುಟ್ಟೂರು ಬಿಟ್ಟರೆ ಇನ್ನೆಲ್ಲೂ ನನಗೆ ಈ ಪ್ರೀತಿ ಸಿಗುವುದಿಲ್ಲ. ನಾನು ಏನೇ ತೀರ್ಮಾನ ತೆಗೆದುಕೊಂಡರೂ ನಿಮ್ಮೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳುತ್ತೇನೆ. ಮಂಡ್ಯ ಜನರ ಆಸೆ ಮತ್ತು ಅಪೇಕ್ಷೆಯನ್ನು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಅಂಬಿ ಮೇಲಿಟ್ಟಿದ್ದ ಪ್ರೀತಿ ಹಾಗೂ ವಿಶ್ವಾಸ ನಮ್ಮ ಕುಟುಂಬದ ಮೇಲಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಇಚ್ಛೆಯನ್ನು ಸಿದ್ದರಾಮಯ್ಯರಿಗೆ ತಿಳಿಸಿದ್ದೇನೆ ಎಂದು ಹೇಳಿದರು.ರಾಜಕೀಯಕ್ಕೆ ಬರಬೇಕೆಂಬ ಉದ್ದೇಶದಿಂದ ಮಂಡ್ಯಕ್ಕೆ ಬರುತ್ತಿಲ್ಲ. ಬದಲಿಗೆ ಮಂಡ್ಯಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ. ನಮ್ಮ ಮೇಲಿರುವ ನಿಮ್ಮ ಋಣವನ್ನು ತೀರಿಸಲು ನಾನು ಬದ್ಧಳಾಗಿದ್ದೇನೆ ಎಂದು ನಟಿ ಸುಮಲತಾ ಅಂಬರೀಶ್ ತಿಳಿಸಿದರು. ನಂತರ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಯೋಧ ಎಚ್. ಗುರು ಅವರ ಕುಟುಂಬಕ್ಕೆ ಭೇಟಿ ನೀಡಿದರು.ಗುರು ಮನೆಯವರ ಬಳಿ ಮಾತನಾಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು. ಈಗಾಗಲೇ ಗುರು ಕುಟುಂಬಕ್ಕೆ ಜಮೀನು ಕೊಡುವುದಾಗಿ ಹೇಳಿರುವ ಸುಮಲತಾ, ಅದರ ಪ್ರಕ್ರಿಯೆಗಳ ಕುರಿತು ಚರ್ಚಿಸಿದರು. ಅದಕ್ಕೂ ಮೊದಲು ದೊಡ್ಡರಸಿನಕೆರೆಯಲ್ಲಿರುವ ಜಮೀನು ವೀಕ್ಷಣೆ ಮಾಡಿ ಸಂಬಂಧಿಕರಿಂದ ಮಾಹಿತಿ ಪಡೆದರು.
ಪುತ್ರ ಅಭಿಷೇಕ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತಿತರರು ಇದ್ದರು.ದೊಡ್ಡರಸಿನಕೆರೆ ಗ್ರಾಮದಲ್ಲಿರುವ ಅರ್ಧ ಎಕರೆ ಜಮೀನು ಕೊಡುವುದಾಗಿ ಪುನರುಚ್ಚರಿಸಿದರು.

No comments:
Post a Comment