ABC

Saturday, 9 February 2019

ಇನ್ನೊಂದು ಹೊಸ ಬಾಂಬ್ ಸಿಡಿಸಿದ ಸಿಎಂ ಕುಮಾರಸ್ವಾಮಿ.

ಕನಿಷ್ಠ ಜ್ಞಾನ ಇಲ್ಲದವನು ಆ ಆಡಿಯೋ ಕೇಳಿದರೆ ಅದು ಯಡಿಯೂರಪ್ಪ ಅವರ ವಾಯ್ಸ್ ಅಂತಾ ಕಂಡುಹಿಡಿಯುತ್ತಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಧರ್ಮಸ್ಥಳದಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಇಂದು ಸಹ  ಮತ್ತೆ ಆಪರೇಶನ್ ಕಮಲಕ್ಕೆ ಮುಂದಾಗಿದ್ದಾರೆ. ನಮ್ಮ ಶಾಸಕರಿಗೆ ಕರೆ ಆಮಿಷ ಒಟ್ಟಿದ್ದು, ನಿನ್ನೆ ಆಡಿಯೋ ರಿಲೀಸ್ ಮಾಡಿದ ಬಳಿಕ ಕೂಡ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಪ್ರಜಾಪ್ರಭುತ್ವದ ಕಾನೂನು ವ್ಯಾಪ್ತಿಯಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು - ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿರವರು

ನಾನು ಅದು ಯಡಿಯೂರಪ್ಪ ಅವರ  ವಾಯ್ಸ್ ಅಂತಾ ಎಲ್ಲೂ ಹೇಳಿಲ್ಲ‌, ಕೇಂದ್ರ ಒಪ್ಪಿಗೆ ಕೊಟ್ಟರೆ ಮೋದಿ ಅವರ ಸಮ್ಮುಖದಲ್ಲಿ ವಿಚಾರಣೆಗೆ ಅವಕಾಶ ಕೊಡುತ್ತೇವೆ. ಅದೇನಾದ್ರು ಅವರ ವಾಯ್ಸ್ ಅನ್ನೋದು ಸಾಬೀತಾಗದೆ ಹೋದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕುಮಾರಸ್ವಾಮಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ಈ ವಿಷಯವನ್ನು ನಾನು ಧರ್ಮಸ್ಥಳದಲ್ಲಿ ನಿಂತು ಹೇಳುತ್ತಿದ್ದೇನೆ. ಈ ಹಿಂದೆ ನಾವಿಬ್ಬರು ರಾಜಕೀಯ ವಿಚಾರ ತಂದು ಅನುಭವಿಸಿದ್ದೆವು. ಅವರು ಇಲ್ಲೂ ಆಣೆ ಪ್ರಮಾಣ ಮಾಡಿ ಒಂದೇ ತಿಂಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರು. ಈಗ ಮತ್ತೊಮ್ಮೆ ನಾನು ಇಲ್ಲೆ ಹೇಳುತ್ತಿದ್ದೇನೆ‌ ಎಂದು ಪರೋಕ್ಷವಾಗಿ ಆಣೆ ಮಾಡಿದ್ದಾರೆ.


No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...