ABC

Tuesday, 26 February 2019

ಬಂಡೀಪುರ ಅಗ್ನಿನರ್ತನ ವೈಮಾನಿಕ ಪರೀಕ್ಷೆ ನಡೆಸಲು: ಸಿಎಂ ಕುಮಾರಸ್ವಾಮಿ ಭೇಟಿ.

ಚಾಮರಾಜನಗರದ ಬಂಡೀಪುರ ಅಭಯಾರಣ್ಯದಲ್ಲಿ ಅಗ್ನಿ ನರ್ತನ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಸುಮಾರು 30ಸಾವಿರ ಎಕರೆ ಅರಣ್ಯಕ್ಕೆ ಹಬ್ಬಿದ್ದ ಬೆಂಕಿಯನ್ನು ಸೇನಾ ಹೆಲಿಕಾಪ್ಟರ್ಗಳನ್ನು ಬಳಸಿ ನಿಯಂತ್ರಿಸಲಾಗಿದೆ.ಈ ಮಧ್ಯೆ ಇಂದು ಬಂಡೀಪುರ ಅರಣ್ಯಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಬೆಂಕಿ ಬಿದ್ದ ಅರಣ್ಯ ಪದೇಶವನ್ನ ಪರಿಶೀಲನೆ ನಡೆಸಲಿರುವ ಸಿಎಂ ಹೆಚ್ಡಿಕೆ,ಸಂಪೂರ್ಣ ಬೆಂಕಿ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ. ಹುಲಿ ಸಂರಕ್ಷಿತ ಅರಣ್ಯ ಬಂಡೀಪುರ, ಕರಡಿಕಲ್ಲು ಹಾಗೂ ಹಿಮ್ಮದ್ ಗೋಪಾಲಸ್ವಾಮಿ ಬೆಟ್ಟದ ಭಾಗಗಳಿಗೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಬೇಸಿಗೆ ಶುರುವಾಗುವುದಕ್ಕೂ ಮುನ್ನವೇ ರಾಜ್ಯದ ಕಾಡುಗಳಲ್ಲಿ ಕಾಡ್ಗಿಚ್ಚಿನ ರುದ್ರ ನರ್ತನವಾಡುತ್ತಿದ್ದು,ಕಾಡ್ಗಿಚ್ಚಿನಿಂದ ಆಗಿರುವ ಅನಾಹುತಗಳನ್ನ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಸಿಎಂಗೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಸಾಥ್ ನೀಡಲಿದ್ದಾರೆ.ಇನ್ಮುಂದೆ ಕಾಡ್ಗಿಚ್ಚು ಬೀಳದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಅನುಸರಿಸಬೇಕಾದ ಕ್ರಮಗಳನ್ನ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಕಳೆದೊಂದು ವಾರದಿಂದ ಕಾಡ್ಗಿಚ್ಚಿಗೆ ಪ್ರಾಣಿ ಸಂಕುಲ ಬಲಿಯಾಗಿದೆ ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇಂದು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಹೆಚ್ಎಎಲ್‌ ನಿಲ್ದಾಣದಿಂದ ತೆರಳಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ನಂತರ ಮಂಡ್ಯ ಜಿಲ್ಲೆಗೆ ತೆರಳಲಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...