ABC

Thursday, 28 February 2019

ಬ್ರೇಕಿಂಗ್ ನ್ಯೂಸ್: ನಾಳೆ ಸೇಫಾಗಿ ಭಾರತಕ್ಕೆ ವಾಪಸ್ ಬರಲಿದ್ದಾರೆ: ಪೈಲಟ್ ಅಭಿನಂದನ್

ಇಸ್ಲಾಮಾಬಾದ್: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ನಾಳೆ ಸುರಕ್ಷಿತವಾಗಿ ಬಿಡುಗಡೆ ಮಾಡುವುದಾಗಿ ಪಾಕ್ ಹೇಳಿದೆ. ಇಂದು ಪಾಕ್ ಸಂಸತ್ ನಲ್ಲಿ ಮಾತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಸಂಸತ್ ನಲ್ಲಿ ಮಾತನಾಡಿದ ಇಮ್ರಾನ್ ಖಾನ್ ನಾವು ಶಾಂತಿ ಬಯಸುತ್ತೇವೆ, ಇದಕ್ಕೆ ಸಾಕ್ಷಿಯಾಗಿ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಿದ್ದೇವೆ, ಆದರೆ ಭಾರತ ಇದನ್ನು ನಮ್ಮ ದೌರ್ಬಲ್ಯ ಅಂದು ಭಾವಿಸದೆ, ಮಾತು ಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.ಬಿಡುಗಡೆಗಾಗಿ ವ್ಯಾಪಕ ಒತ್ತಡಕ್ಕೆ ಮಣಿದಿರುವ ಪಾಕ್ ಪ್ರಧಾನಿ ಇಮ್ರಾನ್‍ಖಾನ್ ಶಾಂತಿ ಮಾತುಕತೆ ಪ್ರಸ್ತಾಪ ಮಂಡಿಸುವ ಜೊತೆಗೆ ಪೈಲಟ್‍ನನ್ನು ಭಾರತಕ್ಕೆ ಕಳುಹಿಸುವ ಮಾತನಾಡಿದ್ದಾರೆ. ಈ ಮೂಲಕ  ಭಾರತಕ್ಕೆಮೊದಲ ರಾಜತಾಂತ್ರಿಕ ಗೆಲುವು ಸಿಕ್ಕಂತಾಗಿದೆ.  ಅಭಿನಂದನ್ ಬಿಡುಗಡೆಗಾಗಿ ದೇಶದಾದ್ಯಂತ ಪ್ರಾರ್ಥನೆ ಮಾಡಲಾಗಿತ್ತು.

ವಾಘಾ ಗಡಿ ಮೂಲಕ ವಾಪಸ್ :
ಪಾಕ್‌ ಸೇನೆಯ ಕೈಯಲ್ಲಿ ಬಂಧಿಯಾಗಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರು ನಾಳೆ ಶುಕ್ರವಾರ ವಾಘಾ ಗಡಿ ಮೂಲಕ ಭಾರತಕ್ಕೆ ಪ್ರವೇಶಿಸುವರೆಂದು ಪಾಕಿಸ್ಥಾನ ಪ್ರಕಟಿಸಿರುವುದಾಗಿ ವರದಿಗಳು ಹೇಳಿವೆ.
ಪಾಕಿಸ್ಥಾನದ ನಿರ್ಗಮನ ರಕ್ಷಣಾ ಅಟಾಶೆ ಅವರು ಅಭಿನಂದನ್‌ ವರ್ಧಮಾನ್‌ ಜತೆಗೆ ವಾಘಾ ಗಡಿಯ ವರೆಗೆ ಬಂದು ಅವರನ್ನು ಭಾರತೀಯ ಸೇನೆಯ ವಶಕ್ಕೆ ಒಪ್ಪಿಸಲಿದ್ದಾರೆ ಎಂದು ಪಾಕ್‌ ಹೇಳಿದೆ.

ಜಾಗತಿಕ ಒತ್ತಡ :
ಜಿನೇವಾ ಒಪ್ಪಂದದ ಪ್ರಕಾರ ಪಾಕ್‌ ಸೇನೆ ಬಂಧಿತ ಅಭಿನಂದನ್‌ ಅವರಿಗೆ ಯಾವುದೇ ಕಿರುಕುಳ, ಹಿಂಸೆ ಕೊಡದೆ ಗೌರವದಿಂದ ನಡೆಸಿಕೊಂಡು ಭಾರತಕ್ಕೆ ಮರಳಿಸಬೇಕು, ಇಲ್ಲವೇ ಭಾರತದ ಅತ್ಯುಗ್ರ ಪ್ರತಿದಾಳಿಯನ್ನು ಎದುರಿಸಬೇಕಾಗುವುದು ಎಂಬ ಖಡಕ್‌ ಎಚ್ಚರಿಕೆಯನ್ನು ಭಾರತೀಯ ಸೇನೆ ಪಾಕ್‌ ಸೇನೆಗೆ ಕೊಟ್ಟಿತ್ತು. ಭಾರತಕ್ಕೆ ಬೆಂಬಲವಾಗಿ ಅಮೆರಿಕ, ರಶ್ಯ, ಫ್ರಾನ್ಸ್‌, ಬ್ರಿಟನ್‌ ಸೇರಿದಂತೆ ಹತ್ತು ಪ್ರಮುಖ ದೇಶಗಳು ನಿಂತದ್ದೇ ಪಾಕ್‌ ಮೇಲಿನ ಒತ್ತಡ ಹೆಚ್ಚಲು ಕಾರಣವಾಗಿತ್ತು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...