ಬೆಂಗಳೂರು: ಕಾಲಿಗೆ ಪೆಟ್ಟಾಗಿದೆ. ಉಳಿದಂತೆ ಯಾವುದೇ ಸಮಸ್ಯೆಯಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ಸಮಸ್ಯೆಯಾಗಿಲ್ಲ. ಕಾಲಿಗೆ ಪೆಟ್ಟಾಗಿದೆ. ಆಸ್ಪತ್ರೆಗೆ ಪರಿಶೀಲನೆ ಮಾಡಿಸಲು ತೆರಳುತ್ತಿದ್ದೇನೆ ಎಂದು ಹೇಳಿದರು.
ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿ : ಬೆಂಗಳೂರು, ಫೆ.2- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆರೋಗ್ಯವಾಗಿದ್ದು, ದೈನಂದಿನ ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ವಕ್ತಾರ ರಮೇಶ್‍ಬಾಬು ಸ್ಪಷ್ಟಪಡಿಸಿದರು.
ಬೆಂಗಳೂರಿನ ತಮ್ಮ ನಿವಸದಲ್ಲಿ ಗೌಡರು ಎಂದಿನಂತೆ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದಾರೆ. ಆರೋಗ್ಯದ ಬಗ್ಗೆ ಯಾವುದೇ ಆತಂಕ ಬೇಡ ಎಂದರು. ಕೆಲವು ಮಾಧ್ಯಮಗಳಲ್ಲಿ ಗೌಡರ ಆರೋಗ್ಯದ ಕುರಿತಾಗಿ ಬಂದಿರುವ ಮಾಹಿತಿ ಆಧಾರ ರಹಿತವಾಗಿವೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮೊದಲು ದೇವೇಗೌಡರು ಬಾತ್ ರೂಮ್ ನಲ್ಲಿ ಜಾರಿಬಿದ್ದಿದ್ದಾರೆ, ಅವರ ಕಾಲಿಗೆ ಪೆಟ್ಟಾಗಿದೆ ಎನ್ನುವ ಸುದ್ದಿ ಹರಿದಾಡಿತ್ತು. ನಂತರ ಅವರ ಕಾಲು ಸ್ನಾಯುಸೆಳೆತಕ್ಕೊಳಗಾಗಿತ್ತು ಎನ್ನಲಾಗಿದೆ, ನನಗೆ ಏನೂ ಪೆಟ್ಟಾಗಿಲ್ಲ ನಾನು ಚನ್ನಗಿದ್ದೇನೆ ಎಂದು ಸ್ವತಃ ದೇವೇಗೌಡರೇ ಸ್ಪಷ್ಟಪಡಿಸಿದ್ದಾರೆ.
No comments:
Post a Comment