ABC

Sunday, 10 February 2019

ಗರ್ವದ ಮಾತಿನಿಂದ ಗರ್ವಭಂಗವಾಗುತ್ತದೆ, ಎಂದು ದೇವೇಗೌಡರು ಎಚ್ಚರಿಸಿದ್ದಾರೆ.

ಹಾಸನ: ಎಲ್ಲ ಕೆಲಸವನ್ನು ಮೋದಿಯವರೇ ಮಾಡಿದ್ದೇ ಆದಲ್ಲಿ ಸ್ವಾತಂತ್ರ್ಯ ನಂತರದಿಂದ ದೇಶವನ್ನಾಳಿದ ಪ್ರಧಾನಿಗಳು ಏನೂ ಮಾಡಿಲ್ಲವೇ, ಪ್ರಧಾನಿಯಾದವರು ತಮ್ಮ ಚೌಕಟ್ಟು ಮೀರಿ ಮಾತನಾಡಬಾರದು ಎಂಬ ಎಚ್ಚರಿಕೆ ಇಲ್ಲದಿದ್ದರೆ ಇಂತಹ ಗರ್ವದ ಮಾತಿನಿಂದ ಗರ್ವಭಂಗವಾಗುತ್ತದೆ, ಎಂದು ದೇವೇಗೌಡರು ಎಚ್ಚರಿಸಿದ್ದಾರೆ.

ಕಳೆದ ಐದು ವರ್ಷದ ಅಧಿಕಾರಾವಧಿಯಲ್ಲಿ ಎಲ್ಲ ಸಾಧನೆಯನ್ನು ನಾನೇ ಮಾಡಿದ್ದೇನೆ ಎಂಬ ಪ್ರಧಾನಿ ನರೇಂದ್ರ ಮೋದಿಯ ಮಾತು ಅವರ ಆ ಸ್ಥಾನಕ್ಕೆ ತಕ್ಕದ್ದಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದರು.
ಹೊಳೆನರಸೀಪುರದ ಸರಕಾರಿ ಮಹಿಳಾ ಕಾಲೇಜು, ಗೃಹವಿಜ್ಞಾನ ಕಾಲೇಜು ದಶಮಾನೋತ್ಸವ ಸಮಾರಂಭದಲ್ಲಿ ಶನಿವಾರ ಮಾತನಾಡಿ, ''ಎಲ್ಲ ಕೆಲಸವನ್ನು ಮೋದಿಯವರೇ ಮಾಡಿದ್ದೇ ಆದಲ್ಲಿ ಸ್ವಾತಂತ್ರ್ಯ ನಂತರದಿಂದ ದೇಶವನ್ನಾಳಿದ ಪ್ರಧಾನಿಗಳು ಏನೂ ಮಾಡಿಲ್ಲವೇ, ಪ್ರಧಾನಿಯಾದವರು ತಮ್ಮ ಚೌಕಟ್ಟು ಮೀರಿ ಮಾತನಾಡಬಾರದು ಎಂಬ ಎಚ್ಚರಿಕೆ ಇಲ್ಲದಿದ್ದರೆ ಇಂತಹ ಗರ್ವದ ಮಾತಿನಿಂದ ಗರ್ವಭಂಗವಾಗುತ್ತದೆ,''ಎಂದು ಎಚ್ಚರಿಸಿದರು.
ಅನೇಕ ಪುಣ್ಯಾತ್ಮರು ಬಂದು ಹೋಗಿದ್ದಾರೆ ಅವರ ಸೇವೆ ಸ್ಮರಿಸಬೇಕು, ಬ್ರಿಟಿಷರಿಂದ ಭಾರತವನ್ನು ಉಳಿಸಿಕೊಳ್ಳಲಿಲ್ಲವೇ,'' ಎಂದು ಪ್ರಶ್ನಿಸಿದರು.

ರೇವಣ್ಣರಿಗೆ ಸಲಹೆ:

ಸಚಿವ ಎಚ್‌.ಡಿ.ರೇವಣ್ಣನಿಗೆ ಎಲ್ಲವನ್ನು ಮಾಡಿಬಿಡಬೇಕು ಎಂಬ ಹಠ. ಈ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ರೇವಣ್ಣನ ನಡುವೆ ತರ್ಕವೂ ನಡೆಯುತ್ತದೆ. ಮುಖ್ಯಮಂತ್ರಿ ಎಷ್ಟು ಶ್ರಮವಹಿಸಿ ಬಜೆಟ್‌ ನೀಡಿದ್ದಾರೆ ಎಂಬುದನ್ನು ರೇವಣ್ಣ ಕೂಡ ಅರ್ಥಮಾಡಿಕೊಳ್ಳಬೇಕು, ಎಂದು ಸಲಹೆ ನೀಡಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...