ಬಿಜೆಪಿಯ ಆಪರೇಷನ್ ವಿಚಾರ ಮತ್ತೆ ಸುದ್ದಿಯಾಗುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಶಾಕ್ ನೀಡಿದ್ದಾರೆ.
ಬಿಜೆಪಿಯವರು ನನ್ನ ಸರಕಾರವನ್ನು ಉರುಳಿಸಲು ಪ್ರಯತ್ನಿಸಿದರೆ, ಅವರಲ್ಲೇ ಕೆಲವರು ನನ್ನ ಸರಕಾರವನ್ನು ಉಳಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಬಿಜೆಪಿಯಲ್ಲಿ ನನಗೂ ಹಲವು ಸ್ನೇಹಿತರಿದ್ದಾರೆ. ಬಿಜೆಪಿ ಮತ್ತೆ ಸರಕಾರ ಉರುಳಿಸುವ ಪ್ರಯತ್ನಕ್ಕೆ ಕೈ ಹಾಕಿದರೆ ಬಿಜೆಪಿಯಲ್ಲಿರುವ ಕೆಲವರು ನನ್ನ ಸರಕಾರವನ್ನು ಉಳಿಸುತ್ತಾರೆ ಎಂದು ಎಚ್ ಡಿ ಕೆ ಯಡಿಯೂರಪ್ಪ ಅವರಿಗೆ ಶಾಕ್ ನೀಡಿದ್ದಾರೆ
No comments:
Post a Comment