ಕೋಲ್ಕತಾ ಪೋಲಿಸ್ ಆಯುಕ್ತರ ವಿರುದ್ಧ ಸಿಬಿಐನ ತನಿಖೆ ನಡೆಸುವ ವಿಚಾರವಾಗಿ ಸುಪ್ರೀಂ ನೀಡಿರುವ ತೀರ್ಪಿಗೆ ಪ.ಬಂಗಾಳದ ಮುಖಮಂತ್ರಿ ಮಮತಾ ಬ್ಯಾನರ್ಜಿ ಸ್ವಾಗತಿಸಿದ್ದಾರೆ.
ಸುಪ್ರೀಂ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ಸುಪ್ರೀಂಕೋರ್ಟ್ ರಾಜೀವ್ ಕುಮಾರ್ ವಿರುದ್ಧ ಯಾವುದೇ ಒತ್ತಡದ ಕ್ರಮಗಳನ್ನು ತೆಗೆದುಕೊಳ್ಳುವ ಹಾಗಿಲ್ಲ ಎಂದು ತೀರ್ಪು ನೀಡಿದೆ. ಇದು ನಿಜಕ್ಕೂ ಭಾರತದ ಜನತೆಗೆ ಹಾಗೂ ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು, ಮತ್ತು ನಮ್ಮೆಲ್ಲರನ್ನೂ ಬೆಂಬಲಿಸಿದವರಿಗೆ ದೊರೆತ ಗೆಲುವು ಕೂಡ ಹೌದು. ನಮಗೆ ನ್ಯಾಯಾಂಗದ ಮೇಲೆ ಮತ್ತು ಎಲ್ಲ ಸಂಸ್ಥೆಗಳ ಮೇಲೆ ನಂಬಿಕೆ ಇದೆ, ನಾವು ಅದಕ್ಕೆ ಅಭಾರಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.

No comments:
Post a Comment