ಮುಂದಿನ ದಿನಗಳಲ್ಲಿ ಇನ್ನೂ ಆರು ಸಾವಿರ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಹೊಸ ತಂತ್ರಜ್ಞಾನ ಆಧಾರಿದ ಕ್ಯಾಮೆರಾಗಳನ್ನು ಎಂ.ಜಿ.ರೋಡ್ ಸೇರಿದಂತೆ ಬೆಂಗಳೂರಿನ 18 ಕಡೆ ಅಳವಡಿಸಲಾಗಿದೆ.ಇವು ಸಂಚಾರಿ ದೀಪ ರೆಡ್ ಸಿಗ್ನಲ್ ತೋರಿಸಿದಾಗ ನಿಯಮ ಉಲ್ಲಂಘಿಸುವವರ ಚಿತ್ರಗಳನ್ನು ಸೆರೆ ಹಿಡಿಯಲಿವೆ. ಗ್ರೀನ್ ಲೈಟ್ ಆನ್ ಆದಾಗ ತನ್ನಷ್ಟಕ್ಕೆ ತಾನೇ ಆಫ್ ಆಗಲಿದೆ ಎಂದು ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಅನಗತ್ಯವಾಗಿರುವ ಒನ್‍ವೇಗಳನ್ನು ತಾವು ಜವಾಬ್ದಾರಿ ವಹಸಿಕೊಂಡ ನಂತರ ಪರಿಷ್ಕರಣೆ ಮಾಡಿರುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ವಾಹನ ನಿಲುಗಡೆಗೆ ಜಾಗ ಇರುವವರಿಗೆ ಮಾತ್ರ ಡಿಎಲ್ ನೀಡುವುದು ಸೂಕ್ತ.ಇಲ್ಲವಾದರೆ ಬೆಂಗಳೂರಿನಲ್ಲಿ ವಾಹನ ನಿಲುಗಡೆಗೆ ದೊಡ್ಡ ಸಮಸ್ಯೆಯಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ತಾವು ಮನವಿ ಮಾಡಿದ್ದೇವೆ ಎಂದರು.
ಸಿಎಂ ಕುಮಾರಸ್ವಾಮಿ ಬಜೆಟ್‍ನಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಇದೇ ವೇಳೆ ಅವರು ಹೇಳಿದರು. ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿಗಳಿಲ್ಲ, ಬಾಂಬೆ ಮತ್ತು ಚೆನ್ನೈ ಎರಡು ನಗರಗಳೂ ಎರಡು ದಿಕ್ಕುಗಳಲ್ಲಿ ಮಾತ್ರ ಬೆಳೆಯುತ್ತಿವೆ, ಆದರೆ ಬೆಂಗಳೂರು ಎಂಟು ದಿಕ್ಕುಗಳಲ್ಲೂ ಬೆಳೆಯುತ್ತಿದೆ ಎಂದರು.
No comments:
Post a Comment