ABC

Wednesday, 27 February 2019

ನನ್ನ ಮಗನನ್ನ ಚುನಾವಣೆಗೆ ತರುತ್ತೇನೆ ಎಂದು ಎಲ್ಲಿಯಾದ್ರು ಹೇಳಿದ್ದೀನಾ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು.

ಮಂಡ್ಯ: ನನ್ನ ಆತ್ಮೀಯ ಸ್ನೇಹಿತರ ನಡುವೆ ಬಿರುಕು ಮೂಡಲು ಕೆಲವರು ಪ್ರಯತ್ನ ಮಾಡುತ್ತಾರೆ ಆದ್ರೆ, ಅಂಬರೀಷ್ ನಿಧನರಾದಾಗ ಅವರಿಗೆ ನೀಡಿದ ಗೌರವ ಅದು ಜಿಲ್ಲೆಯ ಜನರಿಗೂ ನೀಡಿದ ಗೌರವ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕೇವಲ ಮಂಡ್ಯ ಜಿಲ್ಲೆಗಾಗಿ ಕಾರ್ಯಕ್ರಮ ಮಾಡುತ್ತೇನೆ ಎನ್ನುವುದು ಸಣ್ಣತನ ಬೇರೆ ಬೇರೆ ಜಿಲ್ಲೆಗಳಿಗೆ ನೀಡಿದ ಕೊಡುಗೆ ನೀಡಿದ್ದೇನೆ. ನನ್ನ ಆತ್ಮೀಯ ಸ್ನೇಹಿತರ ನಡುವೆ ಬಿರುಕು ಮೂಡಲು ಕೆಲವರು ಪ್ರಯತ್ನ ಮಾಡುತ್ತಾರೆ ಆದ್ರೆ, ಅಂಬರೀಷ್ ನಿಧನರಾದಾಗ ಅವರಿಗೆ ನೀಡಿದ ಗೌರವ ಈ ಜಿಲ್ಲೆಯ ಜನರಿಗೂ ನೀಡಿದ ಗೌರವ ಇದನ್ನು ಅಂಬರೀಷ್ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನಾನು ಅಂಬರೀಷ್ ನೋಡಿಕೊಂಡು ಆಸ್ಪತ್ರೆಯಿಂದ ಮನೆಗೆ ಹೋಗಿದ್ರೆ ಅವರ ಪಾರ್ಥಿವ ಶರೀರ ಯಾರು ಮಂಡ್ಯಕ್ಕೆ ತರುತ್ತಿದ್ದರು. ಅವರು ಸಚಿವರಾಗಿ ಮಾಡಲಾಗದ ಅಭಿವೃದ್ಧಿ ಕಾರ್ಯ ನಾನು ಮಾಡುತ್ತಿದ್ದೇನೆ. ಅಂದು ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತರುವುದು ಬೇಡ ಎಂದವರು ಇಂದು ಮಾತನಾಡುತ್ತಿದ್ದಾರೆ ಎಂದು ಸಿಎಂ ತಿಳಿಸಿದರು.

ನಿಖಿಲ್ ರವರು ಮಂಡ್ಯ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿಗಳು ನನ್ನ ಕುಟುಂಬವನ್ನು ಬೀದಿಗೆ ತರುತ್ತಿದ್ದಾರೆ. ನಾನು ಎಲ್ಲಿಯಾದರು ನನ್ನ ಮಗನನ್ನು ಚುನಾವಣೆಗೆ ತರುತ್ತೇನೆ ಎಂದು ಹೇಳಿದ್ದೇನಾ? ಸಾಲಮನ್ನಾ ಎಂದು ಸುಳ್ಳು ಹೇಳಲಿಲ್ಲ. ನಿನ್ನೆ ಬೆಳಗ್ಗೆ ಹತ್ತು ಗಂಟೆವರೆಗೆ  ೬ ಲಕ್ಷದ ೪೦ ಸಾವಿರ ರೈತ ಕುಟುಂಬಗಳಿಗೆ ೧೦೩ ಕೋಟಿ ಹಣ ಬಿಡುಗಡೆ ಮಾಡಿದ್ದೇನೆ ಎಂದು ನುಡಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...