ABC

Wednesday, 20 February 2019

ನಾಳೆ ನಡೆಯಲಿದೆ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ನಿಚ್ಚಿತಾರ್ಥ.. ವರ ಯಾರು ಗೊತ್ತಾ.?

ಇತ್ತೀಚಿಗೆ ಕಿರುತೆರೆ ಸೇರಿದಂತೆ ಬೆಳ್ಳಿತೆರೆಯ ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗ ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಮಗಳಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ನಾಳೆ ನಿಚಿತಾರ್ಥ ನೆರವೇರಲಿದೆ.

ಚಂದನವನದ ತಾರೆಗಳ ಮಕ್ಕಳ ಮದುವೆ ಅಂದರೆ ಅಲ್ಲಿ ಸಂಭ್ರಮಕ್ಕೇನು ಕಡಿಮೆ ಇರುವುದಿಲ್ಲ.ಸ್ಯಾಂಡಲ್ವುಡ್ ನಟ ನಟಿಯರೆಲ್ಲಾ ಈ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು ಸಂಭ್ರಮ ಮನೆ ಮಾಡಲಿದೆ. ಈಗಾಗಲೇ ರವಿಚಂದ್ರನ್ ರವರ ಮಕ್ಕಳಾದ ವಿಕ್ರಂ ಮತ್ತು ಮನೋರಂಜನ್ ತಮ್ಮ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದು ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದ್ದಾರೆ.

ನಾಳೆ ರವಿಚಂದ್ರನ್ ರವರ ಮಗಳಾದ ಗೀತಾಂಜಲಿಯವರು ಬೆಂಗಳೂರಿನಲ್ಲಿ ಉದ್ಯಮಿ ಆಗಿರುವ ಅಜಯ್ ಎಂಬುವರ ಜೊತೆ ನಿಚಿತಾರ್ಥವಾಗಲಿದ್ದಾರೆ.ಬೆಂಗಳೂರಿನ ಹೋಟೆಲ್ ಒಂದಾರಲ್ಲಿ ಶಾಸ್ತ್ರಬದ್ಧವಾಗಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದ್ದು ಸ್ನೇಹಿತರು, ಬಂಧುಗಳು ಸೇರಿದಂತೆ ಕೇವಲ ಆಪ್ತರಷ್ಟೇ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಸದ್ಯಕ್ಕೆ ರವಿಮಾಮ ನಟಿಸಿರುವ ದಶರಥ ಚಿತ್ರ ಬಾರೀ ನಿರೀಕ್ಷೆ ಮೂಡಿಸಿದ್ದು ನಟ ದರ್ಶನ್ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ ಎಂದು ಹೇಳಲಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ರವರು ಸದ್ಯದ ಮಟ್ಟಿಗೆ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತಕಧಿಮಿತಾ ಡಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಕಾಣಿಸಿಕೊಂಡಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...