ABC

Saturday, 16 February 2019

ಪ್ರತಿಯೊಬ್ಬ ಭಾರತೀಯನಲ್ಲೂ ಜೀರ್ಣಿಸಿಕೊಳ್ಳಲಾಗದ ನೋವು ಕಾಡುತ್ತಿದೆ ಎಂದು: ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಎಂದು ಹೇಳಿದರು.

ಮಂಡ್ಯ: ಪ್ರತಿಯೊಬ್ಬ ಭಾರತೀಯನಲ್ಲೂ ಜೀರ್ಣಿಸಿಕೊಳ್ಳಲಾಗದ ನೋವು ಕಾಡುತ್ತಿದೆ ಎಂದು ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಎಂದು ಹೇಳಿದರು.
ಮಂಡ್ಯದ ಅಂತ್ಯ ಸಂಸ್ಕಾರ ನಡೆಸುವ ಸ್ಥಳದ ಬಳಿ ಮಾತನಾಡಿದ ನಿಖಲ್ ಕುಮಾರಸ್ವಾಮಿ, ಪ್ರತಿಯೊಬ್ಬ ಭಾರತೀಯನಲ್ಲೂ ಜೀರ್ಣಿಸಿಕೊಳ್ಳಲಾಗದ ನೋವು ಕಾಡುತ್ತಿದೆ. ಆಕ್ರೋಶದ ಕಿಚ್ಚು ಎಲ್ಲರಲ್ಲಿದೆ ನಿಜಕ್ಕೂ ಬೇಸರವಾಗುತ್ತಿದ್ದು, ಯೋಧರ ಋಣದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ ಎಂದು ನೋವಿನಿಂದ ಮಾತನಾಡಿದ್ದಾರೆ.
ಇನ್ನು, ಮುಂದಿನ ದಿನಗಳಲ್ಲಿ ಇಂತಹ ಉಗ್ರರ ಚಟುವಟಿಕೆಗಳು ನಡೆಯದಂತೆ ಸರ್ಕಾರ ಕ್ರಮ‌ಕೈಗೊಳ್ಳಬೇಕಿದೆ ಎಂದ ನಿಖಿಲ್, ಉಗ್ರರ ದಾಳಿಗೆ ಗುರಿಯಾಗಿ ನಮ್ಮ ಯೋಧರು ಹುತಾತ್ಮ ರಾಗಿದ್ದು, ನಮ್ಮ ದೇಶದ ಆಸ್ತಿ ಯೋಧರು ಅವರ ಖುಣ ತೀರಿಸಲು ಸಾಧ್ಯವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ನಾವು ಏನೇ ಸಾಂತ್ವನ ಹೇಳಿದರೂ ಕೂಡ ಅವರ ಜೀವ ವಾಪಸ್ ತರಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ನಡೆಯದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಬೇಕು. ಯೋಧರ ಕುಟುಂಬದ ಗೋಳು ನೋಡಿದರೆ ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗಾಗುತ್ತದೆ ಎಂದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...