ABC

Friday, 22 February 2019

ಜೆಡಿಎಸ್​ ಸೇರಿದ್ದ ಅರುಣಾಚಲಪ್ರದೇಶ: ಮಾಜಿ ಸಿಎಂಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಈಶಾನ್ಯದ ಉಸ್ತುವಾರಿ

ಬೆಂಗಳೂರು: ಇತ್ತೀಚೆಗಷ್ಟೇ ಜೆಡಿಎಸ್​ ಸೇರಿದ್ದ ಅರುಣಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ಜಿಗಾಂಗ್​ ಅಪಾಂಗ್​ ಅವರಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಅಲ್ಲದೆ, ಈಶಾನ್ಯ ರಾಜ್ಯಗಳ ಪಕ್ಷದ ಉಸ್ತುವಾರಿ ವಹಿಸಲಾಗಿದೆ.

ಈ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಆದೇಶದಂತೆ ಮಾಧ್ಯಮಗಳಿಗೆ ಡ್ಯಾನಿಷ್​ ಅಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಪಾಂಗ್​ ಅವರನ್ನು ಜೆಡಿಎಸ್​ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ, ಈಶಾನ್ಯ ರಾಜ್ಯಗಳ ಉಸ್ತುವಾರಿ ವಹಿಸಿ ಈ ಕೂಡಲೇ ಜಾರಿಗೆ ಬರುವಂತೆ ದೇವೇಗೌಡರು ಅದೇಶಿಸಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.ಮೂಲತಃ ಕಾಂಗ್ರೆಸಿಗರಾಗದ ಜಿಗಾಂಗ್​ ಅಪಾಂಗ್​ ಅರುಣಾಚಲ ಪ್ರದೇಸ ಮುಖ್ಯಮಂತ್ರಿಯಾಗಿ 23 ವರ್ಷ ಆಡಳಿತ ಮಾಡಿದ್ದುರ. 1980ರ ರಿಂದ 1999ರ ವರೆಗೆ ಮೊದಲ ಬಾರಿಗೆ ಅವರು ಅಧಿಕಾರ ನಡೆಸಿದ್ದರು. ನಂತರ ಅರುಣಾಚಲ ಕಾಂಗ್ರೆಸ್​ ಕಟ್ಟಿದ್ದ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ 2003ರಲ್ಲಿ ಬಿಜೆಪಿ ಸೇರಿದ್ದರು. ಈ ಮೂಲಕ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ದಕ್ಕಿಸಿಕೊಟ್ಟಿದ್ದರು. 2004ರ ಸಾರ್ವತ್ರಿಕ ಚುನಾವಣೆಯ ನಂತರ ಅವರು ಮರಳಿ ಕಾಂಗ್ರೆಸ್​ ಸೇರಿದ್ದರು. ಆಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್​ನಿಂದ ಅಪಾಂಗ್​ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 2007ರ ವರೆಗೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು. ಕಾಂಗ್ರೆಸ್​ ಅವರನ್ನು ಅಧಿಕಾರದಿಂದ ಇಳಿಸಿದಾಗ ಬಿಜೆಪಿ ಸೇರಿದ್ದರು. ಸದ್ಯ ಬಿಜೆಪಿ ತೊರೆದಿರುವ ಅವರು, ಕರ್ನಾಟಕ ಮೂಲದ, ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ಸೇರಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...