ABC

Sunday, 10 February 2019

ಬಾದಾಮಿಯಲ್ಲಿ ಮಾನವೀಯತೆ ಮೆರೆದ ಸಚಿವ ಜಮೀರ್ ಅಹ್ಮದ್

ಬಾಗಲಕೋಟೆ: ವಿವಾದಿತ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಸಚಿವ ಜಮೀರ್ ಅಹ್ಮದ್ ಆಗಾಗ ಬಡಕುಟುಂಬಗಳಿಗೆ ಮತ್ತು ಅಶಕ್ತರಿಗೆ ನೆರವಾಗುವ ಮೂಲಕವೂ ಮಾನವೀಯತೆ ಪ್ರದರ್ಶಿಸುತ್ತಾರೆ.
ಅದರಂತೆ ಭಾನುವಾರ ಬಾದಾಮಿಯಲ್ಲಿ ಸಚಿವ ಜಮೀರ್ ಅಹ್ಮದ್ ಮಾನವೀಯತೆ ಮೆರೆದಿದ್ದಾರೆ. ಪಾಶ್ವ೯ವಾಯು ಪೀಡಿತ ವ್ಯಕ್ತಿಗೆ ಸಚಿವ ಜಮೀರ್ ಅಹ್ಮದ್ ಸಮಸ್ಯೆ ಆಲಿಸಿ ಸ್ಥಳದಲ್ಲೇ 50 ಸಾವಿರ ರೂ. ಧನ ಸಹಾಯ ಮಾಡಿದ್ದಾರೆ.

ಅಲ್ಪ ಸಂಖ್ಯಾತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿರುವ ಜಮೀರ್ ಅಹ್ಮದ್ ಖಾನ್, ಬಾಗಲಕೋಟೆ ಜಿಲ್ಲೆ ಬಾದಾಮಿಗೆ ತೆರಳಿದ್ದ ಸಂದರ್ಭ ಕೃಷ್ಣಾ ಹೆರಿಟೇಜ್ ಹೊಟೇಲ್‌ಗೆ ಬಡ ಕುಟುಂಬ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು. ಸಚಿವ ಜಮೀರ್ ಬಳಿ ಅಳಲು ತೋಡಿಕೊಂಡ ಖಾಜಿ ಬೂದಿಹಾಳ ಗ್ರಾಮದ ಮಜರ ಅಹ್ಮದ್ ಖಾನ್‌ಗೆ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದ್ದಾರೆ.
ಮಗಳ ಮದುವೆ ಹಿನ್ನೆಲೆಯಲ್ಲಿ ಅತಂತ್ರವಾಗಿದ್ದ ಕುಟುಂಬಕ್ಕೆ ಸಚಿವರು ಮದುವೆಗೂ ಧನ ಸಹಾಯ, ಶಾದಿ ಭಾಗ್ಯ ಯೋಜನೆಯಡಿ ಸಹಾಯದ ಭರವಸೆ ನೀಡಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...