ಹಾಸನ: ಭಾರತ ದೇಶದ ಮೇಲೆ ಯಾರಾದ್ರು ದಾಳಿ ಮಾಡಲು ಬಂದ್ರೆ ನಾವೆಲ್ಲಾ ಒಟ್ಟಿಗೆ ಇರಬೇಕು. ಆದ್ರೆ ಕ್ರಮ ಕೈಗೊಳ್ಳುವಾಗ ಎಚ್ಚರಿಕೆ ಇರಬೇಕು ಅಂತಾ ಪ್ರಧಾನಿ ಮೋದಿಯವರಿಗೆ ನಾನು ಕಿವಿಮಾತು ಹೇಳಿದ್ದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆ ಪ್ರಧಾನಿ ಮೋದಿಯವರಿಗೆ, ನಾವು ನಿಮ್ಮ ಜೊತೆಗೆ ಇದ್ದೇವೆ. ಉಗ್ರರನ್ನ ಮುಗಿಸೋದಾದ್ರೆ ಮುಗಿಸಿ ಎಂದು ಹೇಳಿದ್ದೆವು. ಭಾರತೀಯ ಸೈನಿಕರ ಕಾರ್ಯಾಚರಣೆ ಬಗ್ಗೆ ಪ್ರಸ್ತಾಪಿಸಿದ ಮಾಜಿ ಪ್ರಧಾನಿ ಗೌಡರು, ಆಳುವ ವ್ಯಕ್ತಿಗಳು ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ದೇಶ ಒಡೆಯಲು ಬಿಡಬಾರದು ಎಂದು ಹೇಳಿದರು.
No comments:
Post a Comment