ABC

Friday, 15 February 2019

ದೇಶವೇ ಕಣ್ಣೀರನಲ್ಲಿರುವ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ ಮೋದಿಯವರನ್ನು :ನೆಟ್ಟಿಗರು ಪ್ರಶ್ನಿಸಿದ್ದಾರೆ.

ಝಾನ್ಸಿ, (ಉ.ಪ್ರ): ಅತ್ತ ಭಯೋತ್ಪಾದಕರು ಭಾರತೀಯ ಯೋಧರ ಮೇಲೆ ನಡೆಸಿದ ಭೀಕರ ದಾಳಿಯಿಂದಾಗಿ ನಲ್ವತ್ತು ಮಂದಿ ಯೋಧರನ್ನು ಬಲಿ ಪಡೆದುಕೊಂಡರೆ, ಇತ್ತ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಚುನಾವಣ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಈ ಬಗ್ಗೆ ನೆಟ್ಟಿಗರು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಲ್ವತ್ತು ಮಂದಿ ಯೋಧರ ಬಲಿ ಪಡೆದ ಭಯೋತ್ಪಾದನಾ ದಾಳಿಯಿಂದ ಇಡೀ ದೇಶವೇ ಕಣ್ಣೀರನಲ್ಲಿರುವ ಸಂದರ್ಭದಲ್ಲಿ ಇಂತಹದ್ದೊಂದು ಚುನಾವಣೆ ಪ್ರಚಾರ ನಡೆಸಲು ಇಷ್ಟು ಅವಸರವೇನಿತ್ತು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇನ್ನು ಝಾನ್ಸಿಯಲ್ಲಿ ಚುನಾವಣಾ ರ‌್ಯಾಲಿ ನಡೆಸಿದ ಮೋದಿ ಇದೇ ವೇಳೆ ಭಾಷಣ ನಡೆಸಿದರು.‌ ಪ್ರಾರಂಭದಲ್ಲಿ ಯೋಧರ ಮೇಲಿನ ದಾಳಿಯನ್ನು ಖಂಡಿಸುತ್ತಾ,‌ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ನಮ್ಮನ್ನಗಲಿದ ಯೋಧರ ಕುಟುಂಬದ ದುಃಖದಲ್ಲಿ ಇಡೀ ದೇಶವೇ ನಿಲ್ಲಲಿದೆ. ಮತ್ತು ಉಗ್ರ ಸಂಘಟನೆಗಳು ನಮ್ಮ ಯೋಧರ ಮೇಲೆ ದಾಳಿ ನಡೆಸಿ ಬಹುದೊಡ್ಡ ತಪ್ಪನ್ನು ಮಾಡಿದ್ದೀರಿ. ಇದರ ಪರಿಣಾಮವನ್ನು ಅನಿಭವಿಸುವಿರಿ ಎಂದು ಎಚ್ಚರಿಕೆ ಕೊಟ್ಟರು.

ಇದೇ ವೇಳೆ ಮಾತಾಡಿದ ಪ್ರಧಾನಿ ಮೊದಿ ಪಾಕಿಸ್ತಾನದ ಜೊತೆ ಮಾತುಕತೆಯೊಂದೇ ಪರಿಹಾರ ಮತ್ತು ಪಾಕಿಸ್ತಾನ ಇದಕ್ಕೆ ದೊಡ್ಡ ಮೊತ್ತವನ್ನು ತೆರಬೇಕಾದಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...