ABC

Sunday, 10 February 2019

ಶಾಸಕರನ್ನು ಖರೀದಿ ಮಾಡುವಷ್ಟು ಹಣ ಇಲ್ಲ : ಎಚ್ ಡಿ ಕುಮಾರಸ್ವಾಮಿ.

ಬೆಂಗಳೂರು: ಶಾಸಕರನ್ನು ಖರೀದಿ ಮಾಡಲು ನಾನು ಹೋಗಿಲ್ಲ. ಅಷ್ಟು ಹಣ ನಮ್ಮ ಬಳಿ ಇಲ್ಲ. ನಮ್ಮದು ಪ್ರಾದೇಶಿಕ ಪಕ್ಷ. ಬಿಜೆಪಿಯವರ ಬಳಿ ಸಾಕಷ್ಟು ಹಣ ಇದೆ, ಅವರು ಖರೀದಿ ಮಾಡುತ್ತಾರೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಭಾನುವಾರ ಎಚ್.ಡಿ.ಕುಮಾರಸ್ವಾಮಿ ಅವರು ಪದ್ಮನಾಭನಗರದ ನಿವಾಸದಲ್ಲಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, 'ಹುಬ್ಬಳ್ಳಿ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ' ಎಂದು ದೂರಿದರು.'ಸುಭಾಷ್ ಗುತ್ತೇದಾರ್ ಅವರಿಗೆ ನಾನೇನು ದುಡ್ಡು ಕೊಡ್ತಿನಿ ಬಾರಪ್ಪ ಎಂದು ಕರೆದಿದ್ದೇನಾ?. ಒಮ್ಮೆ ಅರ್ಜಿ ಹಿಡಿದುಕೊಂಡು ಬಂದಾಗ ನೀನು ನಮ್ಮ ಪಕ್ಷದಲ್ಲೇ ಇದ್ದೆ. ಯಾರೋ ಕರೆದರು ಅಂತ ಹೋಗಿದ್ಯಾ. ಪಕ್ಷದಲ್ಲಿ ಇದ್ದಿದ್ದರೆ ಮಂತ್ರಿಯಾಗಿರಬಹುದಿತ್ತು ಎಂದು ಹೇಳಿದ್ದೆ' ಎಂದರು.

ಯಡಿಯೂರಪ್ಪ ಅವತ್ತು ನಾನು ಮಾತನಾಡಿಲ್ಲ ಎಂದರು. ಇವತ್ತು ಒಪ್ಪಿಕೊಂಡಿದ್ದಾರೆ.ಬಹುಶಃ ಮಂಜುನಾಥೇಶ್ವರ ಸ್ವಾಮೀ ಬುದ್ಧಿ ನೀಡಿರಬೇಕು. ಈಗ ಹಳೇ ಸರಕು ಇಟ್ಟುಕೊಂಡು ನಾಳೆ ಚರ್ಚೆ ಮಾಡುತ್ತಾರಂತೆ. ಮಾಡಲಿ ಬಿಡಿ, ಈ ವಿಚಾರದ ಬಗ್ಗೆ ಚರ್ಚೆ ಆಗ ಬೇಕು ಅಂತ ನಾನೇ ಹಿಂದೆ ಒತ್ತಾಯಿಸಿದ್ದೆ' ಎಂದು ಹೇಳಿದರು.
'ಶಾಸಕರನ್ನು ಖರೀದಿ ಮಾಡಲು ನನ್ನ ಬಳಿ ಹಣ ಎಲ್ಲಿದೆ?. ನನ್ನದು ಪ್ರಾದೇಶಿಕ ಪಕ್ಷ ನಡೆಸಬೇಕಲ್ವಾ.ಅವರಿವರ ಭಿಕ್ಷೆ ಬೇಡಿಯೇ ನಡೆಸಬೇಕಲ್ವಾ, ಯಡಿಯೂರಪ್ಪ ಅವರಾದರೆ ಲೂಟಿ ಹೊಡೆದು ಇಟ್ಟುಕೊಂಡಿದ್ದಾರೆ' ಎಂದು ಆರೋಪಿಸಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...