ABC

Saturday, 9 February 2019

ಕುಮಾರಸ್ವಾಮಿಅವರು ಧರ್ಮಸ್ಥಳದಲ್ಲಿ ಶಪಥ ಮಾಡಿರುವ ಬೆನ್ನಲ್ಲೇ ಬಿ. ಎಸ್‌ ಯಡಿಯೂರಪ್ಪ ನಾನು ಮಾತನಾಡಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲ ಭಾರೀ ಸದ್ದು ಮಾಡುತ್ತಿದ್ದು, ರಾಜಕೀಯ ನಾಯಕರ ನಡುವೆ ಆಡಿಯೋ ಕಾಳಗ ಆರಂಭವಾಗಿದೆ. ಫೆ. 8ರಂದು ಬಜೆಟ್‌ ಮಂಡನೆಗೂ ಮೊದಲು ಸಿಎಂ ಕುಮಾರಸ್ವಾಮಿ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಭಾರೀ ಸಂಚಲನ ಮೂಡಿಸಿತ್ತು. ಹೀಗಿರುವಾಗ ಬಿಎಸ್‌ವೈ ಆಡಿಯೋದಲ್ಲಿರುವುದು ನನ್ನ ಧ್ವನಿ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು. ಇತ್ತ ಧರ್ಮಸ್ಥಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ ಆಡಿಯೋದಲ್ಲಿರುವುದು ಯಡಿಯೂರಪ್ಪ ಧ್ವನಿ ಅಲ್ಲವೆಂದಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಶಪಥ ಮಾಡಿದ್ದರು. ಸದ್ಯ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಯಡಿಯೂರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದು, ತಾನು ಶರಣು ಗೌಡನ ಜೊತೆ ಮಾತನಾಡಿರುವುದು ನಿಜ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ ಎಸ್ ಯಡಿಯೂರಪ್ಪ 'ಕುಮಾರಸ್ವಾಮಿ ತರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡುತಿದ್ದಾರೆ. MLA ಮಗನನ್ನು ಕಳಿಸಿಕೊಟ್ಟು ತಮಗೆ ಬೇಕಾದ ಹಾಗೆ ಮಾತನಾಡಿಸಿಕೊಂಡಿದ್ದಾರೆ. ಆದರೆ ನಾನು ಮಾತನಾಡಿರುವುದರಲ್ಲಿ ತಮಗೆ ಬೇಕಾದನ್ನು ಮಾತ್ರ ಬಳಕೆ ಮಾಡಿಕೊಂಡ್ರು. ನನ್ನ ಬಳಿ ಶರಣುಗೌಡ ಬಂದದ್ದು ನಿಜ. ಕುಮಾರಸ್ವಾಮಿ ಕುತಂತ್ರದಿಂದ ನನ್ನ ಬಳಿ ಶರಣುಗೌಡ ಅವರನ್ನು ಕಳುಹಿಸಿ ಕೊಟಿದ್ದಾರೆ. ಯಾವುದೇ ಮುಖ್ಯಮಂತ್ರಿಯೂ ಈವರೆಗೂ ಹೀಗೆ ನಡೆದುಕೊಂಡಿಲ್ಲ. ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕೆಲ ಸತ್ಯಗಳನ್ನು ಮರೆಮಾಚಿದ್ದಾರೆ' ಎಂದಿದ್ದಾರೆ.

ಒಟ್ಟಾರೆಯಾಗಿ ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಶಪಥ ಮಾಡಿರುವ ಬೆನ್ನಲ್ಲೇ ಬಿ. ಎಸ್‌ ಯಡಿಯೂರಪ್ಪ ಇಂತಹ ಹೇಳಿಕೆ ನೀಡಿರುವುದು ಭಾರೀ ಚರ್ಚೆ ಹುಟ್ಟು ಹಾಕಿದ್ದು, ಸಿಎಂ ಶಪಥಕ್ಕೆ ಹೆದರಿ ಅವರು ತಾವು ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡರಾ ಎಂಬ ಮಾತುಗಳೂ ಜೋರಾಗಿದೆ.

ರಾಜಕೀಯದಲ್ಲಿ ಈಗಾಗಲೇ ಶುರುವಾಗಿರುವ ಹಾಗೆ ರಾಜಕೀಯದಿಂದ ನಿವೃತ್ತಿ ಯಾವಾಗ ಎಂದು ಬಿಎಸ್ ಯಡಿಯೂರಪ್ಪನವರ ವಿರುದ್ಧ ಟೀಕೆಗಳ ಪ್ರಹಾರ ನಡೆಯುತ್ತಿವೆ. ಮತ್ತು ಕುಮಾರಸ್ವಾಮಿಯವರು ಇವರನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವುದಕ್ಕೆ ಸಾಧ್ಯಾನಾ ಇವರೇನು ಚಿಕ್ಕ ಮಕ್ಕಳ ಅಥವಾ ಬುದ್ಧಿ ಬ್ರಮಣೆ ಆಗಿರುವವರ ಎಂಬ ಟೀಕೆಗಳು ಸಹ ರಾಜಕೀಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಪ್ರಹಾರವೆ ನಡೆಯುತ್ತಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...