ಟಿ.ನರಸೀಪುರ. ಫೆ.18- ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದ ಎರಡನೇ ದಿನವಾದ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅವರ ಪತ್ನಿ ಹಾಗೂ ಶಾಸಕರೂ ಆದ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಇಂದು ತಿರುಮಲಕೂಡಲ ನರಸೀಪುರದಲ್ಲಿ 11 ನೇ ಮಹಾಕುಂಭಮೇಳದಲ್ಲಿ ಸಾರ್ವಜನಿಕ ಗಂಗಾ ಪೂಜೆ ಮತ್ತು ದೀಪಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.ಇಂದು ಬೆಳಗ್ಗೆ ನದಿಯ ನೀರಿನ ಪ್ರಮಾಣ ಸ್ವಲ್ಪಏರಿಕೆ ಕಂಡಿರುವುದರಿಂದ ಭಕ್ತಾದಿಗಳಿಗೆ ಅಲ್ಪ ಪ್ರಮಾಣದ ತೊಂದರೆ ಎದುರಾಗಿದೆ.
ನದಿ ಮಧ್ಯದ ಯಾಗ ಮಂಟಪದಲ್ಲಿ ಇಂದೂ ಸಹ ಪೂಜಾ ಕೈಂಕರ್ಯಗಳು ಮುಂದುವರೆದಿವೆ. ಪ್ರಾತಃಕಾಲ 9 ಗಂಟೆಗೆ ಚತುರ್ದಶಿ, ನದಿಪಾತ್ರದಲ್ಲಿ ಪುಣ್ಯಾಹ ನವಗ್ರಹ ಹೋಮ,ಸುದರ್ಶನ ಹೋಮ,ರುದ್ರ ಹೋಮ ಇತ್ಯಾದಿ ಕಾರ್ಯಕ್ರಮ ಗಳು ನಡೆದವು.

No comments:
Post a Comment