ABC

Thursday, 14 February 2019

ಉಗ್ರರ ಉಪಟಳ ಅಂತ್ಯಗೊಳಿಸುತ್ತೇನೆ. ಇಲ್ಲದೇ ಹೋದರೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡುತ್ತೇನೆ ಎಂದು ಟ್ವಿಟ್​​ ಮೂಲಕ ನಿವೃತ್ತ ಡಿಜಿ ಶಂಕರ್​​ ಬಿದರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ನಿನ್ನೆ ಮಧ್ಯಾಹನ ದೇಶವೇ ಬಿಚ್ಚಿ ಬೀಳುವಂತ ಕೃತ್ಯ ನಡೆದಿದೆ ದೇಶ ಕಾಯೋ ವೀರ ಯೋಧರ ಮೇಲೆ ಉಗ್ರರ ದಾಳಿ ನಡೆದು 48 ಕ್ಕೂ ಹೆಚ್ಚು ಯೋಧರು ಮೃತು ಪಟ್ಟಿದ್ದಾರೆ, ಹೀಗಿರುವಾಗ ದೇಶದಲ್ಲೆಡೆ ಇದರ ಬಗ್ಗೆ ತೀವ್ರ ವ್ಯಾಪಕ ವ್ಯಕತವಾಗುತ್ತಿದೆ. ನೆನ್ನೆ ಅಂದರೆ ಗುರುವಾರ ಮಧ್ಯಾಹ್ನ ಪುಲ್ವಾಮದ ಅವಂತಿಪುರ್‌ನಲ್ಲಿ ಉಗ್ರರು ಸೇನಾ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದಾರೆ.

ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಆದಿಲ್ ಅಹ್ಮದ್ ದಾರ್ ಸೇನಾ ವಾಹನಕ್ಕೆ ಸ್ಫೋಟಕಗಳನ್ನು ತುಂಬಿಸಿದ್ದ ಕಾರನಿಂದ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬಾಂಬ್​​ ಸ್ಪೋಟಗೊಂಡಿದ್ದು, ಸ್ಥಳದಲ್ಲಿದ್ದ ಸಿಆರ್​​ಪಿಎಫ್​​ ಯೋಧರು ಸಾವನ್ನಪ್ಪಿದ್ದಾರೆ.ಈ ದುರ್ಘಟನೆಯಿಂದ ನಿವೃತ್ತ ಡಿಜಿ ಶಂಕರ್​​ ಬಿದಿರೆ ಅವರು ಕೂಡ ಆಕ್ರೋಶಗೊಂಡಿದ್ದಾರೆ. ಹೀಗಾಗಿ ತಾನು ಉಗ್ರರನ್ನು ಹೊಡೆದುರುಳಿಸಲು ಸಿದ್ದ ಎಂದು ಹೇಳಿದ್ದಾರೆ. ಅಲ್ಲದೇ ಈಗ ನನಗೆ 64 ವರ್ಷ. ಕಾಶ್ಮೀರಕ್ಕೆ ಹೋಗಲು ಅವಕಾಶ ನೀಡಿ ಉಗ್ರರನ್ನು ಅತ್ಯಂಗೊಳಿಸುತ್ತೇನೆ. ಇಲ್ಲವಾದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ನನಗೆ ಈಗ 64 ವರ್ಷ ವಯಸ್ಸು. ಉಗ್ರರ ನಿಗ್ರಹಕ್ಕೆ ನಾನು ಸಿದ್ದನಿದ್ದೇನೆ. ಕಾಶ್ಮೀರಕ್ಕೆ ತೆರಳಲು ಒಂದು ಅವಕಾಶ ಮಾಡಿಕೊಡಿ ಉಗ್ರರನ್ನು ಇಲ್ಲವಾಗಿಸುವೆ. ನೀವು ಅವಕಾಶ ನೀಡಿದರೆ ಈಗಲೇ ತೆರಳುತ್ತೇನೆ. ಅಲ್ಲಿಯೇ ಉಗ್ರರ ಉಪಟಳ ಅಂತ್ಯಗೊಳಿಸುತ್ತೇನೆ. ಇಲ್ಲದೇ ಹೋದರೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡುತ್ತೇನೆ ಎಂದು ಟ್ವಿಟ್​​ ಮೂಲಕ ನಿವೃತ್ತ ಡಿಜಿ ಶಂಕರ್​​ ಬಿದರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...