ABC

Friday, 1 March 2019

60 ವರ್ಷದಿಂದ ಯಾರೂ ಏನೂ ಮಾಡಿಲ್ಲ, ಎಲ್ಲ ಬಿಜೆಪಿಯವ್ರೇ ಮಾಡಿದ್ದು: ಸಚಿವ ಡಿ.ಕೆ. ಶಿವಕುಮಾರ್.

ದೇಶ ರಕ್ಷಣೆ ಮಾಡಬೇಕಾದ್ದು ಎಲ್ಲ ಪಕ್ಷದ ರಾಜಕಾರಣಿಗಳ ಜವಬ್ದಾರಿಯಾಗಿದೆ. ಆದ್ರೆ ಬಿಜೆಪಿಯವರು ಎಲ್ಲ ನಾವೇ ಮಾಡ್ತಿದ್ದೇವೆ ಎಂದು ಹೇಳ್ತಿದ್ದಾರೆ. ಪಾಪ 60 ವರ್ಷಗಳಿಂದ ಯಾರೂ ಏನೂ ಮಾಡಿಲ್ಲ ಅವರೇ ಎಲ್ಲ ಮಾಡ್ತಿದ್ದಾರೆ ಎಂದು ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ದೇಶ ರಕ್ಷಣೆ ಮಾಡಬೇಕಾದ್ದು ಎಲ್ಲ ಪಕ್ಷದ ರಾಜಕಾರಣಿಗಳ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ ಎಂದು ಅಂದುಕೊಂಡಿದ್ದೇನೆ. ಬಿಜೆಪಿ ಪಕ್ಷದವರು ಪ್ರತಿ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದು ಎಲ್ಲ ನಾವೇ ಮಾಡಿದ್ದೇವೆ ಎಂದು ಹೇಳಿಕೊಳ್ತಿದ್ದಾರೆ. ಪಾಪ 60 ವರ್ಷಗಳಿಂದ ಯಾರು ಏನೂ ಮಾಡ್ಲಿಲ್ಲ, ಎಲ್ಲ ಅವರೇ ಮಾಡ್ತಿದ್ದಾರೆ ಎಂದು ತಿಳಿಸಿದ್ರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಮಾತನಾಡಿ, ಪಾಕಿಸ್ತಾನದ ಹೆದರಿಕೆ ಬೆದರಿಕೆಗೆ ಬಗ್ಗುವಂತಹ ಪ್ರಶ್ನೆಯಿಲ್ಲ. ನಮ್ಮಲ್ಲೂ ಕೂಡಾ ಎಲ್ಲಾ ರೀತಿಯ ತಯಾರಿ ಇದೆ. ಅದು ಹಿಂದಿನಿಂದಲೂ ಇಂದಿರಾಗಾಂಧಿ, ನೆಹರೂ, ವಾಜಪೇಯಿರವರ ಕಾಲದಲ್ಲೂ ಯುದ್ಧ ಮಾಡಿದ್ದು ಗೆದ್ದಿದ್ದೇವೆ. ಹಾಗಾಗಿ ಯುದ್ಧವನ್ನ ನಾವು ಬಯಸುವುದಿಲ್ಲ. ಅವರು ಮಾಡಬೇಕು ಅಂದ್ರೆ ನಾವು ಸುಮ್ಮನೆ ಕೂರಲಾಗುವುದಿಲ್ಲ ಎಂದು ತಿಳಿಸಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...