ABC

Friday, 1 March 2019

ದೇಶಾದ್ಯಂತ ಸಂಭ್ರಮಾಚರಣೆ: ವೀರಪುತ್ರ ಅಭಿನಂದನ್ ಆಗಮನಕ್ಕಾಗಿ.

ವಾಘಾ ಗಡಿ: ಭಾರತದ ಪಾಲಿಗೆ ಇಂದು `ಅಭಿ’ನಂದನಾ ದಿನ. ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಇಂದು ತಾಯ್ನಾಡಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಅಭಿನಂದನ್ ಭಾರತ ಪ್ರವೇಶಿಸಿರುವ ವಿಷಯ ತಿಳಿಯುತ್ತಿದ್ದಂತೆ ದೇಶಾದ್ಯಂತ ಸಂಭ್ರಮ, ವಿಜಯೋತ್ಸವ ಮುಗಿಲು ಮುಟ್ಟಿತ್ತು.
ಇಂದು ಬೆಳಿಗ್ಗೆಯಿಂದತೆ ವೀರಪುತ್ರ ಅಭಿನಂದನ್ ಆಗಮನಕ್ಕಾಗಿ ಸಾವಿರಾರು ಭಾರತೀಯರು ವಾಘಾ ಗಡಿ ಬಳಿ ಕಾದು ಕುಳಿತಿದ್ದರು. ಮದ್ಯಾಹ್ನದ ವೇಳೆಗೆ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುತ್ತವೆ ಎಂದಿದ್ದ ಪಾಕ್ ತನ್ನ ದುರ್ಬುದ್ಧಿಯನ್ನೂ ಇಲ್ಲಿಯೂ ಪ್ರದರ್ಶಿಸಿತು.

ಸಂಜೆಯಾದರೂ ಭಾರತೀಯರಿಗೆ ಅಭಿನಂದನ್ ಮುಖ ನೋಡುವ ಭಾಗ್ಯ ಸಿಕ್ಕಿರಲಿಲ್ಲ, ಕೊನೆಗೆ 9.24 ರ ವೇಳೆಗೆ ಅಭಿನಂದನ್ ಅವರನ್ನು ಪಾಕ್ ಭಾರತಕ್ಕೆ ಹಸ್ತಾಂತರಿಸಿತು.
ಭಾರತ-ಪಾಕಿಸ್ತಾನ ಗಡಿ ಪ್ರದೇಶವಾದ ವಾಘಾ ಮೂಲಕ ಅಭಿನಂದನ್ ಇಂದು ತಾಯ್ನೆಲವನ್ನು ಸ್ಪರ್ಶಿಸುತ್ತಿದ್ದಂತೆ ಈ ಪ್ರದೇಶದಲ್ಲಿ ನೆರೆದಿದ್ದ ಸಹಸ್ರಾರು ಭಾರತೀಯರಲ್ಲಿ ಮಿಂಚಿನ ಸಂಚಲನವಾಯಿತು.

ಜಯಘೋಷಗಳೊಂದಿಗೆ ಸಹಸ್ರಾರು ಮಂದಿ ವೀರಯೋಧ ಅಭಿನಂದನ್‍ಗೆ ಅದ್ಧೂರಿ ಸ್ವಾಗತ ಕೋರಿದರು.ಕೇಂದ್ರ ಸರ್ಕಾರದ ಸಚಿವರು, ಸಂಸದರು, ಸೇನಾ ಪಡೆಗಳ ಉನ್ನತಾಧಿಕಾರಿಗಳು, ಅಭಿನಂದನ್ ಅವರ ಪೋಷಕರು, ಬಂಧು-ಮಿತ್ರರು ಮತ್ತು ದೇಶಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಬೆಳಗ್ಗೆಯಿಂದಲೇ ವಾಘಾ ಗಡಿಯಲ್ಲಿ ಜಮಾಯಿಸಿದ್ದರು.ಪಾಕಿಸ್ತಾನ ಪ್ರಾಂತ್ಯದಿಂದ ವಿಶೇಷ ಭದ್ರತಾ ವಾಹನದಲ್ಲಿ ವಾಘಾ ಗಡಿಗೆ ಅಭಿನಂದನ್ ಅವರನ್ನು ಕರೆತರಲಾಯಿತು. ನಂತರ ಸೇನಾ ಔಪಚಾರಿಕ ಪ್ರಕ್ರಿಯೆ ಬಳಿಕ ವಿಂಗ್ ಕಮಾಂಡರ್ ಅವರನ್ನು ಭಾರತಕ್ಕೆ ಅಧಿಕೃತವಾಗಿ ಒಪ್ಪಿಸಲಾಯಿತು.ನಂತರ ವಾಘಾ ಗಡಿಯ ಹೆಬ್ಬಾಗಿಲಿನ ಮೂಲಕ ಅಭಿನಂದನೆ ತಾಯ್ನಾಡಿಗೆ ಪಾದಾರ್ಪಣೆ ಮಾಡಿ ಭಾರತ ಭೂಮಿಗೆ ನಮಿಸಿ ಗೌರವ ಸಲ್ಲಿಸುತ್ತಿದ್ದಂತೆ ಪ್ರಚಂಡ ಕರತಾಡನ ಮತ್ತು ಜಯಘೋಷಗಳು ಮಾರ್ಧನಿಸಿದವು.

ನಂತರ ಅಭಿನಂದನ್ ಅವರು ವಾಘಾ ಗಡಿಯಲ್ಲಿ ಹಾಜರಿದ್ದ ಉನ್ನತ ಸೇನಾಧಿಕಾರಿಗಳಿಗೆ ಗೌರವ ವಂದನೆ ಸಲ್ಲಿಸಿ ಪೋಷಕರು ಮತ್ತು ಬಂಧುಮಿತ್ರರನ್ನು ಆಲಂಗಿಸಿದರು. ಈ ಪುನರ್ ಮಿಲನದ ದೃಶ್ಯ ವೀಕ್ಷಿಸುತ್ತಿದ್ದ ನೆರದಿದ್ದ ಜನರಲ್ಲಿ ಆನಂದ ಬಾಷ್ಪ ಉಕ್ಕಿ ಹರಿಯಿತು.ನಂತರ ಭಾರತೀಯ ಧ್ವಜಗಳು ರಾರಾಜಿಸುತ್ತಿದ್ದ ಸೇನಾ ವಾಹನದಲ್ಲಿ ಅಭಿನಂದನ್ ಸಾಗಿದಾಗ ಅಪಾರ ಜನಸ್ತೋಮ ಅವರತ್ತ ಕೈ ಬಿಸಿ ಅಭಿನಂದನೆಗಳ ಸುರುಮಳೆಗರೆದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...