ABC

Saturday, 9 March 2019

ಶೋಕಿ ರಾಜಕಾರಣ ಮಾಡಲು ಬಂದಿಲ್ಲ ನಿಮ್ಮೆಲ್ಲರ ಗುಲಾಮನಾಗಿ ಸೇವೆ ಮಾಡ್ತೀನಿ: ನಿಖಿಲ್ ಕುಮಾರಸ್ವಾಮಿ.

ಮಳವಳ್ಳಿ: ನಾನು ರಾಜಕಾರಣವನ್ನ ಶೋಕಿಗಾಗಿ ಮಾಡಲು ಬಂದಿಲ್ಲ. ಕೇವಲ ನಟನಾಗಿ ಕಾಲ ಕಳೆಯಬಹುದಿತ್ತು. ಆದರೆ, ಈ ಕುಟುಂಬದಲ್ಲಿನ ಹಿರಿಯರಂತೆ ನಿಮ್ಮೆಲ್ಲರ ಗುಲಾಮನಾಗಿ ಸೇವೆ ಮಾಡಲು ಅವಕಾಶ ಕೊಡಿ ಎಂದು ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಡಾ.ಕೆ.ಅನ್ನದಾನಿಗೆ ಏರ್ಪಡಿಸಿದ್ದ ತವರಿನ ಸನ್ಮಾನ ಸಮಾರಂಭ ದಲ್ಲಿ ಮಾತನಾಡಿದವರು.
ನಾನು ಸಂಬಂಧಗಳಿಗೆ ಬೆಲೆ ಕೊಡುತ್ತೇನಿ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸ ಬಹುದು. ಯಾರೇ ನಿಲ್ಲಲಿ, ಒಳ್ಳೆಯ ಮನಸ್ಸಿನಿಂದ ಸ್ವಾಗತಿಸಿ ಎಂದು ಕೋರಿದರು.ಅಂತಿಮವಾಗಿ ತೀರ್ಪು ನೀಡೋರು ನೀವು. ತೀರ್ಪು ಏನೇ ಆದರೂ ಅದನ್ನ ನಾವು ಪ್ರೀತಿಯಿಂದ ಸ್ವಾಗತಿಸುತ್ತೇವೆ. ಲೋಕಸಭಾ ಸದಸ್ಯನಾಗಿ ನನ್ನನ್ನು ಆಯ್ಕೆ ಮಾಡಿದರೆ, ನಾನು ಋಣಿಯಾಗಿರುತ್ತೇನೆ ಎಂದರು.

ಅಭ್ಯರ್ಥಿಯಾಗಬೇಕೆಂಬುದು ಪಕ್ಷದ ತೀರ್ಮಾನ, ನಮ್ಮ ತಂದೆಯವರಿಗೆ ಜಿಲ್ಲಾಯ ಎಲ್ಲಾ ನಾಯಕರ ಒಪ್ಪಿಗೆ ಪಡೆದು, ನಿರ್ಧಾರ ಮಾಡಿ ಎಂದು ಹೇಳಿz್ದÉ ನಮ್ಮ ತಂದೆ ಸಿಎಂ ಆದ ಮಾತ್ರಕ್ಕೆ ಮಗನನ್ನ ರಾಜಕೀಯಕ್ಕೆ ತರಬೇಕು ಅಂತಾ ತರ್ತಿಲ್ಲ. ನಾನು ಈ ಕುಟುಂಬದಲ್ಲಿ ಹುಟ್ಟಿರೋದು ನನ್ನ ಪುಣ್ಯ ಎಂದು ತಿಳಿಸಿದರು.

ಅಂಬಿ ಅಣ್ಣನ ಕಳೆದುಕೊಂಡು ತುಂಬಾ ನೋವಾಗಿದೆ. ಕುಮಾರಸ್ವಾಮಿ ಸಿಎಂ ಆಗಿ, ಅಂಬಿ ಸ್ನೇಹಿತರಾಗಿ ನಡೆದು ಕೊಂಡದ್ದನ್ನ ನೀವೇ ನೋಡಿದ್ದೀರಾ ಎಂದರು. ಟೀಕೆ ಮಾಡುವವರು ಯೋಚನೆ ಮಾಡಿ ಮಾತನಾಡಿ. ರಾಮನಗರ, ಮೈಸೂರು, ಮಂಡ್ಯ, ಹಾಸನಕ್ಕೆ ಮಾತ್ರ ಸರ್ಕಾರ ಸೀಮಿತ ಅಂತಾರೆ. 44ಲಕ್ಷ ರೈತರ ಸಾಲಮನ್ನಾದಲ್ಲಿ ಉತ್ತರ ಕರ್ನಾಟಕದ್ದೇ ಸಿಂಹ ಪಾಲು. ಟೀಕೆ ಮಾಡೋಕೂ ಮುನ್ನ ಸ್ವಲ್ಪ ಮಾಹಿತಿ ಸಂಗ್ರಹ ಮಾಡಿ ಎಂದರು.ನಮ್ಮದು ರೈತರ ಪಕ್ಷ. ಕೆಲವರು ಕ್ರಿಯೇಟ್ ಮಾಡಿಕೊಂಡು ಟೀಕೆ ಮಾಡ್ತಿದ್ದಾರೆ. ಇದು ಕೆಲವು ವಿರೋಧ ಪಕ್ಷಗಳ ಕುತಂತ್ರ. ಗೋ ಬ್ಯಾಕ್ ನಿಖಿಲ್ ಹೇಳ್ತಾರೆ. ಅದನ್ನ ಹೇಳಬೇಕಿರೋದು ಜನರು ಎಂದು ವಿಶ್ವಾಸದಿಂದ ನುಡಿದರು.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಜಯರಾಮು, ಜಿಲ್ಲಾಧ್ಯಕ್ಷ ರಮೇಶ್, ಡಿ,ಜಯರಾಮು, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ, ತಾಲ್ಲೂಕು ಅಧ್ಯಕ್ಷ ರವಿ(ಕಂಸಾಗರ) ಮುಂತಾದವರಿದ್ದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...