ಹಾಸನ: ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಬೆಂಬಲ ಇಲ್ಲ ಎಂದಿದ್ದ ಮಾಜಿ ಸಚಿವ ಎ.ಮಂಜು ಹೇಳಿಕೆಗೆ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನವರು ರಾಜ್ಯದ 28 ಕ್ಷೇತ್ರಗಳಿಗೂ ಅರ್ಜಿ ಹಾಕಲಿ. ದೇವೇಗೌಡ್ರು ಮತ್ತು ಸಿಎಂ ಕುಮಾರಸ್ವಾಮಿ ಅಭ್ಯರ್ಥಿ ಯಾರು ಎಂದು ನಿರ್ಧರಿಸುತ್ತಾರೆ. ಬೇಕಾದರೆ ಕಾಂಗ್ರೆಸ್ನವರೇ ಸ್ಪರ್ಧೆ ಮಾಡಲಿ. ನಾವೇನು ಹಿಡಿದುಕೊಂಡಿಲ್ಲ. ಇವರ ಹೇಳಿಕೆಗಳಿಗೆಲ್ಲಾ ಉತ್ತರಿಸಿದರೆ ನಾವು ಪೊಳ್ಳಾಗಬೇಕಾಗುತ್ತೆ ಎಂದರು.
ಪ್ರಜ್ವಲ್ ರೇವಣ್ಣ ಸರ್ಕಾರಿ ಕಾರು ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ ಪ್ರಜ್ವಲ್ ಹತ್ತಿರ ಕಾರು ಇಲ್ಲವೇ?. ಅವನು ಏಕೆ ಸರ್ಕಾರಿ ಕಾರು ಬಳಸುತ್ತಾನೆ. ಕಾರು ಕೆಟ್ಟಾಗ ಡ್ರಾಪ್ ಪಡೆಯುವುದು ಅಪರಾಧವೇ. ಅದಕ್ಕೆ ಹೀಗೆಲ್ಲಾ ಟೀಕೆ ಮಾಡುವುದು ಸರಿಯಲ್ಲ ಎಂದರು.
ನಾವೇಕೆ ಬಿಜೆಪಿ ಜೊತೆ ಹೋಗೋಣ.?
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇದೆಯೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವ್ಯಾಕೆ ಬಿಜಿಪಿಯವರ ಮನೆ ಬಾಗಿಲಿಗೆ ಹೋಗೋಣ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.
ಯಡಿಯೂರಪ್ಪ ಅವರ ಬಳಿ ನಾನ್ಯಾವುದೇ ಚರ್ಚೆ ನಡೆಸಿಲ್ಲ. ನಮ್ಮ ಕಾರು ಎಂದೂ ಯಡಿಯೂರಪ್ಪ ಅವರ ಮನೆ ಹತ್ತಿರ ತಿರುಗಲ್ಲ. ನಾಳೆ ಕೇಂದ್ರ ಬಜೆಟ್ ಹಿನ್ನೆಲೆ ಹಲವು ಪ್ರಸ್ತಾವನೆ ಸಲ್ಲಿಸಿದ್ದೇವೆ. ಯಾವುದಕ್ಕೆ ಮಣೆ ಹಾಕುತ್ತಾರೆ ಎಂಬುದನ್ನ ನಾಳೆ ಮಧ್ಯಾಹ್ನದವರೆಗೂ ಕಾದು ನೋಡಬೇಕು. ಸಿಎಂ ಕುಮಾರಸ್ವಾಮಿ ಅವರಂತೆ ಕೇಂದ್ರವೂ ಒಂದೇ ಹಂತದಲ್ಲಿ ಎಲ್ಲಾ ರೈತರ ಸಾಲಮನ್ನಾ ಮಾಡಲಿ ಎಂದು ಆಗ್ರಹಿಸಿದರು.
ಮೆಡಿಕಲ್ ಹಾಸ್ಟೆಲ್ ಕಾಲೇಜಿಗೆ 144 ಕೋಟಿ ಅನುಮೋದನೆ
ಇನ್ನು ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಹಾಸನದ ಮೆಡಿಕಲ್ ಕಾಲೇಜು ಹಾಗೂ ಹಾಸ್ಟೆಲ್ಗೆ ಒಟ್ಟು144 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. 26 ಕೋಟಿ ವೆಚ್ಚದಲ್ಲಿ ಆಲಗೊಂಡನಹಳ್ಳಿಯ ಎರಡನೇ ಹಂತದ ಏತ ನೀರಾವರಿ ಯೋಜನೆಗೂ ಅನುಮೋದನೆ ದೊರೆತಿದೆ. ಹಾಗೆಯೇ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಹಾಸನ ವಿಮಾನ ನಿಲ್ದಾಣಕ್ಕೂ ಫೆ. 8ರ ಬಜೆಟ್ನಲ್ಲಿ ಶೀಘ್ರದಲ್ಲೇ ಪೂರ್ಣಗೊಳಿಸಲು ನಿರ್ಧಾರ ತೆಗದುಕೊಳ್ಳಲಾಗುವುದು ಎಂದು ತಿಳಿಸಿದರು.
ಆನೆಕೆರೆ, ಅರಕಲಗೂಡು, ಹೊಳೆನರಸೀಪುರ, ಕೋಡಿಹಳ್ಳಿ ಭಾಗಗಳು ಒಳಗೊಂಡಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಯೋಜನೆಗಳು ಹಲವು ವರ್ಷಗಳಿಂದ ಕಾರ್ಯಗತವಾಗಿಲ್ಲ. ಅರಸೀಕೆರೆ, ದುದ್ದ, ಶಾಂತಿಗ್ರಾಮ ಭಾಗದಲ್ಲಿ ಕುಡಿಯುವ ನೀರನ್ನು ಭಿಕ್ಷೆಯ ರೀತಿಯಲ್ಲಿ ಕೇಳಿತ್ತಿದ್ದಾರೆ. ನಾಳೆ ಜಿಲ್ಲೆಗೆ ಗ್ರಾಮೀಣಾಭಿವೃದ್ಧಿ ಸಚಿವರು ಆಗಮಿಸಲಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಂಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಬೆಂಗಳೂರಿನಿಂದ ಮಂಗಳೂರಿನ ಕರಾವಳಿಯನ್ನು ಸಂಪರ್ಕಿಸುವ ಶಿರಾಡಿ ಘಾಟ್ನ ಟನಲ್ ರಸ್ತೆ ನಿರ್ಮಾಣಕ್ಕೆ 10 ಸಾವಿರ ಕೋಟಿಯನ್ನು ಕೇಂದ್ರ ಬಜೆಟ್ನಲ್ಲಿ ಘೋಷಿಸುವಂತೆ ರಾಷ್ತ್ರೀಯ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಾಗಿದೆ ಎಂದರು.


No comments:
Post a Comment