ABC

Tuesday, 29 January 2019

ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ್ದಾಗ ಕೃಷ್ಣದೇವರಾಯನ ಕಾಲದಂಥ ಆಡಳಿತ ನೀಡಿದ್ದ ಎಚ್ಡಿಕೆ


ಮಂಡ್ಯ: ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್​ನ ನಾಯಕರು ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ, ನಾಯಕತ್ವದ ವಿಚಾರದಲ್ಲಿ ನೀಡುತ್ತಿರುವ ವ್ಯತಿರಿಕ್ತ ಹೇಳಿಕೆಗಳಿಂದ ಆಕ್ರೋಶಗೊಂಡಿರುವ ಸಚಿವ ಸಿ.ಎಸ್​ ಪುಟ್ಟರಾಜು ಇಂದು ಕಾಂಗ್ರೆಸ್​ ವಿರುದ್ಧ ತಿರುಗಿಬಿದ್ದಿದ್ದಾರೆ.

ಕಾಂಗ್ರೆಸ್​ನ ಕೆಲವು ಶಾಸಕರು ಹದ್ದು ಮೀರಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಬಿಜೆಪಿ ಜತೆಗೆ ಸರ್ಕಾರ ನಡೆಸಿದ್ದಾಗಲೇ ಪರಿಸ್ಥಿತಿ ಚೆನ್ನಾಗಿತ್ತು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿರುವ ಸಚಿವ ಸಿ.ಎಸ್.ಪುಟ್ಟರಾಜು “ಕೆಲವು ಕಾಂಗ್ರೆಸ್ ಶಾಸಕರು ಹದ್ದು ಮೀರಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾದ ಬೇಸರದಿಂದಲೇ ಸಿಎಂ ಎಚ್ಡಿಕೆ ನಿನ್ನೆ ರಾಜೀನಾಮೆ ನೀಡುವ ಮಾತನ್ನಾಡಿದ್ದಾರೆ. ಕಾಂಗ್ರೆಸ್ ಪಕ್ಷದವರು ಅವರ ಶಾಸಕರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಂಟಾಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ,”ಎಂದು ಪುಟ್ಟರಾಜು ಎಚ್ಚರಿಕೆ ನೀಡಿದ್ದಾರೆ.
ಜೆಡಿಎಸ್​-ಬಿಜೆಪಿ ನಡುವಿನ ಸಮ್ಮಿಶ್ರ ಸರ್ಕಾರದ ಅವಧಿಯನ್ನು ನೆನಪು ಮಾಡಿಕೊಂಡಿರುವ ಪುಟ್ಟರಾಜು, ಹಿಂದೆ ಬಿಜೆಪಿಯೊಂದಿಗೆ ನಾವು ಸರ್ಕಾರ ನಡೆಸಿದ್ದೇವೆ. ಆ ಆಡಳಿತನ್ನು ಇಡೀ ರಾಜ್ಯವೇ ಮೆಚ್ಚಿಕೊಂಡಿತ್ತು. ಕೃಷ್ಣದೇವರಾಯನ ಕಾಲದ ಆಡಳಿತವನ್ನು ನೆನಪಿಸುವ ಸರ್ಕಾರವನ್ನು ಕುಮಾರಸ್ವಾಮಿ ನೀಡಿದ್ದರು. ಆದರೆ ಕಾಂಗ್ರೆಸ್ ಶಾಸಕರು ಬೆಳಗೆದ್ದರೆ ಬೀದಿಯಲ್ಲಿ ನಿಂತು ಮಾತನಾಡುತ್ತಾ ನಿಲ್ಲುತ್ತಿದ್ದಾರೆ. ಏನೇ ಆದರೂ ನಾವು ಬಿಜೆಪಿ ಜತೆಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದೂ ಅವರು ತಿಳಿಸಿದರು.

ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಎಲ್ಲ ಕಾರ್ಯಕ್ರಮಗಳನ್ನೂ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಅವರು ಸ್ಪಷ್ಟಪಡಿಸಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...