ABC

Wednesday, 30 January 2019

ಕಿಚ್ಚ ಸುದೀಪ್ ಅಂತವ್ರೇ ನಿಖಿಲ್ ಭವಿಷ್ಯದ ಭರವಸೆಯ ನಟ ಅಂತ ಹೆಮ್ಮೆಯಿಂದ ಹೇಳ್ತಿರಬೇಕಾದ್ರೆ, ಅವ್ರನ್ನ ಬೆಂಬಲಿಸೋದು ಬಿಟ್ಟು ಆಡಿಕೊಳ್ಳೋದು ಎಷ್ಟು ಸರಿ ನೀವೇ ಹೇಳಿ.


ಸೀತಾರಾಮ ಕಲ್ಯಾಣ ಸಿನಿಮಾ ರಿಲೀಸ್ ಆದಾಗಿನಿಂದ್ಲೂ ನಿಖಿಲ್ ಅಭಿನಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ. ಒಂದಷ್ಟು ಮಂದಿ ಬೇಕು ಅಂತಲೇ ನಿಖಿಲ್ ಕಾಲೆಳೆಯೋಕ್ಕೆ ಮುಂದಾಗಿದ್ದಾರೆ. ಅಂತಹ ನೆಟ್ಟಿಗರಿಗೆ ಯುವರಾಜ ಹುಬ್ಬೇರಿಸೋ ಸುದ್ದಿ ಕೊಟ್ಟಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.
ಸ್ಯಾಂಡಲ್​ವುಡ್​ನ ಒನ್ ಆಫ್ ದ ಹೈ ಬಜೆಟ್ ಸಿನಿಮಾ ಸೀತಾರಾಮ ಕಲ್ಯಾಣ, ಯಶಸ್ವೀ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ನಿಖಿಲ್ ಅಭಿನಯದಲ್ಲಿ ಜಾಗ್ವಾರ್​ಗಿಂತ ಇಲ್ಲಿ ಪಕ್ವತೆ ಕಾಣ್ತಿದೆ. ಅದರಲ್ಲಿ ಎರಡು ಮಾತಿಲ್ಲ. ಆದರೂ ಸಹ ನಿಖಿಲ್ ನಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಒಂದಚ್ಟು ಮಂದಿ ನೆಟ್ಟಿಗರು ಕಾಲೆಳೆಯೋ ಪ್ರಯತ್ನ ಮಾಡ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ ನಟನೆ ಬರಲ್ಲ. ನಟನಾಗೋ ಯೋಗ್ಯತೆಯೇ ಇಲ್ಲ ಅನ್ನೋ ರೀತಿ ಕೆಟ್ಟ ಕಮೆಂಟ್ಸ್ ಮೂಲಕ ಅವ್ರ ಸಣ್ಣತನವನ್ನ ತೋರುತ್ತಿದ್ದಾರೆ. ಅದ್ರಲ್ಲೂ ನಿಖಿಲ್​ ಸಿನಿಮಾ ಮಾಡ್ಬೇಕು ಅಂದ್ರೆ ಅದಕ್ಕೆ ಖುದ್ದು ಕುಮಾರಸ್ವಾಮಿಯೇ ಬಂಡವಾಳ ಹಾಕ್ಬೇಕು. ಬೇರೆ ಯಾರು ತಾನೆ ಪ್ರೊಡ್ಯೂಸ್ ಮಾಡೋಕ್ಕೆ ಸಾಧ್ಯ ಅಂತೆಲ್ಲಾ ಆಡಿಕೊಳ್ತಿದ್ರು. ಅಂತಹವ್ರಿಗೆಲ್ಲಾ ಸ್ಯಾಂಡಲ್​ವುಡ್ ಯುವರಾಜ ಕಿಕ್ ಬ್ಯಾಕ್ ನ್ಯೂಸ್ ಕೊಟ್ಟಿದ್ದಾರೆ. ಆದ್ರೆ ಅದಕ್ಕೂ ಮುನ್ನ ನಿಖಿಲ್ ನಟನೆ ಬಗ್ಗೆ ಸುದೀಪ್ ಏನು ಹೇಳಿದ್ರು ಅನ್ನೋದನ್ನ ಒಮ್ಮೆ ಕೇಳಿಬಿಡಿ.

ನಿಖಿಲ್ ನಟನೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ಲೀನ್ ಬೋಲ್ಡ್..
ಯೆಸ್.. ಇದು ಅಕ್ಷರಶಃ ನಿಜ. ಖುದ್ದು ಸುದೀಪ್ ಅವ್ರೇ ಸೀತಾರಾಮ ಕಲ್ಯಾಣ ನೋಡಿ ನಿಖಿಲ್​ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅದ್ರಲ್ಲೂ ನಿಖಿಲ್ ಕುಮಾರ್ ಅಭಿನಯದ ಬಗ್ಗೆ ಹಾಡಿ ಹೊಗಳಿದ್ದಾರೆ. ನಟನೆಗಷ್ಟೇ ಸೀಮಿತವಾಗದ ಸುದೀಪ್, ನಿರ್ದೇಶನ, ನಿರ್ಮಾಣದಲ್ಲೂ ಪಳಗಿದ ಚಿತ್ರರಂಗದ ಬಹುಮುಖ ಪ್ರತಿಭೆ. ಅಂತಹ ಕಿಚ್ಚ, ಮತ್ತೊಬ್ಬ ಕಲಾವಿದನ ಬಗ್ಗೆ ಸುಖಾಸುಮ್ಮನೆ ಹೊಗಳೋಕ್ಕೆ ಸಾಧ್ಯವಿಲ್ಲ.
ಖಂಡಿತಾ ನಿಖಿಲ್ ಚಿತ್ರರಂಗದ ಭರವಸೆಯ ನಾಯಕನಟ. ಅವ್ರ ನಟನೆ ನಂಗೆ ಇಷ್ಟವಾಯ್ತು. ದೃಶ್ಯಗಳಿಗೆ ತಕ್ಕನಾಗಿ ಹೇಗೆ ಅಭಿನಯಿಸಬೇಕೋ ಹಾಗೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಜನರ ಮನಸ್ಸಿಗೆ ಮತ್ತಷ್ಟು ಹತ್ತಿರ ಆಗಲು, ಇನ್ನಷ್ಟು ಸರಳವಾದಂತಹ ಸ್ಕ್ರಿಪ್ಟ್​ಗಳನ್ನ ಆಯ್ಕೆ ಮಾಡಿಕೊಂಡು ನಟಿಸೋದು ನೋಡಲು ಬಯಸುತ್ತೇನೆ.’ ಇದು ಕಿಚ್ಚ ಒಬ್ಬ ಪ್ರತಿಭಾನ್ವಿತ ಕಲಾವಿದನ ಕುರಿತು ಮನಸಾರೆ ಸೋಷಿಯಲ್ ಮೀಡಿಯಾದಲ್ಲಿ ಬರೆದ ಪದಗಳು. ಅಂದಹಾಗೆ ನಿಖಿಲ್ ಪಾಲಿಗೆ ಇದು ಬಹುದೊಡ್ಡ ಕಾಂಪ್ಲಿಮೆಂಟ್ ಕೂಡ ಹೌದು. ನಟನೆ ಅನ್ನೋದು ಯಾರಪ್ಪನ ಸ್ವತ್ತೂ ಅಲ್ಲ. ಶ್ರದ್ಧೆ, ಶಿಸ್ತು ಅನ್ನೋದು ಇದ್ರೆ ಕಲಾದೇವತೆ ತುಂಬಾ ಸರಳವಾಗಿ ಒಲಿಯುತ್ತಾಳೆ ಅನ್ನೋದಕ್ಕೆ ನಿಖಿಲ್ ಬೆಸ್ಟ್ ಎಕ್ಸಾಂಪಲ್.

ಸೋಲು- ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸೋದು ಕಲಾವಿದನ ಕರ್ತವ್ಯ. ಅದ್ರಂತೆ ನಿಖಿಲ್​ಗೆ ಎಷ್ಟೇ ಮಂದಿ ಕಾಲೆಳೆದರೂ ಅವ್ರ ವಿರುದ್ಧ ತುಟಿ ಬಿಚ್ಚಿಲ್ಲ. ಹಾಗಂತ ನಿಖಿಲ್ ಸುಮ್ಮನೆ ಕೈಕಟ್ಟಿ ಕೂತಿಲ್ಲ. ತನ್ನ ಕೆಲಸದ ಮೂಲಕ ಅಂತಹವ್ರಿಗೆ ತಕ್ಕ ಉತ್ತರ ಕೊಡೋಕ್ಕೆ ಸಜ್ಜಾಗಿದ್ದಾರೆ. ಸೌತ್ ಸಿನಿದುನಿಯಾದಲ್ಲಿ ತನಗಿರೋ ಡಿಮ್ಯಾಂಡ್ ಎಂಥದ್ದು ಅನ್ನೋದನ್ನ ರಿವೀಲ್ ಮಾಡಿದ್ದಾರೆ.
ಸೀತಾರಾಮ ಕಲ್ಯಾಣ ಸಿನಿಮಾ ಆಗ್ತಿದ್ದಂತೆ ನಿಖಿಲ್ ಮತ್ತೆರಡು ಮೆಗಾ ಪ್ರಾಜೆಕ್ಟ್​ಗಳಿಗೆ ಕೈ ಹಾಕ್ತಿದ್ದಾರೆ. ಅವು ಅನಿತಾ ಕುಮಾರಸ್ವಾಮಿ ನಿರ್ಮಾಣದ ಚನ್ನಾಂಬಿಕಾ ಫಿಲಂಸ್ ಬ್ಯಾನರ್​ನ ಸಿನಿಮಾಗಳು ಅಂದ್ಕೊಂಡ್ರೆ ತಪ್ಪಾಗುತ್ತೆ. ಹೌದು.. ಒಂದು ಇಂಟರ್​ನ್ಯಾಷನಲ್ ಹಾಗೂ ಮತ್ತೊಂದು ಸ್ಯಾಂಡಲ್​ವುಡ್​ನ ನಂ.1 ಬ್ಯಾನರ್​ನಲ್ಲಿ ನಿಖಿಲ್ ನಟಿಸ್ತಿದ್ದಾರೆ.

ರಜಿನೀಕಾಂತ್​ರ 2.O ಸಿನಿಮಾನ ನಿರ್ಮಾಣ ಮಾಡಿದ ಇಂಟರ್​ ನ್ಯಾಷನಲ್ ಪ್ರೊಡಕ್ಷನ್ ಹೌಸ್ ಲೈಕಾ ಕುರಿತು ನಮ್ಮ ಶಿವರಾಜ್​ಕುಮಾರ್ ಹಾಗೂ ಉಪೇಂದ್ರ ಮೆಚ್ಚುಗೆಯ ಮಾತುಗಳನ್ನಾಡಿದ್ರು. ಅಂತಹ ನಿರ್ಮಾಣ ಸಂಸ್ಥೆಗಳು ಕನ್ನಡಕ್ಕೆ ಬರಬೇಕು ಅನ್ನೋ ಆಶಯ ಕೂಡ ವ್ಯಕ್ತಪಡಿಸಿದ್ರು. ಇದೀಗ ಅದು ನಿಖಿಲ್ ಮೂಲಕ ನಿಜವಾಗ್ತಿದೆ. ನಿಖಿಲ್​ಗೆ ಸಿನಿಮಾ ನಿರ್ಮಿಸೋಕೆ ಲೈಕಾ ಮುಂದಾಗಿದೆ. ಬಹುಭಾಷಾ ಸಿನಿಮಾ ಮಾಡೋ ಯೋಜನೆಯಲ್ಲಿರೋ ಲೈಕಾ ಸದ್ಯದಲ್ಲೇ ನಿರ್ದೇಶಕ ಯಾರು..? ಸಿನಿಮಾ ಯಾವುದು ಅನ್ನೋದ್ರ ಕುರಿತು ಮಾಹಿತಿ ಬಿಚ್ಚಿಡಲಿದೆ.
ಅದಕ್ಕೂ ಮುನ್ನ ಕನ್ನಡದ ನಂ.1 ನಿರ್ಮಾಣ ಸಂಸ್ಥೆ ಅನಿಸಿಕೊಂಡಿರೋ ಜಯಣ್ಣ ಫಿಲಂಸ್ ಕೂಡ ನಿಖಿಲ್ ಜೊತೆ ಸಿನಿಮಾ ಮಾಡೋಕ್ಕೆ ಮಾತುಕತೆ ನಡೆಸಿದೆ. ಸದ್ಯ ಲೋಕಸಭಾ ಚುನಾವಣೆ ಇರೋದ್ರಿಂದ ಎಲೆಕ್ಷನ್ಸ್ ಕಡೆ ಗಮನ ಹರಿಸಲಿರೋ ನಿಖಿಲ್, ಅದಾಗ್ತಿದ್ದಂತೆ ಇವೆರಡೂ ಪ್ರತಿಷ್ಠಿತ ಬ್ಯಾನರ್​ಗಳಲ್ಲಿ ನಟಿಸೋದು ಕನ್ಫರ್ಮ್​. ಇದನ್ನ ಖುದ್ದು ನಿಖಿಲ್ ಅವ್ರೇ ಮಾಧ್ಯಮದ ಮುಂದೆ ಸ್ಪಷ್ಟ ಪಡಿಸಿದ್ದಾರೆ.
ಅಂದಹಾಗೆ ಒಬ್ಬ ಕಲಾವಿದನ ಬಗ್ಗೆ ಯಾರೇ ಆಗಲಿ ಅಷ್ಟು ಹಗುರವಾಗಿ ಮಾತನಾಡೋದು ತರವಲ್ಲ. ಕಿಚ್ಚ ಸುದೀಪ್ ಅಂತವ್ರೇ ನಿಖಿಲ್ ಭವಿಷ್ಯದ ಭರವಸೆಯ ನಟ ಅಂತ ಹೆಮ್ಮೆಯಿಂದ ಹೇಳ್ತಿರಬೇಕಾದ್ರೆ, ಅವ್ರನ್ನ ಬೆಂಬಲಿಸೋದು ಬಿಟ್ಟು ಆಡಿಕೊಳ್ಳೋದು ಎಷ್ಟು ಸರಿ ನೀವೇ ಹೇಳಿ.

https://play.google.com/store/apps/details?id=com.application.onead&referrer=GFN1E0 Sign up with OneAD app. You can earn up to 2.5 L monthly OneAD Balance. Your referral code for registration is GFN1E0 . Register today

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...