ABC

Wednesday, 30 January 2019

ತಂದೆಯವರೇ ಪಿಎಂ ಸ್ಥಾನ ಬಿಟ್ಟು ಬಂದಿರುವಾಗ ಮಗನಾಗಿ ನಾನು ಸಿಎಂ ಸ್ಥಾನ ಬಿಡಲು ಹಿಂದೇಟು ಹಾಕ್ತೀನಾ:H.D. ಕುಮಾರಸ್ವಾಮಿ

ಬೆಂಗಳೂರು: ಸಾಲಮನ್ನಾ ಬಗ್ಗೆ ಇನ್ನೂ ಅನುಮಾನವೇ? 25ರವರೆಗೆ 2.5 ಲಕ್ಷ ರೈತ ಕುಟುಂಬಗಳಿಗೆ ಸಾಲಮನ್ನಾ ಆದೇಶ ಹೋಗಿದೆ. ಸಿದ್ದರಾಮಯ್ಯ ಅವರು ಮಾಡಿದ್ದ ಸಾಲಮನ್ನಾದ ಹಣ ಬಾಕಿ ಇತ್ತು ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸಾಲಮನ್ನಾ ಮಾಡಿದರೂ ಕೂಡ ನನ್ನ ಮೇಲೆ ಅನುಮಾನ ಪಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಕೈಯಲ್ಲೂ ಸಾಲಮನ್ನಾವನ್ನು ಲಾಲಿಪಪ್ ಎಂದು ಹೇಳಿಸುತ್ತಿದ್ದಾರೆ. ಸಿದ್ದರಾಮಯ್ಯ ಕಾಲದ ಸಾಲಮನ್ನಾದ 3,800 ಕೋಟಿ ಬಾಕಿ ಉಳಿದಿತ್ತು. ಅದನ್ನು ನಮ್ಮ ಸರ್ಕಾರದಲ್ಲಿ ಕೊಟ್ಟಿದ್ದೇನೆ. ಫೆ.8 ರಂದು ಬಜೆಟ್‌ನಲ್ಲಿ 44 ಲಕ್ಷ ರೈತರ ಸಾಲಮನ್ನಾ ಆಗುತ್ತದೆ ಎಂದರು.ಪಕ್ಷದ ಕಚೇರಿಯಲ್ಲಿ ಮಾತನಾಡಬೇಕಾದರೆ ನಾನು ಕಣ್ಣೀರಾಕಿದೆ. ಇಂದು ಕೂಡ ನನ್ನ ಮನಸ್ಸಿನಲ್ಲಿ ನೋವಿದೆ. ಆ ನೋವನ್ನು ಮರೆತು ಜನತೆಯ ಕಷ್ಟ ನಿವಾರಿಸಲು ಕೆಲಸ ಮಾಡುತ್ತಿದ್ದೇನೆ. ನಾನು ತುಂಬಾ ಸೂಕ್ಷ್ಮ ವ್ಯಕ್ತಿ. ನಾನು ಯಾರನ್ನು ಭೇಟಿ ಮಾಡುತ್ತಿಲ್ಲ, ನಾನು ಮುಖಂಡರಿಗೆ ಸಿಗುತ್ತಿಲ್ಲ, ವರ್ಗಾವಣೆ ಮಾಡಿಕೊಡುತ್ತಿಲ್ಲ, ನಾನು ಯಾರಿಗೂ ಸಿಗುತ್ತಿಲ್ಲ ಎಂದು ವಾಟ್ಸಾಪ್‌ನಲ್ಲಿ ಸಂದೇಶ ಹರಿಬಿಡುತ್ತಿದ್ದಾರೆ. ನಾನು ವರ್ಗಾವಣೆ ದಂಧೆ ಮಾಡಿಕೊಂಡು ಕೂರಲಾ ಎಂದು ಹೇಳಿದರು.
ಕುಮಾರ ಸ್ವಾಮಿ ಸರ್ಕಾರಕ್ಕೆ ಸಂಕ್ರಾಂತಿ ಆಯ್ತು ಈಗ ಬಜೆಟ್ ಅಧಿವೇಶನದ ಗಡುವು ಕೊಡುತ್ತಿದ್ದಾರೆ. ಮಾಧ್ಯಮಗಳ ಮೂಲಕ ಈ ರೀತಿಯ ಸುದ್ದಿಯನ್ನು ಹಬ್ಬಿಸುತ್ತಾರೆ. ಈ ರೀತಿಯ ಸುದ್ದಿ ಹಬ್ಬಿಸಿದರೆ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ. ಅದನ್ನು ಸರಿದೂಗಿಸಿಕೊಂಡು ಹೋಗಲಿ ಎಂದರು.
ಅವತ್ತು ಕೇಂದ್ರದಲ್ಲಿ ಪ್ರಧಾನಿಯಾಗಲು ಯಾರೂ ಸಿದ್ಧರಿರಲಿಲ್ಲ. ದೇವೇಗೌಡರನ್ನು ಬಲವಂತದಿಂದ ಕರೆದುಕೊಂಡು ಹೋಗಿ ಕೂರಿಸಿದರು. ಆ ಸ್ಥಾನ ಬಿಡಬೇಕಾದರೆ ಗೌಡರು ತ್ಯಾಗ ಮಾಡಿ ಬಂದರು. ಅಂತಹ ಪ್ರಧಾನಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದ ಕುಟುಂಬ ನಮ್ಮದು. ಇನ್ನು ಕೇವಲ ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿ ಕೂರುತ್ತೇವಾ? ಜನರಿಗೆ ಮೋಸ ಮಾಡಿ ನಾನು ಸಿಎಂ ಸ್ಥಾನದಲ್ಲಿ ಇರುತ್ತೇನಾ ಎಂದರು.ಯಡಿಯೂರಪ್ಫನವರು ಚಾಮರಾಜನಗರಕ್ಕೆ ಹೋಗಿ ಅಧಿಕಾರಿಗಳ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಚಿತ್ರದುರ್ಗಕ್ಕೆ ಹೋಗಿ ಬರಗಾಲ ವಿಕ್ಷಣೆ ನಾಟಕ ಆಡುತ್ತಾರೆ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ ಅನುದಾನ ತೆಗೆದುಕೊಂಡು ಬರಲು ಆಗಲ್ವಾ. ರೆಸಾರ್ಟ್‌ಗೆ ಹೋಗಿ ಶಾಸಕರನ್ನು ಇಟ್ಟುಕೊಂಡು ಸರ್ಕಾರ ಬೀಳಿಸುವ ಕೆಲಸ ಮಾಡಿದರು. ಆಗ ರೈತರ ಕಷ್ಟ ನೆನಪಾಗಿಲ್ಲವಾ? ಯಡಿಯೂರಪ್ಪನವರೇ ನಿಮ್ಮ ತರ ನಾನು ಡೋಂಗಿ ರಾಜಕಾರಣ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...