ABC

Wednesday, 30 January 2019

ಧರ್ಮಸ್ಥಳದಲ್ಲಿ ಇರುವ ಬಾಹುಬಲಿ ಮೂರ್ತಿಯನ್ನು ಯಾರು ಕೆತ್ತಿದವರು ನಿಮಗೆ ತಿಳಿದಿದೆಯೇ


ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿಶಿಲ್ಪವನ್ನು ಪ್ರತಿಷ್ಠಾಪಿಸುವ ಸಂಕಲ್ಪ ವ್ಯಕ್ತವಾದಾಗ ಯಾರಿಂದ ಕಲಾತ್ಮಕ ಕೆತ್ತನೆ ಸಾಧ್ಯ ಎಂಬ ಜಿಜ್ಞಾಸೆ ಶುರುವಾಯಿತು. ಇದೇ ಸಂದರ್ಭದಲ್ಲಿ ಕಾರ್ಕಳದ ಶ್ರೀ ವೆಂಕಟರಮಣ ದೇವಾಲಯದ ಗರುಡ ಮಂಟಪ ರೂಪಿಸಿ ಖ್ಯಾತರಾಗಿದ್ದ ಪ್ರಸಿದ್ಧ ಶಿಲ್ಪಿ ರೆಂಜಾಳ ಗೋಪಾಲ ಶೆಣೈ ಅವರ ಹೆಸರು ಪರಿಗಣಿಸಲ್ಪಟ್ಟಿತು. ಮೂರ್ತಿಶಿಲ್ಪ ರೂಪಿಸುವಿಕೆಯ ಜವಾಬ್ದಾರಿ ವಹಿಸಿಕೊಂಡಾಗ ಅವರಿಗೆ 70 ವರ್ಷ ವಯಸ್ಸು. ಆ ವಯಸ್ಸಿನಲ್ಲೂ ಅತ್ಯುತ್ಸಾಹದೊಂದಿಗೆ ಅವರು ರೂಪಿಸಿದ ಮೂರ್ತಿಶಿಲ್ಪವು ಧರ್ಮಸ್ಥಳಕ್ಕೆ ಆಧ್ಯಾತ್ಮಿಕ ಪ್ರಭೆಯನ್ನು ತಂದುಕೊಟ್ಟಿತು.  ಆ ಪ್ರಭೆಯ ಪ್ರಭಾವ ಈಗಲೂ ಪೀಳಿಗೆಯಿಂದ ಪೀಳಿಗೆಗೆ ದಾಟಿಕೊಳ್ಳುತ್ತಲೇ ಇದೆ. ಸಾರ್ಥಕತೆಯ ಹೆಮ್ಮೆಯ ಭಾವವನ್ನೂ ಮೂಡಿಸಿದೆ. ಶೆಣೈ ಅವರು 25 ವಲಸಿಗ ಕಾರ್ಮಿಕರ ತಂಡದ ನೇತೃತ್ವ ವಹಿಸಿ ಮೂರ್ತಿಕೆತ್ತನೆಯ ಪ್ರಕ್ರಿಯೆಯನ್ನು ಆರಂಭಿಸಿದ್ದರು. ಒಟ್ಟು ಆರು ವರ್ಷಗಳವರೆಗೆ ಅಂದರೆ 1967ರಿಂದ 1973ರವರೆಗಿನ ಅವಧಿಯಲ್ಲಿ ಮೂರ್ತಿ ರೂಪುಗೊಂಡಿತು. ಎಪ್ಪತ್ತು ವರ್ಷದ ವಯೋವೃದ್ಧ ರೆಂಜಾಳ ಗೋಪಾಲ ಶೆಣೈ ವಿಶ್ವವನ್ನು ಸೆಳೆದುಕೊಳ್ಳುವಂಥ ಬಾಹುಬಲಿ ಶಿಲ್ಪಕಲಾಕೃತಿಯನ್ನು ರೂಪಿಸಿದ್ದು ಸಾರ್ವಕಾಲಿಕ ಪ್ರಾಶಸ್ತ್ಯ ಪಡೆಯಿತು.


No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...