ತುಮಕೂರು, ಜ.30-ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿರುವ ಜೆಡಿಎಸ್ ನ ಲಲಿತಾ ರವೀಶ್ ಹಾಗೂ ಉಪಮೇಯರ್ ಆಗಿ ಆಯ್ಕೆಯಾಗಿರುವ ಕಾಂಗ್ರೇಸ್ ನ ರೂಪಶ್ರೀ ಅವರಿಗೆ ಹಾರ್ದಿಕ ಶುಭಾಶಯಗಳು.
ನಿರೀಕ್ಷೆಯಂತೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಧಿಕಾರ ಚುಕ್ಕಾಣಿ ಹಿಡಿದಿದೆ. ಜೆಡಿಎಸ್‍ನ ಲಲಿತಾ ರವೀಶ್ ಮೇಯರ್ ಆಗಿ, ಕಾಂಗ್ರೆಸ್‍ನ ರೂಪಶ್ರೀ ಉಪಮೇಯರ್ ಸ್ಥಾನ ಅಲಂಕರಿಸಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಳೆದ ಹಲವು ದಿನಗಳಿಂದ ಮೈತ್ರಿ ಮಾತುಕತೆ ನಡೆದು ಅಂತಿಮ ನಿರ್ಧಾರಕ್ಕೆ ಬರಲಾಗಿತ್ತು. ಜೆಡಿಎಸ್‍ಗೆ ಮೇಯರ್ ಸ್ಥಾನ ಬಿಟ್ಟುಕೊಡಲು ಕೈ ನಾಯಕರು ಹಸಿರು ನಿಶಾನೆ ತೋರಿದ್ದರು.
ಆದರೆ, ಸಚಿವ ಶ್ರೀನಿವಾಸ್ ಹಾಗೂ ಶಾಸಕ ಗೌರಿಶಂಕರ್ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಭಾರೀ ಲಾಬಿ ನಡೆಸಿದ್ದರು. ಅದು ಭಾರೀ ಕುತೂಹಲ ಕೆರಳಿಸಿತ್ತು.
ಇದು ಜೆಡಿಎಸ್ ಕಾರ್ಯಕರ್ತರಲ್ಲೂ ಗೊಂದಲ ಉಂಟಾಗಿತ್ತು.
ಯಾರ ಕೈ ಮೇಲಾಗುತ್ತದೆ ಎಂಬುದನ್ನು ಕೌತಕದಿಂದ ಕಾಯಲಾಗಿತ್ತು. ಇನ್ನು ಬಿಜೆಪಿ ಕೂಡ ಒಡಕಿನ ಲಾಭ ಪಡೆಯಲು ಭಾರೀ ಕಸರತ್ತು ನಡೆಸಿತ್ತಾದರೂ ಫಲ ನೀಡಲಿಲ್ಲ.
ಬಿಜೆಪಿ ಶಾಸಕ ಜೆ.ಬಿ.ಜ್ಯೋತಿ ಗಣೇಶ್ ತಮ್ಮ ಪಕ್ಷದ 12 ಪಾಲಿಕೆ ಸದಸ್ಯರ ಜತೆ ಪಕ್ಷೇತರರು ಮೂರು ಸೇರಿ 15 ಮಂದಿ ಒಟ್ಟಾಗಿ ಪಾಲಿಕೆ ಸಭಾಂಗಣದಲ್ಲಿ ಕೂತಿದ್ದರೂ ದೋಸ್ತಿ ತಂತ್ರ ಪಕ್ಕ ಆದ ಕಾರಣ ನಿರಾಶೆ ಅವರಲ್ಲಿ ಎದ್ದು ಕಾಣುತ್ತಿತ್ತು.
ಪಾಲಿಕೆ ಒಟ್ಟು 35 ಸದಸ್ಯ ಬಲದಲ್ಲಿ ಒಬ್ಬರ ನಿಧನದಿಂದ 34 ಹಾಲಿ ಇದ್ದು, ಬಹುಮತಕ್ಕೆ 17 ಮ್ಯಾಜಿಕ್ ನಂಬರ್ ಆಗಿತ್ತು. ಕಾಂಗ್ರೆಸ್ 10 ಸದಸ್ಯ ಬಲದ ಜತೆಗೆ ಒಬ್ಬ ಸಂಸತ್ ಸದಸ್ಯರ ಮತ ಸೇರಿ 11, ಅಂತೆಯೇ ಜೆಡಿಎಸ್ 9 ಸದಸ್ಯರ ಜತೆ ಒಬ್ಬರು ಶಾಸಕರ (ಗೌರಿಶಂಕರ್ )ಬಲದಿಂದ 10ಕ್ಕೆ ಏರಿದ್ದು, ಒಟ್ಟಾರೆ 21 ಮತಗಳು ದಕ್ಕಿದ ಹಿನ್ನೆಲೆಯಲ್ಲಿ ದೋಸ್ತಿ ಗೆಲುವಿನ ಪತಾಕೆ ಹಾರಿಸಿತು.
ಆದರೆ, ಜೆಡಿಎಸ್‍ನ 4ಕ್ಕೂ ಹೆಚ್ಚು ಸದಸ್ಯರು ಬಂಡಾಯ ಏಳುವ ಮುನ್ಸೂಚನೆ ಇತ್ತು. ತಕ್ಷಣ ಎಚ್ಚೆತ್ತು ಶಾಸಕ ಗೌರಿಶಂಕರ್ ಅವರನ್ನು ಸಮಾಧಾನ ಮಾಡಿ ಯಾವುದೇ ಅಡಚಣೆಗೂ ಆಸ್ಪದ ನೀಡಲಿಲ್ಲ.
ಸಚಿವ ಶ್ರೀನಿವಾಸ್, ಶಾಸಕ ಗೌರಿಶಂಕರ್ ಪಾಲಿಕೆಯಲ್ಲಿ ಕಾಣಿಸಿಕೊಂಡರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಮಾಜಿ ಶಾಸಕ ರಫೀಕ್ ಅಹಮಮ್ದ್ ಆವರಣದಲ್ಲೇ ಇದ್ದು, ಬಿಜೆಪಿ ತಂತ್ರಗಾರಿಕೆಗೆ ತಿರುಗೇಟು ನೀಡುವಂತೆ ತಮ್ಮದೇ ದಾಳ ಉರುಳಿಸಿದ್ದರು.
ಬಿಜೆಪಿ ಪರ ಕೆಲ ಸದಸ್ಯರು ವಾಲುತ್ತಿರುವುದನ್ನು ಅರಿತು ಎರಡೂ ಪಕ್ಷದ ನಾಯಕರು ಅದನ್ನು ತಡೆಯಲು ಹರಸಾಹಸ ಪಟ್ಟಿದ್ದರೂ ಅದು ಕೊನೆಗೂ ಫಲ ನೀಡಿದೆ.

No comments:
Post a Comment