ಜ. (೩೧):ಕರುನಾಡಿನ ನಡೆದಾಡುವ ದೇವರು..ಶ್ರೀ ಸಿದ್ದಗಂಗಾ ಶ್ರೀಗಳು ಶಿವನಲ್ಲಿ ಸೇರಿ ಇಂದಿಗೆ 11 ದಿನಗಳಾಯಿತು.. ಇಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀಗಳ 11ನೇ ದಿನದ ಕಾರ್ಯ ನಡೆಯಲಿದೆ..
ಶ್ರೀಗಳು ಭೌತಿಕವಾಗಿ ದೂರವಿರಬಹುದು ಆದರೆ ಕರುನಾಡಿನ ಕೋಟಿ ಕೋಟಿ ಹೃದಯಗಳಲ್ಲಿ ಅವರೆಂದೂ ಅಜರಾಮರ…ಶ್ರೀಗಳಿಗೆ ಭಾರತ ರತ್ನ ಸಿಗದಿದ್ದರೇನು ಅವರು ವಿಶ್ವ ರತ್ನ.. ವಿಶ್ವಕ್ಕೇ ಮಾದರಿಯಾದ ಅಮೂಲ್ಯ ರತ್ನವೆಂದೇ ಹೇಳಬಹುದು..
ಇಂದು ನಡೆಯುವ ಪುಣ್ಯ ಸ್ಮರಣೆ ಕಾರ್ಯದಲ್ಲಿ ನಮ್ಮ ಹೆಮ್ಮೆಯ ಸಿದ್ದಗಂಗಾ ಮಠ ದಾಖಲೆ ಬರೆಯಲಿದೆ ಎನ್ನಬಹುದು..ಹೌದು ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಲಾರಿಗಟ್ಟಲೆ ಸಾಮಾಗ್ರಿಗಳನ್ನು ದವಸ ಧಾನ್ಯಗಳನ್ನು ತುಂಬಿ ಕಳುಹಿಸುತ್ತಿದ್ದಾರೆ..
ಇದಕ್ಕೆಲ್ಲಾ ಕಾರಣ ಶ್ರೀ ಶಿವಕುಮಾರ ಸ್ವಾಮೀಜಿಗಳ ಮೇಲಿನ ಭಕ್ತಿ.. ಹೌದು ಒಂದು ಕಾಲದಲ್ಲಿ ಬಡ ಮಕ್ಕಳಿಗೆ ಆಶ್ರಯ ನೀಡಲು ಅನ್ನ ನೀಡಲು.. ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಮಠ ಕಟ್ಟಿದ್ದರು..ಆದರೀಗ ಆ ಸತ್ಪುರುಷ. ಕಾಯಕ ಯೋಗಿಗೆ ನಮನ ಸಲ್ಲಿಸುವ ಸುಸಂದರ್ಭವೆಂದು ಭಾವಿಸಿ ಎಲ್ಲರೂ ದಾಸೋಹಕ್ಕೆ ಅಳಿಲು ಸೇವೆ ಮಾಡಿತ್ತಿದ್ದಾರೆ..
ಈ ದಿನ ಮಠದಲ್ಲಿ ತಯಾರಾಗ್ತಿದೆ 5 ಲಕ್ಷ ಜನರಿಗೆ ದಾಸೋಹ.. ಹೌದು ಒಮ್ಮೆಲೆ ಒಂದೇ ಜಾಗದಲ್ಲಿ ಅಕ್ಷಯ ಪಾತ್ರೆಯ ರೀತಿಯಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಶ್ರೀಗಳು ಯಾವಗಲೂ ಹೇಳುತ್ತಿದ್ದರಂತೆ.. ಮಠಕ್ಕೆ ಬರುವ ಯಾವೊಬ್ಬ ಭಕ್ತನು ಹಸಿದು ಹೋಗಬಾರದು ಎಂದು.. ಅದರಂತೆಯೇ ಇಂದು ಪುಣ್ಯ ಸ್ಮರಣೆ ಇರುವ ಕಾರಣ ಮಠಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಲಿದ್ದಾರೆ..
ಬಂದ ಭಕ್ತರು ಯಾರೂ ಕೂಡ ಹಸಿದು ಹೋಗಬಾರದೆಂದು ಮಠದ ಆವರಣದಲ್ಲಿ ಒಟ್ಟು 10 ಕಡೆ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದೆ.. 5 ಲಕ್ಷ ಜನರಿಗೆ ದಾಸೋಹ ತಯಾರಾಗಲಿದೆ.. ಅಷ್ಟೇ ಅಲ್ಲ ಅದಕ್ಕಿಂತ ಹೆಚ್ಚು ಜನರೂ ಬಂದರೂ ಕೂಡ ದಾಸೋಹ ವ್ಯವಸ್ಥೆಯಾಗಲಿದೆ.. ಕಾರಣ ಆ ಮಠದ ಹಿಂದಿರಿವ ಶಕ್ತಿ ಮಹಾನ್ ಪುರುಷರಾದ ಶ್ರೀ ಶಿವಕುಮಾರ ಸ್ವಾಮಿಗಳದ್ದು.. ಎಂತಹ ಬರ ಪರಿಸ್ಥಿತಿ ಬಂದಾಗಲೇ ನಾಡಿನ ಜನರು ಶ್ರೀ ಮಠಕ್ಕೆ ಹೋದಾಗ ಶ್ರೀಗಳನ್ನು ಕೈ ಹಿಡಿದು ಸಾವಿರಾರು ಜನರಿಗೆ ಅನ್ನ ದಾಸೋಹ ಮಾಡಿಸಿದ್ದಾರೆ.. ಇನ್ನು ಇಂದು ಆ ಸತ್ಪುರುಷರ ಪುಣ್ಯ ಸ್ಮರಣೆ.. ಈ ದಿನ ಆ ದೇವರೇ ಶಕ್ತಿಯಾಗಿ ಮಠದಲ್ಲಿ ನಿಲ್ಲುವುದು ಖಂಡಿತ..
ವಿಭೂತಿಯೊಳಗೆ ಲೀನರಾದ ಕಾಯಕ ಯೋಗಿಗೆ ಇಂದು ನಾವು ಸಲ್ಲಿಸಬಹುದಾದ ನಿಜವಾದ ನಮನವೆಂದರೆ.. ಶ್ರೀ ಮಠಕ್ಕೆ ಹೋಗುವ ಪ್ರತಿಯೊಬ್ಬರೂ ಕೂಡ ಮಠದಲ್ಲಿ ಸ್ವಚ್ಛತೆ ಕಾಪಾಡಿ.. ಜೊತೆಗೆ ಸ್ವಯಂ ಪ್ರೇರಿತರಾಗಿ ಅಲ್ಲಿ ಕೈಲಾದಷ್ಟು ಸಹಾಯ ಮಾಡಿ ಬನ್ನಿ.. ಇದುವೇ ನಾವು ಶ್ರೀಗಳಿಗೆ ಸಲ್ಲಿಸುವ ನಿಜವಾದ ನಮನ..
https://play.google.com/store/apps/details?id=com.application.onead&referrer=GFN1E0 Sign up with OneAD app. You can earn up to 2.5 L monthly OneAD Balance. Your referral code for registration is GFN1E0 . Register today
No comments:
Post a Comment