ಹೆಣ್ಣು ಎಂತಹ ದೊಡ್ಡ ಹುದ್ದೆಯಲ್ಲಿದ್ದರೂ ಕೂಡ ಅವಳ ಅಂತಃಕರಣ ಎಂದೂ ಕೂಡ ತಾಯಿಯ ಮಮತೆ ತುಂಬಿರುತ್ತದೆ.. ಕಷ್ಟಗಳಿಗೆ ಮರುಗುವವಳೇ ಆ ಹೆಣ್ಣು..ಇದೇ ರೀತಿ ಇಲ್ಲೊಂದು ಘಟನೆ ನಡೆದಿದೆ ನೋಡಿ.. ರೈತರ ಸಮಸ್ಯೆ ಕೇಳಲು ಬಂದ ಮಹಿಳಾ ತಹಸೀಲ್ದಾರ್ ಕಣ್ಣೀರಿಟ್ಟ ಘಟನೆ ಮದ್ದೂರಿನಲ್ಲಿ ನಡೆದಿದೆ..
ಹೌದು ಮದ್ದೂರಿನಲ್ಲಿ ಇಂದು ರೈತರು ಕಬ್ಬಿನ ಬಾಕಿ ಪಾವತಿಸಿ ಎಂದು ಪ್ರತಿಭಟನೆ ನಡೆಸುತ್ತಿದ್ದರು.. ಇಲ್ಲಿಗೆ ಮದ್ದೂರಿನ ತಹಸೀಲ್ದಾರ್ ಆಗಿರುವ ಗೀತಾ ಅವರು ರೈತರ ಸಮಸ್ಯೆ ಕೇಳಲು ಬಂದಿದ್ದಾರೆ..ಸ್ಥಳಕ್ಕೆ ಬಂದ ತಹಸೀಲ್ದಾರ್ ಗೀತಾ ಅವರ ಬಳಿ ರೈತರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.. ಕಷ್ಟಗಳ ಸುರಿಮಳೆಯೇ ಅಲ್ಲಿ ಸುರಿದಿದೆ.. ಇದನ್ನೆಲ್ಲಾ ಕೇಳಿದ ಗೀತಾ ಅವರು ಸ್ಥಳದಲ್ಲಿಯೇ ಕಣ್ಣೀರಿಟ್ಟಿದ್ದಾರೆ..
ರೈತರ ನೋವಿಗೆ ಸ್ಪಂದಿಸಿದ ಗೀತಾ ಅವರು ರೈತರ ಕುರಿತು ಮಾತನಾಡಿ ಧೈರ್ಯ ಹೇಳಿದರು.. ಈ ಮೊದಲು ನಾನು ಕೋಲಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಲ್ಲಿನ ರೈತರು ಬರದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು.. ಆಗ ಆ ಸಮಯದಲ್ಲಿ ಅಲ್ಲಿನ ಜನರು ಮಂಡ್ಯ ಸಂಪತ್ಭರಿತ ಜಿಲ್ಲೆ, ಅಲ್ಲಿ ಮಳೆಯಿದೆ, ಬೆಳೆಯಿದೆ ಅಲ್ಲಿನ ಜನರು ನೆಮ್ಮದಿಯಾಗಿರಬಹುದು ಎನ್ನುತ್ತಿದ್ದರು.. ಆದರೆ ಇಲ್ಲಿನ ವಾಸ್ತವವೇ ಬೇರೆ ಇದೆ.. ಇಲ್ಲಿಯೂ ಬಹಳಷ್ಟು ರೈತರು ಸಾಲಕ್ಕೆ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.. ಇದೆಲ್ಲಾ ನೋಡಿ ತುಂಬಾ ಸಂಕಟ ಆಗುತ್ತಿದೆ.. ನಾನು ಖಂಡಿತವಾಗಿಯೂ ರೈತರಿಗಾಗಿ ಕೆಲಸ ಮಾಡುತ್ತೇನೆ… ನಾನೂ ರೈತರ ಮಗಳು.. ರೈತರ ಕಷ್ಟ ನನಗೂ ಗೊತ್ತಿದೆ..
ಈಗ ಆಗಿರುವ ತೊಂದರೆಗೆ ಆದಷ್ಟು ಬೇಗ ಪರಿಹಾರ ಸೂಚಿಸುತ್ತೇನೆ.. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ..
ನಾನು ಈ ಮುನ್ನ ಶಿಕ್ಷಕಿಯಾಗಿ ಕೆಲಸ ಮಾಡಿದ್ದೆ.. ರೈತರಿಗಾಗಿ ಏನಾದರೂ ಮಾಡಬೇಕೆಂಬ ಕನಸಿನಿಂದಲೇ ಕೆ ಎ ಎಸ್ ಮಾಡಿ ಅಧಿಕಾರಿಯಾಗಿರುವೆ.. ನಿಮ್ಮಗಳ ಕಷ್ಟಕ್ಕೆ ಸದಾ ಸ್ಪಂದಿಸುವೆ ಎಂದಿದ್ದಾರೆ..
ನಿಜಕ್ಕೂ ಅಧಿಕಾರಿ ಎಂದರೆ ಹೀಗಿರಬೇಕು.. ಹ್ಯಾಟ್ಸ್ ಆಫ್ ಮೇಡಂ..
https://play.google.com/store/apps/details?id=com.application.onead&referrer=GFN1E0 Sign up with OneAD app. You can earn up to 2.5 L monthly OneAD Balance. Your referral code for registration is GFN1E0 . Register today



No comments:
Post a Comment