ABC

Tuesday, 29 January 2019

ಸಿನಿಮಾರಂಗದವರು ಕೂಡ ನಿಖಿಲ್ ಅಭಿನಯಕ್ಕೆ ಔಟ್ ಅಫ್ ಔಟ್ ಮಾರ್ಕ್ಸ್ ನೀಡಿದ್ದಾರೆ

ಮೊನ್ನೆ ಮೊನ್ನೆಯಷ್ಟೆ ಸ್ಯಾಂಡಲ್ ವುಡ್ ನ ಸೀತಾರಾಮ ಕಲ್ಯಾಣ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ.. 'ಸೀತಾರಾಮ ಕಲ್ಯಾಣ' ಹೆಸರಿಗೆ ತಕ್ಕಂತೆ ನಿಖಿಲ್ ಹಾಗೂ ರಚಿತಾ ರಾಮ್ ಜೋಡಿ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವನ್ನು ನೀಡಿದೆ.  ಈ ಸಿನಿಮಾದಲ್ಲಿ ಸ್ನೇಹ ಪ್ರೀತಿಗೆ ಏನು ಕೊರತೆ ಇಲ್ಲ ..ಕೆಲವು ದಿನಗಳ ನಂತರ ನಿಖಿಲ್ ತಾತ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೂಡ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಿನಿಮಾರಂಗದವರೆಲ್ಲರೂ ಕೂಡ ನಿಖಿಲ್ ಅಭಿನಯಕ್ಕೆ ಔಟ್ ಆಫ್ ಔಟ್ ಮಾರ್ಕ್ಸ್ ನೀಡಿದ್ದಾರೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ, ಟ್ವೀಟ್ ಮಾಡಿದ್ದಾರೆ. 'ಚಿತ್ರದಲ್ಲಿ ನಿಖಿಲ್ ಭರವಸೆ ಮೂಡಿಸುವ ನಟನಂತೆ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯ ಹಾಗೂ ಸಂದರ್ಭವನ್ನು ವ್ಯಕ್ತ ಪಡಿಸಿದ ರೀತಿ ತುಂಬಾ ಇಷ್ಟವಾಯಿತು. ನಿಮ್ಮನ್ನು ಜನರಿಗೆ ಇನ್ನೂ ಹೆಚ್ಚು ಹತ್ತಿರವಾಗುವ ಪಾತ್ರದಲ್ಲಿ ನೋಡಲು ಬಯಸುತ್ತೇನೆ. ಬೆಸ್ಟ್ ವಿಶ್ ಮೈ ಫ್ರೆಂಡ್..' ಎಂದು ನಿಖಿಲ್ ನಟನೆಗೆ, ಚಿತ್ರಕ್ಕೆ ಬೇಷ್ ಎಂದಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್… ಸಿನಿಮಾ ರಂಗದವರೆ ಒಬ್ಬರನ್ನೊಬ್ಬರು ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದರೆ ಸ್ಯಾಂಡಲ್ ವುಡ್ ಅಗ್ರಸ್ಥಾನಕ್ಕೆ ಹೋಗುವುದರಲ್ಲಿ ನೋ ಡೌಟ್.
https://play.google.com/store/apps/details?id=com.application.onead&referrer=GFN1E0 Sign up with OneAD app. You can earn up to 2.5 L monthly OneAD Balance. Your referral code for registration is GFN1E0 . Register today

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...