ಮಂಡ್ಯ: ನಮಗೆ ಯಾರೂ ಅನಿವಾರ್ಯವಲ್ಲ ನಾವು ಎಲ್ಲರಿಗೂ ಅನಿವಾರ್ಯ. ಕಾಂಗ್ರೆಸ್ ಸವತಿ ಮಕ್ಕಳ ಹಾಗೆ ವರ್ತಿಸುತ್ತಿದ್ದಾರೆ ಎಂದು ನಾಗಮಂಗಲ ಸುರೇಶ್ ಗೌಡ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರ ವರ್ತನೆಯನ್ನು ಬಹಳ ದಿನಗಳಿಂದಲೂ ಗಮನಿಸುತ್ತಿದ್ದೇವೆ. ಕಾಂಗ್ರೆಸ್ಸಿಗರು ದೊಡ್ಡಣ್ಣನ ರೀತಿ ವರ್ತಿಸದೆ ಸವತಿ ಮಕ್ಕಳ ಹಾಗೆ ವರ್ತಿಸುತ್ತಿದ್ದಾರೆ. ಇದರಿಂದ ನಮಗೇನು ನಷ್ಟವಿಲ್ಲ. ನಮಗೆ ಯಾರೂ ಅನಿವಾರ್ಯವಲ್ಲ. ನಾವು ಎಲ್ಲರಿಗೂ ಅನಿವಾರ್ಯ ಎಂಬ ಪರಿಸ್ಥಿತಿ ಇದೆ. ಇದನ್ನು ಮಿತ್ರ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಯಾರನ್ನು ಮೆಚ್ಚಿಸಲು ನಮ್ಮ ನಾಯಕರನ್ನು ಅವಹೇಳನ ಮಾಡುವುದನ್ನು ಮಾಡಬಾರದು. ಅದರ ಫಲವನ್ನು ಅವರೇ ಅನುಭವಿಸುತ್ತಾರೆ. ನಾವು ಅಧಿಕಾರಕ್ಕೆ ಆಂಟಿ ಕೂರುವವರಲ್ಲ. ನಾವು ಎಲ್ಲದಕ್ಕೂ ರೆಡಿ ಇದೀವಿ ಎಂದರು.
ಬಿಜೆಪಿಯ ಜೊತೆ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವುದು ನಮ್ಮ ಉದ್ದೇಶ. ಅದಕ್ಕಾಗಿ ಕಾಂಗ್ರೆಸ್ ಜೊತೆ ಸರ್ಕಾರ ರಚಿಸಿದ್ದೇವೆ. ನಾವು ಚುನಾವಣೆ ಬಳಿಕ ಯಾರ ಮನೆಯ ಬಾಗಿಲಿಗೂ ಹೋಗಿಲ್ಲ. ಅವರೇ ಬಂದು ನಮ್ಮ ಸಹಕಾರ ಕೇಳಿದರು. ಎಲ್ಲದಕ್ಕೂ ಸ್ಪಂದಿಸಿದರು. ಆದರೆ ನಮ್ಮ ನಾಯಕರನ್ನು ಕಾಂಗ್ರೆಸ್ಸಿನವರು ದೂಷಿಸುತ್ತಾರೆ. ಜೆ ಡಿ ಎಸ್ ನಲ್ಲಿ ಯಾವುದೇ ಒಡಕಿಲ್ಲ. ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದರು
No comments:
Post a Comment