ABC

Monday, 28 January 2019

ಕೊನೆಯ ಕ್ಷಣದವರೆಗೂ ಮೈತ್ರಿ ಸರ್ಕಾರದ ಉಳಿವಿಗಾಗಿ ಪ್ರಯತ್ನಿಸುತ್ತೇನೆ ಎಂದು ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡರು ತಿಳಿಸಿದರು

ಬೆಂಗಳೂರು ಜ.28-ಮೈತ್ರಿ ಸರ್ಕಾರದ ಉಳಿವಿಗಾಗಿ ಕೊನೆಯವರೆಗೂ ಹೋರಾಟ ಮಾಡಲಾಗುತ್ತದೆ ಆದರೆ ಅಂತಿಮವಾಗಿಮುಂದೆ ಏನಾಗುತ್ತೋ ಗೊತ್ತಿಲ್ಲ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ತಿಳಿಸಿದರು
ಜೆಡಿಎಸ್ ನ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕರು ವೈ.ಎಸ್.ವಿ.ದತ್ತ ಜವಾಬ್ದಾರಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗಾಗಿ ಈ ಮಾತನ್ನು ಹೇಳುತ್ತಿಲ್ಲ

ಕಾಂಗ್ರೆಸ್ನವರು ಅಧಿಕಾರ ತೆಗೆದುಕೊಳ್ಳಬೇಕೆಂದು ನಮ್ಮ ಬಳಿ ಬಂದಿದ್ದರು ಎಂದು ಮಾರ್ಮಿಕವಾಗಿ ನುಡಿದರು.ಸರ್ಕಾರದ ಬಗ್ಗೆ ಅಷ್ಟಾಗಿ ಆಸಕ್ತಿ ವಹಿಸುವುದಿಲ್ಲ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು ಜೆಡಿಎಸ್ ಪಕ್ಷ ನನ್ನ ನಂತರವೂ ಉಳಿದು ಬೆಳೆಯಬೇಕಾಗಿದೆ ಆ ನಿಟ್ಟಿನಲ್ಲಿ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಸಣ್ಣಪುಟ್ಟ ದೋಷಗಳು ಸಹಜ ಆದರೆ ಹೋಗುವ ಮಾರ್ಗ ಸರಿಯಾಗಿದ್ದರೆ ತಲೆ ತಗ್ಗಿಸ ಬೇಕಾಗಿಲ್ಲ ಎಂದು ಹೇಳಿದರು.
ಮುಂದೆ ಕಡೂರಿನ ಜನರೇ ಬಂದು ಎಳೆದುಕೊಂಡು ಹೋಗುವ ಕಾಲ ಬರುತ್ತೆ ಎಲ್ಲರೂ ಪಕ್ಷವನ್ನು ಬಿಟ್ಟು ಹೋದ ಕಷ್ಟಕಾಲದಲ್ಲಿ ಜೊತೆಯಾಗಿ ನಿಂತವರು ದತ್ತ ಹೀಗಾಗಿ ಪಕ್ಷದ ಜವಾಬ್ದಾರಿಯನ್ನು ದತ್ತ ಅವರಿಗೆ ವಹಿಸಿ ಕೊಟ್ಟಿರುವುದಾಗಿ ಹೇಳಿದರು
ಮೈತ್ರಿ ಸರ್ಕಾರದ ಮಿತ್ರಪಕ್ಷಗಳ ಹೇಳಿಕೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಒಂದು ರಾಷ್ಟ್ರ ಪಕ್ಷವಾಗಿದ್ದು ವೈಯಕ್ತಿಕ ನೋವಿನಿಂದ ಯಾರಾದರೂ ಹೇಳಿಕೆ ನೀಡಿದರೆಅದನ್ನು ಸರಿಪಡಿಸುವ ಶಕ್ತಿ ಆ ಪಕ್ಷದ ನಾಯಕರಿಗೆ ಅದೇ ರೀತಿ ನಮ್ಮ ಪಕ್ಷದಲ್ಲಿ ಏನಾದರೂ ಆದರೆ ಅದರ ಬಗ್ಗೆ ನಾನು ಕ್ರಮ ಕೈಗೊಳ್ಳುತ್ತೇನೆ ಎಂದರು.
ಈ ದೇಶದ ದೃಷ್ಟಿಯಿಂದ ಮೈತ್ರಿ ಸರ್ಕಾರ ಉಳಿಯಬೇಕಾಗಿದೆ ಕಾಂಗ್ರೆಸ್ ನ ಮುಖಂಡರು ಏಕೆ ಆ ರೀತಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿದೆ ನನಗೆ ಇರುವ ಹಿರಿತನ ದಿಂದ ಈ ದೇಶದ ರಾಜಕಾರಣದ ಬಗ್ಗೆ ಚಿಂತಿಸುತ್ತಿದ್ದೇನೆ ಗೊಂದಲವನ್ನು ಸರಿಪಡಿಸುವ ಕೆಲಸ ಮಾಡುವುದಾಗಿ ಹೇಳಿದರು

https://play.google.com/store/apps/details?id=com.application.onead&referrer=GFN1E0 Sign up with OneAD app. You can earn up to 2.5 L monthly OneAD Balance. Your referral code for registration is GFN1E0 . Register today

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...