ABC

Monday, 25 February 2019

ಮೃತ ಯೋಧರ ಆತ್ಮಕ್ಕೆ 11 ದಿನದಲ್ಲಿ ಶಾಂತಿ ಕೊಟ್ಟ: ಭಾರತಾಂಬೆಯ ಮಕ್ಕಳು.

ಭಾರತದ ಪುಲ್ವಾಮದ ಬಳಿ ಬೆನ್ನಿಗೆ ಚೂರಿ ಹಾಕುವ ಗುಣದ ಉಗ್ರರಲ್ಲಿ ಒಬ್ಬ ಆತ್ಮಾಹುತಿ ಬಾಂಬ್ ಧಾಳಿ ಮೂಲಕ ಭಾರತದ ವೀರ ಯೋಧರ ಆತ್ಮಾಹುತಿಗೆ ಕಾರಣವಾಗಿ ಇಡೀ ದೇಶ ನೋವನ್ನು ಅನುಭವಿಸಿತ್ತು. ದೇಶದೆಲ್ಲೆಡೆ ಉಗ್ರರ ವಿರುದ್ಧ ಕೂಗು ಕೇಳಿ ಬಂದಿತು. ಹುತಾತ್ಮ ವೀರ ಯೋಧರ ಕುಟುಂಬಗಳ ನೋವು ಮುಗಿಲು ಮುಟ್ಟಿತ್ತು. ಅವರಿಗಾಗಿ ಪ್ರತಿಯೊಬ್ಬ ಭಾರತೀಯನ ಮನ ಮಿಡಿದಿತ್ತು. ಯೋಧರ ಪತ್ನಿಯರು ತಾವೇ ಗನ್ ಹಿಡಿದು ಹೋಗಿ ಉಗ್ರರನ್ನು ಕೊಲ್ಲುತ್ತೇವೆ ಎಂದು ತಮ್ಮ ನೋವನ್ನು ಹೊರ ಹಾಕಿದ್ದರು. ಧಾಳಿಯ ನಂತರ ಸರ್ಕಾರ ಸುಮ್ಮನಿದ್ದಾಗ ಹಲವರು ಅದನ್ನು ಟೀಕೆ ಮಾಡಿದ್ದರು.

ಆದರೆ ಮೋದಿಯವರ ಸರ್ಕಾರ ಹುತಾತ್ಮರಾದ ವೀರ ಯೋಧರ ಹನ್ನೊಂದನೇ ದಿನದ ಕಾರ್ಯ ಮುಗಿಯುವ ಮೊದಲೇ ಉಗ್ರರಿಗೆ ತಕ್ಕ ಉತ್ತರವನ್ನು ಕೊಟ್ಟಿದೆ. ಇಂದು ಮುಂಜಾನೆ ಬೆಳಿಗ್ಗೆ 3:30 ರ ವೇಳೆಯಲ್ಲಿ ಉಗ್ರರ ಅಡಗು ತಾಣಗಳ ಮೇಲೆ ಮಿಂಚಿನ ಧಾಳಿಯನ್ನು ನಡೆಸಿದೆ. ಉಗ್ರರಿಗೆ ತಕ್ಕ ಉತ್ತರವನ್ನು ನೀಡಬೇಕೆಂದು ಕಾಯುತ್ತಿದ್ದ ಭಾರತೀಯರಿಗೆ ಇಂದು ಒಂದು ಹೆಮ್ಮೆ ಹಾಗೂ ಗರ್ವ ಪಡುವ ದಿನ ಇದಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ನೆಟ್ಟಿಗರು ಸಂಭ್ರಮ ಪಟ್ಟಿದ್ದಾರೆ. ಉಗ್ರರಿಗೆ ಭಯಾನಕ ಉತ್ತರ ನೀಡಿದ ಭಾರತೀಯ ಸೇನೆ ಪುಲ್ವಾಮ ಧಾಳಿಗೆ ಪ್ರತೀಕಾರವನ್ನಿ ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ವಿಡಿಯೋ ನೋಡಿ:

ಧಾಳಿಗೆ ಭಾರತೀಯ ವಾಯುಸೇನೆಯ ಮೀರಜ್ 2000 ಎಂಬ ಹನ್ನೆರಡು ಯುದ್ಧ ವಿಮಾನಗಳನ್ನು ಬಳಸಿ ಪಾಕಿಸ್ತಾನದ ಗಡಿಯಲ್ಲಿದ್ದ ಉಗ್ರರ ತಾಣಗಳನ್ನು ಸುಟ್ಟು ಭಸ್ಮವಾಗಿದೆ. 21 ನಿಮಿಷದಲ್ಲಿ ಸುಮಾರು 200-300 ರಿಂದ ಉಗ್ರರು ಸತ್ತು ಶವಗಳಾಗಿದ್ದಾರೆ. ಭಾರತೀಯ ಯೋಧರ ಕುಟುಂಬಗಳ ನೋವಿಗೆ ಪ್ರತೀಕಾರವನ್ನು ತೀರಿಸಿಕೊಳ್ಳುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಇನ್ನು ಗಡಿಯಲ್ಲಿ ಹೈ ಅಲರ್ಟ್ ಅನ್ನು ಘೋಷಿಸಲಾಗಿದೆ. ಪಾಕಿಸ್ತಾನದ ಕಡೆಯಿಂದ ಯಾವುದೇ ಸಮಯದಲ್ಲಾದರೂ ಪ್ರತೀಕಾರದ ಧಾಳಿ ನಡೆಯಬಹುದು ಎಂದು ಈಗಾಗಲೇ ಹೈ ಅಲರ್ಟನ್ನು ಘೋಷಿಸಲಾಗಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...