ನವದೆಹಲಿ: ನಮ್ಮ ದೇಶ ಸುರಕ್ಷಿತರ ಕೈಯಲ್ಲಿದೆ, ಯಾರೂ ಆತಂಕ ಪಡುವ ಅಗತ್ಯ ಇಲ್ಲ ಅಂತಾ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಜಸ್ಥಾನದ ಚುರುವಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಭಾಷಣದ ವೇಳೆ ಮಾತನಾಡಿದ ಅವರು, ನಾವೆಲ್ಲರೂ ನಮ್ಮ ಯೋಧರಿಗೆ ನಮನ ಸಲ್ಲಿಸೋಣ. ನಮ್ಮ ದೇಶ ಸುರಕ್ಷಿತವಾಗಿದೆ ಅದಕ್ಕೆ ಕಾರಣ ಯೋಧರು ಅಂತಾ ಹೇಳಿದರು. ಅದಕ್ಕೆ ದೇಶದ ಜನರಿಗೆ ಭರವಸೆ ನೀಡುತ್ತೇನೆ. ನಮ್ಮ ದೇಶ ಸುರಕ್ಷಿತರ ಕೈಯಲ್ಲಿದೆ ಅಂತಾ ಹೇಳಿದರು.
2014 ರಲ್ಲಿ ನಾನು ಚುರುವಿನಲ್ಲಿ ಹೇಳಿದ್ದೆ, ಅದನ್ನ ಇಂದು ನೆನಪಿಸಿಕೊಳ್ಳುತ್ತೇನೆ. ನಾನು ಯಾವತ್ತೂ ದೇಶ ತಲೆ ತಗ್ಗಿಸುವಂತೆ ಮಾಡಲ್ಲ ಎಂದು. ದೇಶದ ಜನರಿಗೆ ಮಾತು ಕೊಡ್ತೇನೆ ನಾನು ಯಾವತ್ತೂ ಭಾರತ ಮಾತೆ ತಲೆ ತಗ್ಗಿಸಲು ಬಿಡಲ್ಲ. ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಬೆದರಿಕೆ ಒಡ್ಡಿದರೆ ಯಾರೂ ಹೆದರಲ್ಲ ಅಂತಾ ಹೇಳಿದರು.

No comments:
Post a Comment