ABC

Tuesday, 12 February 2019

ಅನುಮತಿ ಇಲ್ಲದೆ ಕೇಂದ್ರ ಹಣಕಾಸು ಸಚಿವಾಲಯದಿಂದ 1157ಕೋಟಿ ಹಣ ಖರ್ಚು, ಸಿಎಜಿ ವರದಿ.

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಹಣಕಾಸು ಸಚಿವಾಲಯ 2017-18ರ ಅವಧಿಯಲ್ಲಿ ಸಂಸತ್ತಿನ ಅನುಮೋದನೆ ಪಡೆಯದೇ 1157 ಕೋಟಿ ರುಪಾಯಿ ಖರ್ಚು ಮಾಡಿದೆ ಎಂದು ಮಹಾಲೇಖ ಮತ್ತು ಲೆಕ್ಕಪರಿಶೋಧಕ(ಸಿಎಜಿ) ವರದಿ ಮಂಗಳವಾರ ಹೇಳಿದೆ. ಈ ವರದಿ ಬಹಳ ಗಂಭೀರವಾದ ವಿಷಯವನ್ನು ಹೇಳುತ್ತಿದೆ ಯಾಕಂದರೆ ಅನುಮತಿ ಪಡೆಯದೆ ಇಷ್ಟೊಂದು ಕೋಟಿ ಹಣ ಹೇಗೆ ಮತ್ತು ಯಾಕಾಗಿ ಖರ್ಚು ಮಾಡಲಾಯಿತು ಎಂದು ದೇಶದ ಜನತೆ ಮುಂದೆ ಇಡಬೇಕಾದುದು ಆಡಳಿತ ಮಾಡುವ ಸರ್ಕಾರದ ಹೊಣೆಗಾರಿಕೆ.

ಹೆಚ್ಚುವರಿ ವೆಚ್ಚಕ್ಕೆ ಶಾಸಕಾಂಗದ ಅನುಮೋದನೆ ಪಡೆಯುವಲ್ಲಿ ವಿಫಲವಾದ ಹಣಕಾಸು ಸಚಿವಾಲಯ ಹೊಸ ಸೇವಾ,  ಹೊಸ ಸಲಕರಣೆಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ವ್ಯವಸ್ಥೆಯನ್ನು ರೂಪಿಸಲಿಲ್ಲ, ಇದು ಹೆಚ್ಚುವರಿ ಖರ್ಚಿಗೆ ಕಾರಣವಾಯಿತು ಎಂದು ಸಮರ್ಥಿಸಿದೆ. ಅನುಮೋದನೆ ಪಡೆಯದೆ 2017-18ರ ಅವಧಿಯಲ್ಲಿ 1,156.80 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ಹಣಕಾಸು ಲೆಕ್ಕ ಪರಿಶೋಧನಾ ವರದಿ ಹೇಳಿದೆ. ಶಾಸಕಾಂಗದ ಅನುಮೋದನೆ ಪಡೆಯುವಲ್ಲಿ ವಿಫಲವಾದ ಹಣಕಾಸು ಸಚಿವಾಲಯದ ಕಾರ್ಯವೈಖರಿಗೆ ಸಿಎಜಿ ಛೀಮಾರಿ ಹಾಕಿದೆ.
ಇನ್ನು ರಾಜಕೀಯ ಸಮರಗಳಿಗೆ ಕಾರಣವಾದ ರಫೇಲ್ ಯುದ್ಧ ವಿಮಾನ ಖರೀದಿ ಬಗೆಗೆ ಇನ್ನಷ್ಷೇ ಮಹಾಲೇಖ ಮತ್ತು ಲೆಕ್ಕಪರಿಶೋಧಕ(ಸಿಎಜಿ) ತಂಡ ವರದಿಯನ್ನು ನೀಡಬೇಕಾಗಿದೆ. ಅದು ಯಾವ ರೀತಿಯ ವರದಿ ಕೊಡುತ್ತದೆ ಮತ್ತು ಎಷ್ಟು ಕೋಟಿ ಹೆಚ್ಚುವರಿ ದೇಶಕ್ಕೆ ಹೊರೆಯನ್ನು ನೀಡಿದೆ ಎಂದು ಕಾದು ನೋಡಬೇಕಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...