ABC

Tuesday, 12 February 2019

ಸದನದಲ್ಲಿ ಆಪರೇಷನ್ ಆಡಿಯೋ ವಿಚಾರದಲ್ಲಿ: ಕುಮಾರಸ್ವಾಮಿಯವರು ಹೇಳಿದ್ದೇನು?

ಬೆಂಗಳೂರು: ವಿಪಕ್ಷಗಳು ನನ್ನನ್ನೇ ಆರೋಪಿ ಎನ್ನುತ್ತಿವೆ. ನನ್ನನ್ನೂ ಸೇರಿಸಿ ತನಿಖೆಯಾಗಲಿ. ನಾನು ಅಪರಾಧ ಮಾಡಿದ್ದರೆ ತಲೆ ಬಾಗುತ್ತೇನೆ, ಶಿಕ್ಷೆ ಅನುಭವಿಸುತ್ತೇನೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಮಂಗಳವಾರವೂ ಆಪರೇಷನ್ ಕಮಲದ ಆಡಿಯೋ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸದನದಲ್ಲಿ ಮಾತನಾಡಿದರು. ಪ್ರತಿಪಕ್ಷದ ಸದಸ್ಯರು ಎಸ್‌ಐಟಿ ತನಿಖೆ ಬೇಡ ಎಂದು ಪಟ್ಟು ಹಿಡಿದರು.

ಪ್ರತಿಪಕ್ಷ ಸದಸ್ಯರ ಮಾತಿನ ಬಳಿಕ ಸಂಜೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಪ್ರತಿಕ್ರಿಯೆ ನೀಡಿದರು. 'ಪಕ್ಷಾಂತರ ನಿಷೇಧ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದೇಶಕ್ಕೆ ಮಾದರಿಯಾದ ಆದೇಶ ರಾಜ್ಯದಿಂದ ಹೋಗಬೇಕಿದೆ' ಎಂದರು.'ಆಡಿಯೋ ಬಿಡುಗಡೆ ಮಾಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಂಡನಾರ್ಹ ಅಪರಾಧ ಎಸಗಿದ್ದಾರೆ. 30 ರಿಂದ 32 ನಿಮಿಷದ ಆಡಿಯೋವನ್ನು 2 ನಿಮಿಷಕ್ಕೆ ಕಟ್ ಪೇಸ್ಟ್ ಮಾಡಿ ಷಡ್ಯಂತ್ರ ಮಾಡಿ, ಮಾಧ್ಯಮಗಳಲ್ಲಿ ಬಿತ್ತರಿಸಲು ನೀಡಿದ್ದಾರೆ' ಎಂದು ಬಿ.ಎಸ್.ಯಡಿಯೂರಪ್ಪ ಅವರು ಸದನದಲ್ಲಿ ಆರೋಪ ಮಾಡಿದರು.
ಯಾರ ಮೇಲೂ ದ್ವೇಷದ ರಾಜಕಾರಣ ಮಾಡಲು ನಾನು ಸಿದ್ಧನಿಲ್ಲ. ವಿಪಕ್ಷಗಳ ನಾಯಕರು, ಸದಸ್ಯರು ಮಾಧ್ಯಗಳ ದಿಕ್ಕು ತಪ್ಪಿಸುವ ಕೆಲವನ್ನು ಮಾಡಿದರು. ಸರ್ಕಾರ ಇಂದು ಬೀಳುತ್ತೆ. ನಾಳೆ ಬೀಳುತ್ತೆ ಎಂದು ಗಡುವು ನೀಡುತ್ತಿದ್ದರು. ಬಜೆಟ್ ಮಂಡನೆಯೇ ಆಗಲ್ಲ ಎಂದರು.
ಎರಡು ನಿಮಿಷಗಳ ಆಡಿಯೋವನ್ನು ಅರಗಿಸಿಕೊಳ್ಳಲು ನಿಮಗೆ ಆಗಿಲ್ಲ. ಇನ್ನು ಪೂರ್ಣ ಆಡಿಯೋ ಬಿಡುಗಡೆ ಮಾಡಿದರೆ ಏನಾಗುತ್ತಿತ್ತು. ಅದನ್ನು ಬಿಡುಗಡೆ ಮಾಡೋಣ ಬಿಡಿ.
ಶಿಕ್ಷೆ ಅನುಭವಿಸುತ್ತೇನೆ:
ಅಧ್ಯಕ್ಷರು ಸೋಮವಾರ ಸಲಹೆ ನೀಡಿದಂತೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿ. ಘಟನೆಗಳಲ್ಲಿ ನನ್ನಿಂದಲೇ ತಪ್ಪಾಗಿದ್ದರೆ ನನ್ನನ್ನೂ ಸೇರಿಸಿಕೊಂಡು ತನಿಖೆಯಾಗಲಿ. ನಾನು ಅಪರಾಧ ಮಾಡಿದ್ದರೆ ತಲೆ ಬಾಗುತ್ತೇನೆ. ಶಿಕ್ಷೆ ಅನುಭವಿಸುತ್ತೇನೆ.
ಅತಂತ್ರ ಫಲಿತಾಂಶ ಬಂದಾಗ ನನ್ನ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಶಾಸಕರು ಒಮ್ಮತದ ನಿರ್ಣಯಕ್ಕೆ ಬಂದರು. ನಾಯಕರ ಉದ್ದೇಶ ಅರ್ಥಮಾಡಿಕೊಂಡಿದ್ದೇನೆ. ಸಿದ್ದರಾಮಯ್ಯ ನಮ್ಮ ನಾಯಕ, ಅವರನ್ನು ನೆಚ್ಚಿಕೊಂಡು ಕೆಲ ಶಾಸಕರು ಗೆದ್ದು ಬಂದಿದ್ದಾರೆ.
ಸಿದ್ದರಾಮಯ್ಯ ನಾಯಕತ್ವದಲ್ಲಿ ಸಭೆ ಮಾಡಿ, ಚರ್ಚೆ ನಡೆಸಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಪರಸ್ಪರ ಸಂಘರ್ಷದ ಹೋರಾಟದಿಂದಲೇ ನಮಗೆ ಶಕ್ತಿ ಬಂದಿದೆ.* ನಾವು ಬಡಿದಾಡಿಕೊಳ್ಳುವ ತನಕ ನೀವು ಕಾಯಬೇಕಿತ್ತು. ಏಕೆ ಆತುರ ಪಟ್ಟಿರಿ. ಪ್ರಾಮಾಣಿಕ ರಾಜಕಾರಣದ ಬಗ್ಗೆ ಎಲ್ಲರೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಪಕ್ಷಾಂತರ ನಿಷೇಧ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದೇಶಕ್ಕೆ ಮಾದರಿಯಾದ ಆದೇಶ ರಾಜ್ಯದಿಂದ ಬರಬೇಕು

ವಿಪಕ್ಷ ನನ್ನನ್ನೇ ಆರೋಪಿ ಎನ್ನುತ್ತಿದೆ. ನನ್ನನ್ನೂ ಸೇರಿಸಿ ತನಿಖೆಯಾಗಲಿ. ನನ್ನಿಂದಲೇ ತಪ್ಪಾಗಿದ್ದರೆ ತನಿಖೆಯಾಗಲಿ. ನಾನು ಅಪರಾಧ ಮಾಡಿದ್ದರೆ ತಲೆ ಬಾಗುತ್ತೇನೆ. ಶಿಕ್ಷೆ ಅನುಭವಿಸುತ್ತೇನೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...