ABC

Wednesday, 13 February 2019

ಆಪರೇಷನ್ ಆಡಿಯೋ ಪಾರ್ಟ್-2 ಬ್ಲಾಸ್ಟ್..!’ ಹೊರಬಿತ್ತು ಮತ್ತಷ್ಟು ಪೂರ್ಣ ಮಾಹಿತಿ.

ಆಪರೇಷನ್ ಕಮಲದ ಆಡಿಯೋದ ಪಾರ್ಟ್-2 ಬಿಡುಗಡೆಯಾಗಿದ್ದು ವಿಪಕ್ಷ ಬಿಜೆಪಿಗೆ ಮತ್ತಷ್ಟು ಸಂಕಷ್ಟ  ತಂದೊಡ್ಡಿದೆ. ಸಿಎಂ ಎಚ್‍ಡಿ ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಭಾಷಣೆಯುಳ್ಳ 3 ನಿಮಿಷಗಳ ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿರುವ ಬೆನ್ನಲ್ಲೇ ಈಗ 80 ನಿಮಿಷಗಳುಳ್ಳ ಸಂಪೂರ್ಣ ಆಡಿಯೋವನ್ನು ಬಹಿರಂಗಪಡಿಸಿದ್ದಾರೆ. 40,40 ನಿಮಿಷಗಳುಳ್ಳ ಎರಡು ಆಡಿಯೋವನ್ನು ರಿಲೀಸ್ ಮಾಡಲಾಗಿದೆ. ಅದರಲ್ಲಿ ದೇವದುರ್ಗದ ಐಬಿ ಆಪರೇಷನ್ ಕಮಲದ ಸಂಪೂರ್ಣ ರಹಸ್ಯ ಬಯಲಾದಂತಾಗಿದೆ.ಬಿಡುಗಡೆಯಾದ ಆಪರೇಷನ್ ಕಮಲದ ಆಡಿಯೋದಲ್ಲಿ ಮತ್ತಷ್ಟು ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. 40 ನಿಮಿಷಗಳ ಆಡಿಯೋದಲ್ಲಿ ಜೆಡಿಎಸ್, ದೇವೇಗೌಡರು, ಮುಖ್ಯಮಂತ್ರಿ ಮತ್ತಿತರರ ಕುರಿತು ಅವಹೇಳನಕಾರಿಯಾಗಿಯೂ ಮಾತನಾಡಲಾಗಿದೆ. ಈ ಆಡಿಯೋದಲ್ಲಿ ಯಡಿಯೂರಪ್ಪ, ಶಿವನಗೌಡ, ಹಾಸನ ಶಾಸಕ ಪ್ರೀತಮ್ ಗೌಡ, ಶರಣಗೌಡ ಅವರೆಲ್ಲರ ಸಂಭಾಷಣೆ ಇರುವ ಆಡಿಯೋ ಇದಾಗಿದೆ.“..ಶರಣಗೌಡನ ಜೊತೆ ನಿಮ್ಮ ತಂದೆಗೆ ರಾಜೀನಾಮೆ ನೀಡಲು ಹೇಳು, ನೀನು ಚುನಾವಣೆಗೆ ನಿಲ್ಲು, ನಮ್ಮ ಜೊತೆ ಈಗಾಗಲೇ ಮುಂಬೈನಲ್ಲಿ 10 ಶಾಸಕರಿದ್ದಾರೆ. ನಿನಗೆ ಅನುಮಾನವಿದ್ದರೆ ಒಮ್ಮೆ ಮುಂಬೈಗೆ ಹೋಗಿ ನೋಡಿಕೊಂಡು ಬಾ ಆಮೇಲೆ ಮಾತನಾಡು, ನಿಮಗೆ ಫೈನಾನ್ಸಿಯಲ್ ಸೆಟಲ್‍ಮೆಂಟ್ ಎಲ್ಲಾ ವಿಜಯೇಂದ್ರ ನೋಡಿಕೊಳ್ಳುತ್ತಾರೆ..” ಹೀಗೆ 80 ನಿಮಿಷ ಆಡಿಯೋದಲ್ಲಿ ಆಪರೇಷನ್ ಕಮಲ ಹೇಗೆ ನಡೆಯುತ್ತದೆ ಎನ್ನುವುದನ್ನು ವಿವರವಾಗಿ ತಿಳಿಯುತ್ತದೆ. ಯಡಿಯೂರಪ್ಪ ಮಾತನಾಡುವುದು ಬಳಿಕ ಫೈನಾನ್ಸಿಯಲ್ ಬಗ್ಗೆ ವಿಜಯೇಂದ್ರ ನೋಡಿಕೊಳ್ಳುವುದು, ಹೇಗೆ ಮಾಡ್ತಿದಾರೆ, ಅದರಲ್ಲಿ ಹಾಸನ ಶಾಸಕ ಪ್ರೀತಮ್ ಗೌಡ ಕೂಡ ದೇವೇಗೌಡರ ಬಗ್ಗೆ ಮಾತನಾಡುವ ಸಂಭಾಷಣೆಯೂ ಕೂಡ ಇದೆ. ನಾನು ಕೂಡಾ ಹಣಕ್ಕೆ ಜವಾಬ್ದಾರಿಯಾಗಿರುತ್ತೇನೆಂದು ಪ್ರೀತಮ್ ಗೌಡ ಹೇಳಿರುವುದು ಸಂಭಾಷಣೆಯಲ್ಲಿದೆ. ಒಟ್ಟಾರೆಯಾಗಿ ಈಗ ಬಿಡುಗಡೆಯಾಗಿರುವ ಆಪರೇಷನ್ ಕಮಲದ ಆಡಿಯೋ ಪಾರ್ಟ್-2 ಪ್ರಕರಣದ ಮತ್ತಷ್ಟು ಸತ್ಯವನ್ನು ಹೊರಗೆಡವಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...