ABC

Wednesday, 13 February 2019

ಆಡಿಯೋ ಪ್ರಕರಣ ದೂರು ದಾಖಲಿಸಿದ: ಶರಣಗೌಡ ಪಾಟೀಲ್.

ರಾಯಚೂರು: ದೇವದುರ್ಗದಲ್ಲಿನ ಅಪರೇಷನ್ ಕಮಲದ ಆಡಿಯೋ ಪ್ರಕರಣ ಹಿನ್ನೆಲೆಯಲ್ಲಿ ಇಂದು ಶರಣಗೌಡ ರಾಯಚೂರಿನ ಎಸ್ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತಮ್ಮ ನೂರಾರು ಜನ ಬೆಂಬಲಿಗರೊಂದಿಗೆ ಆಗಮಿಸಿದ ಶರಣಗೌಡ, ಮೂರು ಪುಟಗಳ ದೂರು ಹಾಗೂ ಆಡಿಯೋ ಸಿಡಿಯನ್ನ ಎಸ್ಪಿ ಡಿ.ಕಿಶೋರ್ ಬಾಬು ರವರಿಗೆ ದೂರು ಸಲ್ಲಿಸಿದರು.ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರೇಷನ್ ಕಮಲ ಆಡಿಯೋ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಕೆ.ಶಿವನಗೌಡ ನಾಯಕ, ಪ್ರೀತಮ್​​​​ ಗೌಡ, ಮರಂಕಲ್ ಎನ್ನುವವರ ಮೇಲೆ ದೂರು ಸಲ್ಲಿಸಿದ್ದೇನೆ.

ಶಾಸಕರಾದ ಕೆ.ಶಿವನಗೌಡ ನಾಯಕ ಬಿಎಸ್‌ವೈ ಜೊತೆ ಭೇಟಿ ಮಾಡಲು ಪದೆ ಪದೆ ಕರೆ ಮಾಡಿ ಒತ್ತಾಯ‌ ಮಾಡುತ್ತಿದ್ದರು. ಈ ವಿಚಾರವನ್ನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಮನಕ್ಕೆ ತಂದಾಗ, ಅವರಾಗಿಯೇ ಕರೆದರೆ ಹೋಗು ಎಂದು ಹೇಳಿದರು. ಹೀಗಾಗಿ ಬಹಳ ಒತ್ತಡ ಹೇರಿರುವುದರಿಂದ ದೇವದುರ್ಗ ಪ್ರವಾಸಿ ಮಂದಿರಕ್ಕೆ ತೆರಳಿ ಮಾತುಕತೆ ನಡೆಸಿದ್ದೇನೆ. ನನಗೆ ಏನೇಲ್ಲಾ ಆಮಿಷವೊಡ್ಡಿದ್ದಾರೋ, ಅದನೆಲ್ಲಾ ದೂರಿನಲ್ಲಿ ವಿವರಿಸಿದ್ದೇನೆ ಎಂದರು.ಇನ್ನು ಸರ್ಕಾರ ಇಂದು ಬೀಳುತ್ತೆ, ನಾಳೆ ಬೀಳುತ್ತೆ ಎಂದು ಹೇಳುವ ಮೂಲಕ ಸುಗಮವಾಗಿ ನಡೆಯುತ್ತಿರುವ ಸರ್ಕಾರಕ್ಕೆ ಬಿಜೆಪಿಯವರು ತೊಂದರೆ ನೀಡುತ್ತಿದ್ದರು. ಇದಕ್ಕಾಗಿ ಪ್ರಿಪ್ಲಾನ್ ಮಾಡಿಕೊಂಡು ಅಪರೇಷನ್ ಕಮಲದ ಆಡಿಯೋವನ್ನ ರಿಲೀಸ್ ಮಾಡಲಾಗಿದೆ. ಸದ್ಯ ಈ ಪ್ರಕರಕ್ಕೆ ಸಂಬಂಧಿಸಿದ್ದಂತೆ ಎಸ್ಪಿಯವರಿಗೆ ಸಂಪೂರ್ಣವಾಗಿ ವಿವರಿಸಿದ್ದು, ದೇವದುರ್ಗದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ದೇವದುರ್ಗ ಠಾಣೆಗೆ ತೆರಳಿ ಪ್ರಕರಣ ದಾಖಲಿಸುವುದಾಗಿ ಹೇಳಿದರು. ಈ ವೇಳೆ ಶರಣಗೌಡ ಬೆಂಬಲಿಗರು ಸಾಥ್ ನೀಡಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...