ABC

Wednesday, 20 February 2019

ಮತ್ತೊಂದು ದೊಡ್ಡ ದಾಳಿಗೆ ಉಗ್ರರ ಸಂಚು – ಕಣಿವೆ ರಾಜ್ಯಕ್ಕೆ ನುಗ್ಗಿದ್ದಾರೆ 21 ಮಂದಿ ಉಗ್ರರು.

ಶ್ರೀನಗರ(ಜಮ್ಮು-ಕಾಶ್ಮೀರ): 44 ಮಂದಿ ಭಾರತೀಯ ಯೋಧರನ್ನ ಬಲಿ ಪಡೆದ ಪುಲ್ವಾಮಾ ದಾಳಿ ಜಸ್ಟ್ ಟ್ರೇಲರ್ ಆಗಿದ್ದು, ಭಾರತದ ಸೇನೆಯ ಮೇಲೆ ಇನ್ನಷ್ಟು ಭೀಕರ ದಾಳಿಗೆ ಜೈಶ್ ಇ ಮೊಹಮ್ಮದ್ ಸಂಚು ರೂಪಿಸಿರುವ ಮಾಹಿತಿಯೊಂದು ಹೊರಬಿದ್ದಿದೆ.

ಜಮ್ಮು-ಕಾಶ್ಮೀರ ಮತ್ತು ಹೊರಗೆ ದಾಳಿ ಸಂಚಿನ ಸಂಬಂಧ ಗುಪ್ತಚರ ದಳಗಳಿಗೆ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್‍ನಲ್ಲೇ ಜಮ್ಮು-ಕಾಶ್ಮೀರಕ್ಕೆ ನುಸುಳಿರುವ ಜೈಶ್ ಇ ಮೊಹಮ್ಮದ್‍ನ 21 ಮಂದಿ ಉಗ್ರರು, ಒಂದು ದಾಳಿ ಕಾಶ್ಮೀರದಲ್ಲಿ ಹಾಗೂ ಉಳಿದೆರಡು ದಾಳಿಯನ್ನು ಭಾರತದ ಬೇರೆ ಕಡೆಗಳಲ್ಲಿ ಎಸಗಲು ಸಂಚು ರೂಪಿಸಿದ್ದಾರೆ.

ಜೆಇಎಂ ಪುಲ್ವಾನಾ ದಾಳಿಯ ಸಿದ್ಧತೆಯ ವೀಡಿಯೊವನ್ನು ಕೂಡಾ ಇಷ್ಟರಲ್ಲೇ ಬಿಡುಗಡೆ ಮಾಡಲಿದೆ ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ. ಸ್ಫೋಟಕ ತುಂಬಿದ್ದ ಕಾರನ್ನು ಭದ್ರತಾ ಪಡೆ ವಾಹನಗಳಿಗೆ ಡಿಕ್ಕಿ ಹೊಡೆಸಿದ 20 ವರ್ಷದ ಅದಿಲ್ ಅಹ್ಮದ್ ದಾರ್ ನನ್ನು ವೈಭವೀಕರಿಸುವುದು ಈ ದಾಳಿಯ ಪ್ರಮುಖ ಉದ್ದೇಶವಾಗಿದೆ ಎಂಬುದಾಗಿ ಕೆಲ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಪಾಕಿಸ್ತಾನದಲ್ಲಿರುವ ಜೆಇಎಂ ನಾಯಕರು ಮತ್ತು ಕಾಶ್ಮೀರದಲ್ಲಿರುವ ಉಗ್ರರ ನಡುವೆ ಫೆಬ್ರವರಿ 16 ಮತ್ತು 17ರಂದು ನಡೆದ ಸಂಭಾಷಣೆಯನ್ನು ಕದ್ದಾಲಿಕೆ ಮಾಡಿದಾಗ ಈ ಅಂಶ ತಿಳಿದುಬಂದಿದೆ ಎಂದು ಗುಪ್ತಚರ ವಿಭಾಗದ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...